ಸಂಪಾಜೆ ಲಯನ್ಸ್ ಕ್ಲಬ್ಬಿಗೆ ಪ್ರಾಂತ್ಯ 1ರ ಅಧ್ಯಕ್ಷರಾದ ಲಯನ್ ಸಂತೋಷ್ ಕುಮಾರ್ ಶೆಟ್ಟಿ mjfರವರು ನ.28 ರಂದು ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಪಾಜೆ ಲಯನ್ಸ್ ವತಿಯಿಂದ ನಿರ್ಮಿಸಿದ ಮಂಗ ಹಿಡಿಯುವ ಗೂಡು (Fabricated Cage)ನ್ನು ರೈತ ಹಿತರಕ್ಷಣಾ ವೇದಿಕೆ ಸಂಪಾಜೆ ಇವರಿಗೆ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮದಲ್ಲಿ ಲಯನ್ ವಾಸುದೇವ ಕಟ್ಟೆಮನೆ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಪ್ರಾಂತ್ಯ ಅಧ್ಯಕ್ಷರು, ವಲಯ 2ರ ಅಧ್ಯಕ್ಷರಾದ ಲಯನ್ ಸಂಧ್ಯಾ ಸಚಿತ್ ಕುಮಾರ್ ರೈ, ಕಾರ್ಯದರ್ಶಿ ಲಯನ್ ಶುಭ ರವೀಂದ್ರ, ಕೋಶಾಧಿಕಾರಿ ಲಯನ್ ವೆಂಕಪ್ಪ ಬಿ. ಹಾಗೂ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಇಕ್ಬಾಲ್, ಜಿಲ್ಲಾ ಗವರ್ನರ್ ರವರ ಪಿ.ಆರ್.ಒ. ಲಯನ್ ಮಂಗೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ರವರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲೆಯಲ್ಲಿ ಪಿಯು ವಿಭಾಗದಲ್ಲಿ 3 ನೇ ಸ್ಥಾನ ಪಡೆದ ಕು.ಗೀತಾರವರಿಗೆ, ಅಪಘಾತದಲ್ಲಿ ಗಾಯಗೊಂಡಿರುವ ಗೌತಮ್ ರವರಿಗೆ ಹಾಗೂ ಬಡ ಕಾರ್ಮಿಕಳಾದ ಶ್ರೀಮತಿ ಮೇರಿ ದಂಡೆಕಜೆರವರಿಗೆ ಮನೆ ನಿರ್ಮಿಸಲು ಧನಸಹಾಯದ ಚೆಕ್ ನ್ನು ವಿತರಿಸಲಾಯಿತು.
ಇದೇ ಸಮಾರಂಭದಲ್ಲಿ 2019-20ನೇ ಸಾಲಿನ ಜಿಲ್ಲೆಯ 98 ಕ್ಲಬ್ ಗಳಲ್ಲಿ ಉತ್ತಮ 10 ಕ್ಲಬ್ ಗಳ ಪೈಕಿ 10ನೇ ಸ್ಥಾನ ಪಡೆದ ಸಂಪಾಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲಯನ್ ಕಿಶೋರ್ ಕುಮಾರ್ ಪಿ.ಬಿ ಮತ್ತು ಲಯನ್ ನಳಿನಿ ಕಿಶೋರ್ ರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸುಳ್ಯ, ವಿಟ್ಲ, ಪಂಜ, ಗುತ್ತಿಗಾರು, ಜಾಲ್ಸೂರು ಲಯನ್ಸ್ ಕ್ಲಬ್ಬಿನ ಸದಸ್ಯರು ಗಳು ಹಾಗೂ ಸಂಪಾಜೆ ಕ್ಲಬ್ಬಿನ ಎಲ್ಲಾ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮವನ್ನು ಲ. ಧನು ನವೀನ್ ನಿರೂಪಣೆ ಮಾಡಿದರು.