ಸುಳ್ಯ ನಗರ ಮೂರನೇ ವಾರ್ಡಿನ ಜಯನಗರ ಪರಿಸರದಲ್ಲಿ ದಲಿತ ಸಮುದಾಯದ ಸುಮಾರು 10ಕ್ಕೂ ಹೆಚ್ಚು ಕುಟುಂಬಗಳು ಚಂಡೆಮೂಲೆ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳು ಎದ್ದು ಕಾಣುವ ಈ ಕಾಲೋನಿಗೆ ಸ್ಥಳೀಯ ನ.ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡಂಕೆರಿ ಭೇಟಿ ನೀಡಿ ಅತ್ಯವಶ್ಯಕ ಸಮಸ್ಯೆಗಳ ಪರಿಹಾರ ಕಾರ್ಯಗಳನ್ನು ಒದಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಡಿಸೆಂಬರ್ 6ರಂದು ಚಂಡೆಮೂಲೆ ಪ್ರದೇಶಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು ಕುಡಿಯುವ ನೀರಿನ ವ್ಯವಸ್ಥೆಯ ಮೋಟರ್ ಕೆಟ್ಟು ಹೋಗಿರುವ ಕಾರಣ ನೀರಿಗೆ ಸಮಸ್ಯೆ ಉಂಟಾಗಿದೆ, ಅದೇ ರೀತಿ ಮನೆಯ ದಾಖಲೆ ಪತ್ರಗಳು ಕೆಲವು ಸರಿಯಿಲ್ಲದ ಕಾರಣ ಇವುಗಳನ್ನು ಸರಿಪಡಿಸಿಕೊಡುವಂತೆ ಸದಸ್ಯರನ್ನು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಜಯನಗರ ಬೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಮಚಾದೊ, ಸುಂದರ ಕುತ್ಪಾಜೆ, ಕಾಂಗ್ರೆಸ್ ಪಕ್ಷದ ಸ್ಥಳೀಯ ಸಮಿತಿಯ ಬೂತ್ ಏಜೆಂಟ್ ನಿತಿನ್ ಕೊಯಿಂಗೋಡಿ ಮೊದಲಾದವರು ಉಪಸ್ಥಿತರಿದ್ದರು.
- Tuesday
- December 3rd, 2024