
ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿ ಮತ್ತು ಪಕ್ಷದ ಸಂಪಾಜೆ ವಲಯ ಚುನಾವಣಾ ಸಮಿತಿಯ ಜಂಟಿ ಸಭೆಯು ಸಂಪಾಜೆಯಲ್ಲಿ ವಲಯಾದ್ಯಕ್ಷ ಮಹಮ್ಮದ್ ಕುಂಞಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪಾಜೆ ವಲಯ ಉಸ್ತುವಾರಿ ಗಳಾದ ಅಶ್ರಫ್ ಟರ್ಲಿ ಮತ್ತು ಫಾರೂಕ್ ಕಾನಕ್ಕೋಡ್ ರವರು ಸಭೆಯ ವಿಷಯಗಳನ್ನು ಮಂಡಿಸಿದರು ಮತ್ತು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಪರಿಚಯವನ್ನು ಮಾಡಿ ಮಾಹಿತಿಯನ್ನು ನೀಡಿದರು.
ಅದೇ ರೀತಿ ಸಂಪಾಜೆ ಗ್ರಾಮ ಪಂಚಾಯತ್ ನ ಹದಿನಾಲ್ಕು ಕ್ಷೇತ್ರಗಳಲ್ಲಿ ಒಟ್ಟು ಏಳು ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸುವುದೆಂದು ತೀರ್ಮಾನಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪಡೆಯಲಾಯಿತು. ಹಾಗೂ ಮುಂಬರುವ ಗ್ರಾ.ಪಂ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕೆಂದು ಬಹಳಷ್ಟು ವಿಸ್ತೃತವಾದ ಚರ್ಚೆ ನಡೆಯಿತು.
ಸಭೆಯಲ್ಲಿ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಹಾಗೂ ಪಕ್ಷದ ಸುಳ್ಯ ನಗರಾಧ್ಯಕ್ಷ ಅಥಾವುಲ್ಲಾ ಕಲ್ಲುಮುಟ್ಲು ರವರು ಚುನಾವಣೆಯನ್ನು ಎದುರಿಸುವ ಕುರಿತಾಗಿ ಮಾಹಿತಿಯನ್ನು ನೀಡಿದರು. ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿ ಉಪಾಧ್ಯಕ್ಷರಾದ ಉದೈಫ, ಸಮಿತಿ ಸದಸ್ಯರಾದ ಫಾರೂಕ್ ಕಾನಕ್ಕೋಡ್, ಉವೈಸ್, ಅಜ್ಜು, ಶರೀಫ್ ಶೆಟ್ಟಿಯಡ್ಕ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.