
ಕಳಂಜ ಗ್ರಾಮದ ತಂಟೆಪ್ಪಾಡಿಯ ‘ನಿನಾದ ಸಾಂಸ್ಕೃತಿಕ ಕೇಂದ್ರ’ದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಮಾನಿಷಾದ ಎಂಬ ಕಾಲಮಿತಿ ಯಕ್ಷಗಾನ ಜರುಗಿತು. ಈ ಸಂದರ್ಭದಲ್ಲಿ ಯಕ್ಷಾಭಿಮಾನಿಗಳು, ಕಲಾಸಕ್ತರು ಉಪಸ್ಥಿತರಿದ್ದರು.

