
ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ವಿಹಿಂಪ ಭಜರಂಗದಳ ಸುಳ್ಯ ಪ್ರಖಂಡದ ಮುಕ್ಕೂರು – ಕುಂಡಡ್ಕ ಛತ್ರಪತಿ ಶಾಖೆಯ ಸದಸ್ಯರು ಪೆರುವಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಛತ್ರಪತಿ ಶಾಖೆಯ ಅಧ್ಯಕ್ಷರಾದ ಜಯಂತ ಕುಂಡಡ್ಕ, ಕಾರ್ಯದರ್ಶಿ ಕಿರಣ್, ಉಪಾಧ್ಯಕ್ಷರಾದ ಐತಪ್ಪ ಕಾನಾವು ಚಾಮುಂಡಿಮೂಲೆ, ವಿದ್ಯಾರ್ಥಿ ಪ್ರಮುಖ್ ಜನಿತ್ ಸಂಕೇಶ, ಗೋರಕ್ಷಾ ಪ್ರಮುಖ್ ಪ್ರಸಾದ್ ಕುಂಡಡ್ಕ, ಬೆಳ್ಳಾರೆ ವಿಹಿಂಪ ಅಧ್ಯಕ್ಷರಾದ ಪ್ರಸಾದ್ ಕೆ ಬಿ, ಸಂಯೋಜಕ್ ಸಚಿನ್ ರೈ ಪೂವಾಜೆ, ಸಹ ಸಂಯೋಜಕ್ ಭರತ್ ಭಂಡಾರಿ ಹಾಗೂ ಪ್ರವೀಣ್ ಮಣಿಮಜಲು ಉಪಸ್ಥಿತರಿದ್ದರು.