Ad Widget

ಸುಬ್ರಹ್ಮಣ್ಯ : ಡಾ.ಬಿ.ಆರ್ ಅಂಬೇಡ್ಕರ್ ಪುಣ್ಯಸ್ಮರಣೆ – ಸಾಮಾಜಿಕ ಸಾಮರಸ್ಯ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 64 ನೇ ಪುಣ್ಯಸ್ಮರಣೆಯ ಅಂಗವಾಗಿ ಇಂದು ಸಾಮಾಜಿಕ ಸಾಮರಸ್ಯ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಎ.ವಿ.ನಾಗೇಶ್ ಆದಿಸುಬ್ರಹ್ಮಣ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಟ್ಟ ವಾಲಗದಕೇರಿ ವಹಿಸಿದ್ದರು. ಸುರೇಶ್ ಪರ್ಕಳ ಬೌದ್ಧಿಕ್ ನೀಡಿದರು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಸೋಮಶೇಖರ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರಾದ ಬುಕ್ಷಿತ್ ನೀರ್ಪಾಡಿ, ಪದ್ಮಕುಮಾರ್ ಗುಂಡಡ್ಕ, ಅಜಿತ್ ರೈ ಕಡಬ,ರಕ್ಷಿತ್ ಪರಮಲೆ, ಕುಕ್ಕೆ ಸುಬ್ರಹ್ಮಣ್ಯ ಘಟಕದ ನಗರ ಕಾರ್ಯದರ್ಶಿಯಾದ ಇಲೈಅರಸ್.ಎಸ್, ಪುತ್ತೂರು ಜಿಲ್ಲಾ ಸಂಚಾಲಕರಾದ ಹಿತೇಶ್ ಕಟ್ರಮನೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇಲೈಅರಸ್ ಸ್ವಾಗತಿಸಿ, ಸೌಜನ್ಯ.ಜಿ.ಪಿ ವಂದಿಸಿದರು. ಲೋಹಿತ್.ಎಂ.ಡಿ ನಿರೂಪಿಸಿದರು. ( ವರದಿ : ಸೌಜನ್ಯ ಸುಬ್ರಹ್ಮಣ್ಯ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading