ಹಲವಾರು ವರ್ಷಗಳಿಂದ ನಗರ ಪಂಚಾಯತ್ ಎದುರಿನಲ್ಲಿ ತುಂಬಿದ್ದ ಕಸದರಾಶಿಯನ್ನು ಒಣಕಸ ಮತ್ತು ಹಸಿಕಸ ವಿಂಗಡಿಸಿ ಒಣಕಸವನ್ನು ಕಲ್ಚರ್ಪೆ ಸಾಗಿಸುವ ಪ್ರಕ್ರಿಯೆ ಇದೀಗ ಅರಂಭಗೊಂಡಿದ್ದು ಅತಿ ಶೀಘ್ರದಲ್ಲಿ ನಗರ ಪಂಚಾಯತಿಯ ಮುಂಭಾಗದಲ್ಲಿರುವ ಕಸದ ರಾಶಿಗೆ ಮುಕ್ತಿ ಸಿಗಲಿದೆ.
ಕಲ್ಚರ್ಪೆಯ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಬೇಲಿಯನ್ನು ನಿರ್ಮಿಸಿ ಅಲ್ಲಿ ಕಸವನ್ನು ಶೇಖರಿಸುವ ತಯಾರಿ ಪುನಃ ಪ್ರಾರಂಭಗೊಂಡಿದೆ. ನಗರ ಪಂಚಾಯತ್ ಅವರಣದಲ್ಲಿ ತುಂಬಿದ ಕಸವನ್ನು ಕಲ್ಚರ್ಪೆ ಸ್ಥಳೀಯ ನಿವಾಸಿಗಳನ್ನು ಮನವೊಲಿಸಿ ಕಲ್ಚರ್ಪೆ ಕೊಂಡೊಯ್ದು ಅಲ್ಲಿ ಶೇಖರಿಸುವ ಕೆಲಸವನ್ನು ಮಾಡುತ್ತೇವೆ. ಈಗಾಗಲೇ ಬರ್ನಿಂಗ್ ಮಷಿನ್ ಮೂಲಕ ಬರ್ನಿಂಗ್ ಮಾಡಲು ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ದೊರೆತಿದೆ. ಆದಷ್ಟು ಬೇಗ ಬರ್ನಿಂಗ್ ಮಿಪನ್ ಖರೀದಿಸಿ ಒಣಕಸವನ್ನು ಬರ್ನ್ ಮಾಡುವ ಕೆಲಸವನ್ನು ಮಾಡುತ್ತೇವೆ.
ಸುಳ್ಯ ನಗರದಲ್ಲಿ ಶೀಘ್ರದಲ್ಲೇ ಸ್ವಚ್ಚತಾ ಅಂದೋಲನದೊಂದಿಗೆ ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಸುಳ್ಯ ನಗರ ಪಂಚಾಯತ್ ನೂತನ ಅಧ್ಯಕ್ಷ
ವಿನಯಕುಮಾರ್ ಕಂದಡ್ಕ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಹೊಸ ವರ್ಷಕ್ಕೆ ಎಲ್ಲಾ ಕಸದ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಪ್ರಾರಂಭಿಸಿದ್ದೇವೆ ಹದಿನೈದು ದಿನದಲ್ಲಿ ಬರ್ನಿಂಗ್ ಮೆಷಿನ್ ಬರುತ್ತದೆ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೆವೆ ಎಂದು ಮುಖ್ಯಧಿಕಾರಿ ಎಂಆರ್ ಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸುಳ್ಯ ನಗರ ಪಂಚಾಯತ್ ಕಚೇರಿಯ ಮುಂಭಾಗದಿಂದ ಕಸದರಾಶಿಗೆ ಮುಕ್ತಿ ಸಿಗಲಿದೆ ಎಂದು ತಿಳಿದುಬಂದಿದೆ.