
ವಿಶ್ವ ಹಿಂದೂ ಪರಿಷತ್ ಭಜರಂಗದಳ, ಭಗತ್ ಸಿಂಗ್ ಶಾಖೆ ಗುತ್ತಿಗಾರು ಇದರ ವತಿಯಿಂದ ಡಿ.1ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಶಾಖೆಯ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಕಾರ್ಯದರ್ಶಿ ದಯಾನಂದ ಕನ್ನಡ್ಕ, ಉಪಾಧ್ಯಕ್ಷ ಚಂದ್ರಶೇಖರ್ ಪಾರೆಪ್ಪಾಡಿ ಬಜರಂಗದಳದ ಸಂಯೋಜಕರಾದ ಹರ್ಷಿತ್ ಕಡ್ತಲ್ ಕಜೆ ಮತ್ತು ಸಚಿನ್ ಮೊಟ್ಟೆ ಹಾಗೂ ದಾಮೋದರ್ ತುಪ್ಪದ ಮನೆ ಉಪಸ್ಥಿತರಿದ್ದರು.
