
ಗಾಂಧಿನಗರ ಮಸೀದಿ ನವೀಕರಣಗೊಳ್ಳುತ್ತಿದ್ದು, ಇದಕ್ಕಾಗಿ ಮಸೀದಿ ಪ್ರವೇಶ ದ್ವಾರದ ಬಳಿ ಕಾಣಿಕೆ ಡಬ್ಬಿ ಇರಿಸಲಾಗಿತ್ತು. ಇವತ್ತು ಸಂಜೆ 5.30 ರವೇಳೆಗೆ ಇದು ಕಾಣೆಯಾಗಿದ್ದು, ಸುಮಾರು 20 ಸಾವಿರದಷ್ಟು ಹಣವಿದ್ದಿರಬಹುದೆಂದು ಅಂದಾಜಿಸಲಾಗಿದೆ. ಮಸೀದಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಸರಿಯಾದ ದಿಶೆಗೆ ಇಲ್ಲದ ಕಾರಣ ಕಳ್ಳತನ ನಡೆದ ಘಟನೆಯ ದೃಶ್ಯಾವಳಿ ಕಂಡುಬರಲಿಲ್ಲ ಎಂದು ತಿಳಿದುಬಂದಿದೆ.