

ದೇವಚಳ್ಳ ಗ್ರಾಮದ ಮಾವಿನಕಟ್ಟೆಯಲ್ಲಿ ನೂತನವಾಗಿ ರಬ್ಬರ್ ಉತ್ಪಾದಕರ ಸಂಘ ರಚನೆಗೊಂಡಿದ್ದು ಇದರ ಉದ್ಘಾಟನೆ ಮತ್ತು ಸೆಮಿನಾರ್ ಕಾರ್ಯಕ್ರಮ ಇಂದು ನಡೆಯಿತು. ರಬ್ಬರ್ ಬೋರ್ಡ್ ನ ಪುತ್ತೂರು ಡಿವಿಶನ್ ನ ಉಪ ರಬ್ಬರ್ ಉತ್ಪಾದಕರ ಕಮಿಷನರ್ ಚಂದ್ರನ್ ಕರಾಥ ದೀಪ ಬೆಳಗಿಸಿ, ಉದ್ಘಾಟಿಸಿದರು. ಮಾವಿನಕಟ್ಟೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಬಾಬು ಗೌಡ ಅಚಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ರಬ್ಬರ್ ಬೋರ್ಡ್ ಫೀಲ್ಡ್ ಆಫಿಸರ್ ಶೋಭಿ ಜೋಸೆಫ್ ರವರು ರಬ್ಬರ್ ಉತ್ಪಾದನೆ ಮತ್ತು ಸಮಸ್ಯೆಗಳ ಬಗ್ಗೆ ಸೆಮಿನರ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೇಶವ ಹೊಸೊಳಿಕೆ, ನಿರ್ದೇಶಕರಾದ ಪಿ.ಸಿ.ನಿತ್ಯಾನಂದ, ಕೃಷ್ಣಪ್ಪ ಗೌಡ ಮಾವಿನಕಟ್ಟೆ, ಭಾಸ್ಕರ ಮೆದು,ಚಿನ್ನಪ್ಪ ಗೌಡ ಎಂ., ಜಗತ್ ಪಾರೆಪ್ಪಾಡಿ ಹಾಗೂ ರಬ್ಬರ್ ಕೃಷಿಕರು ಉಪಸ್ಥಿತರಿದ್ದರು. ಕವಿತಾ ಚಿಕ್ಮುಳಿಯವರು ಸ್ವತಃ ತಾವೇ ರಬ್ಬರ್ ಟ್ಯಾಪಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಅನುಭವ ಹಂಚಿಕೊಂಡರು. ಕೇಶವ ಹೊಸೊಳಿಕೆ ಸ್ವಾಗತಿಸಿ, ವಂದಿಸಿದರು. ಬಾಬು ಗೌಡ ಅಚ್ರಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
