ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ರಥಬೀದಿ ಯಲ್ಲಿರುವ ಪ್ರತಿಷ್ಠಿತ ವಸ್ತ್ರ ಮಳಿಗೆಯಾದ ತಾಹಿರಾ ಸಿಲ್ಕ್ ನಲ್ಲಿ ವಸ್ತ್ರ ಖರೀದಿಸುವ ಗ್ರಾಹಕರಿಗಾಗಿ ಆಯೋಜಿಸಲಾಗಿರುವ ಲಕ್ಕಿ ಕೂಪನ್ ನ ಡ್ರಾ ನ.1 ರಂದು ನಡೆಯಿತು.
ಸಂಸ್ಥೆಯ ಮಾಲಕ ಶಾಫಿ ಕುತ್ತಮೊಟ್ಟೆಯವರ ಪುತ್ರ ಮಹಮ್ಮದ್ ಶೀಸ್ ರವರು ಡ್ರಾ ನಡೆಸಿಕೊಟ್ಟರು.
ಪ್ರಥಮ ವಿಜೇತರಾಗಿ ಜಯರಾಮ ಜಯನಗರ, ದ್ವಿತೀಯ ಅದೃಷ್ಟಶಾಲಿಯಾಗಿ ಜ್ಯೋತಿ ಮೇನಾಲ, ತೃತೀಯ ಬಹುಮಾನವನ್ನು ವಿಜಯಕುಮಾರ್ ಕಂದಡ್ಕ ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ, ಶಾಹಿದ್ ಪಾರೆ, ಕುಂಞಿರಾಮನ್ ಮೊದಲಾದವರಿದ್ದರು. ಶಾಫಿ ಕುತ್ತಮೊಟ್ಟೆ ಸ್ವಾಗತಿಸಿ, ವಂದಿಸಿದರು.