ಪಂಜದ ಇತಿಹಾಸದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ವಿನೂತನ ಮಾದರಿಯ PPL -2020 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಡಿ.13 ರಂದು ನಡೆಯಲಿದೆ
ಸದಾ ಕ್ರೀಡೆಯ ಜೊತೆ ಜೊತೆಯಲ್ಲಿ ಸಮಾಜ ಸೇವೆಗೂ ಮಹತ್ವವನ್ನು ನೀಡಿ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಹೊಂದಿರುವ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಕನಸಿನ PPL -2020 ಕ್ರಿಕೆಟ್ ಪಂದ್ಯಾಕೂಟದಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ.
ನ.29 ರಂದು ವಿ.ಕೆ. ರೆಸಿಡೆನ್ಸಿ ಯ ಸರ್ವಮಂಗಲ ಸಭಾಂಗಣದಲ್ಲಿ ನಡೆದ ಆಟಗಾರ ಆಯ್ಕೆ ಪ್ರಕ್ರಿಯೆಯಲ್ಲಿ ಜನತಾ ಚಿಕನ್ ಸೆಂಟರ್ ನ ರತೀಶ್ ಪಲ್ಲೋಡಿ ಮಾಲಕತ್ವದ ಜನತಾ ಸ್ಟ್ರೈಕರ್ಸ್ ,ರೈತ ಚಿಕನ್ ಸೆಂಟರ್ ನ ಜೀವನ್ ಪೈಸಾರಿ ಮಾಲಕತ್ವದ ರೈತ ರಾಯಲ್ಸ್ ,ಪ್ರಗತಿ ಚಿಕನ್ ಸೆಂಟರ್ ನ ಉದಯಕುಮಾರ್ ಹುದೇರಿ ಮಾಲಕತ್ವದ ಪ್ರಗತಿ ವಾರಿಯರ್ಸ್, ಲಿಖಿತ್ ಪಲ್ಲೋಡಿ ಮಾಲಕತ್ವದ ದುರ್ಗಾಪರಮೇಶ್ವರಿ ಫ್ಯುಯೆಲ್ಸ್ ,ಭರತ್ ಪೊಳೆಂಜ ಹಾಗೂ ಜಸ್ವಿತ್ ಪೊಳೆಂಜ ಮಾಲಕತ್ವದ ಜೆ ಬಿ ಅಟಾಕರ್ಸ್, ಪರಿವಾರ್ ಸ್ವೀಟ್ಸ್ ಕಾರ್ನರ್ ನ ಪ್ರಶಾಂತ್ ಎಣ್ಣೆಮಜಲು ಮತ್ತು ಪ್ರವೀಣ್ ಎಣ್ಣೆಮಜಲು ಮಾಲಕತ್ವದ ಪರಿವಾರ್ ಈಗಲ್ಸ್, ಅಟಲ್ ಜೀ ಫ್ರೆಂಡ್ಸ್ ಕೂತ್ಕುಂಜ ಮಾಲಕತ್ವದ ಅಟಲ್ ಜೀ ಕ್ರಿಕೆಟರ್ಸ್ ,ರಂಜಿತ್ ಜಬಲೆ ಮಾಲಕತ್ವದ ಮಂಗಳ ಸೂಪರ್ ಕಿಂಗ್ಸ್ ಈ ಎಂಟು ತಂಡಗಳಿಗೆ ಬಿಲ್ಡಿಂಗ್ ಮುಖಾಂತರ 8 ಆಟಗಾರರನ್ನು ಆಯಾ ತಂಡದ ನಾಯಕರು ಹಾಗೂ ಮಾಲಕರ ಸಮ್ಮುಖದಲ್ಲಿ ಅವರಿಗೆ ನೀಡಲಾದ 500 ನಾಣ್ಯಗಳಿಂದ ಖರೀದಿಸಲಾಯಿತು. ಸುಬ್ರಹ್ಮಣ್ಯ, ಅಲೆಕ್ಕಾಡಿ ,ಏನೆಕಲ್ ಮತ್ತು ಕಾಣಿಯೂರು ತಂಡಗಳ ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಿ ಪ್ರತಿ ತಂಡಕ್ಕೆ 3 ಆಟಗಾರರಂತೆ ಮತ್ತು ಸ್ಥಳೀಯ ಆಟಗಾರರ ಪಟ್ಟಿಯಲ್ಲಿ ಒಬ್ಬ ಹೋಮ್ ಐಕಾನ್ ನಂತೆ ಎಲ್ಲಾ ತಂಡಗಳಿಗೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ತಂಡಗಳ ಮಾಲಕರು ನಾಯಕರು ಮತ್ತು ಪಂದ್ಯಾಕೂಟದ ಆಯೋಜಕರು ಹಾಜರಿದ್ದರು.