ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಇದರ ಕಾರ್ಯಕಾರಿಣಿ ಸದಸ್ಯರಾಗಿ ಶ್ರೀ ಸತೀಶ್ ಮೂಕಮಲೆ ಆಯ್ಕೆಯಾಗಿದ್ದಾರೆ. ಡಿ.1 ರಂದು ಸುಳ್ಯದ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ , ಜಿಲ್ಲಾ ಬೈಠಕ್ ನಲ್ಲಿ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಇವರು ಈ ಜವಾಬ್ದಾರಿಯನ್ನು ಘೋಷಣೆ ಮಾಡಿದರು. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಮೂಕಮಲೆ ಸತೀಶ್ ರವರು ಈ ಹಿಂದೆ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಸಂಚಾಲಕರಾಗಿ ಸಂಘಟನಾ ಕಾರ್ಯವನ್ನು ನಿರ್ವಹಿಸಿದ್ದರು .
- Thursday
- December 5th, 2024