Ad Widget

ಸರಕಾರಿ ಆಸ್ಪತ್ರೆ ಅಭಿವೃದ್ಧಿ ಪಡಿಸಿ ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆ – ಡಿ.10 ರಂದು ತಾಲೂಕು ಕಛೇರಿ ಎದುರು ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ

ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಪಡಿಸಿ ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಹೋರಾಟ ಸಮಿತಿ ವತಿಯಿಂದ ಡಿ 1 ರಂದು ಸುಳ್ಯ ಕನ್ನಡ ಭವನ ಸಭಾಂಗಣದಲ್ಲಿ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟದ ಕುರಿತು ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

. . . . . . .

ಈ ಸಭೆಯಲ್ಲಿ ಸುಳ್ಯ ಮತ್ತು ದ ಕ ಜಿಲ್ಲೆಯ ವಿವಿಧ ರಾಜಕೀಯ ಮತ್ತು ಧಾರ್ಮಿಕ ಸಂಘಟನೆಗಳ ನೇತಾರರು ಭಾಗವಹಿಸಿದ್ದರು. ಸಭೆಯ ಕೇಂದ್ರಬಿಂದುವಾಗಿ ಡಿ ವೈ ಎಫ್ ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ, ರೋಗಿಗಳ ಚಿಕಿತ್ಸಾ ವಿಭಾಗಗಳಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಗಳನ್ನು ಹಾಕಿ ಬಡ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸರಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಏರಿಸುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳ ಚಿಕಿತ್ಸೆ ನೆಪದಲ್ಲಿ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುತ್ತಿದ್ದು ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಕ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆ ಎಂದೆ ಹೆಸರುವಾಸಿಯಾಗಿರುವ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸುಮಾರು 900 ಬೆಡ್ಡಿನ ವಿಶಾಲತೆ ಹೊಂದಿದ್ದರು ಬಡರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಲ್ಲಿ ವೈದ್ಯರ ಮತ್ತು ಸಲಕರಣೆಗಳ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಒಂದರ ಹಿಂದೆ ಒಂದರಂತೆ ತಲೆಯೆತ್ತುತ್ತಿದ್ದರೆ ಸರಕಾರಿ ಮೆಡಿಕಲ್ ಕಾಲೇಜುಗಳು ಎಲ್ಲಿಯೂ ಕೂಡ ಕಂಡುಬರುವುದಿಲ್ಲ. ಕ್ಯಾನ್ಸರ್, ಹೃದಯ ಚಿಕಿತ್ಸೆಗೆ , ಬೇಕಾದ ಸರ್ಕಾರಿ ಆಸ್ಪತ್ರೆಗಳು ಇಲ್ಲದೆ ಬಡರೋಗಿಗಳು ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 130 ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕಾದಲ್ಲಿ ಕೇವಲ ಇಪ್ಪತ್ತೈದು ಮೂವತ್ತು ಆರೋಗ್ಯ ಕೇಂದ್ರಗಳು ಮಾತ್ರ ಇದೆ. ಜಿಲ್ಲೆಯಲ್ಲಿ ಸುಮಾರು ಸಾವಿರದ ಎಂಟು ನೂರು ವೈದ್ಯರ ಹುದ್ದೆ ಖಾಲಿ ಇದ್ದು ಅದರಲ್ಲಿ ಇಂದಿಗೂ 900 ಹುದ್ದೆಗೆ ವೈದ್ಯರನ್ನು ನೇಮಿಸುವಲ್ಲಿ ಸಂಬಂಧಪಟ್ಟ ಸರಕಾರಗಳು ವಿಫಲವಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಐದು ಶಾಸಕರ ಕ್ಷೇತ್ರದಲ್ಲಿ ಧರಣಿಗಳು ನಡೆದಿದ್ದು ಉಳಿದ ಸುಳ್ಯ ,ಬೆಳ್ತಂಗಡಿ ,ಮಂಗಳೂರು ಉತ್ತರ ಈ ವಿಧಾನಸಭಾ ಕ್ಷೇತ್ರಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರ ಇಲ್ಲದ ಪ್ರಥಮ ತಾಲೂಕು ಸುಳ್ಯ ಆಗಿರುತ್ತದೆ ಎಂದು ಹೇಳಿದರು ‌. ಈ ಎಲ್ಲಾ ವಿಷಯಗಳನ್ನು ಸಾರ್ವಜನಿಕರ ಮುಂದೆ ಇಟ್ಟು ಮುಂದಿನ ದಿನಗಳಲ್ಲಿ ಹೋರಾಟಗಳನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ಎನ್ ಜಯಪ್ರಕಾಶ್ ರೈ ,ವೆಂಕಪ್ಪ ಗೌಡ , ಮಹಮ್ಮದ್ ಕುಂಞಿ ಗೂನಡ್ಕ,ಮಾತನಾಡಿ ಜನ ಪರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷವು ಸದಾ ಬೆಂಬಲವನ್ನು ನೀಡುತ್ತದೆ. ನಿಮ್ಮ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣ ಕೈಜೋಡಿಸುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಪುತ್ತೂರು ಹೋರಾಟ ಸಮಿತಿಯ ಮುಖಂಡ ಅಶ್ರಫ್ ಕಲ್ಲೇರಿ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಈ ಪ್ರತಿಭಟನೆಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು. ರೈತ ಸಂಘಟನೆಯ ಮುಖಂಡ ಅಶೋಕ್ ಎಡಮಲೆ, ಎಎಪಿ ಪಕ್ಷದಿಂದ ರಶೀದ್ ಜಟ್ಟಿಪಳ್ಳ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ವತಿಯಿಂದ ಕಲಂದರ್ ಎಲಿಮಲೆ, ಕಾರ್ಮಿಕ ಸಂಘಟನೆಯ ವತಿಯಿಂದ ನಾಗರಾಜ ಮೇಸ್ತ್ರಿ ಜಯನಗರ ,ಮಂಜುನಾಥ್ ಬಳ್ಳಾರಿ, ಮೊದಲಾದವರು ಮಾತನಾಡಿ ತಮ್ಮ ಬೆಂಬಲವನ್ನು ಸೂಚಿಸಿದರು. ಸಭೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಶಿವರಾಮಗೌಡ, ಪ್ರಸಾದ್ ಕಲ್ಲುಗುಂಡಿ, ಶ್ರೀಧರ ಕಡೆಪ್ಪಾಲ,ಉಸ್ಮಾನ್ ಜಯನಗರ, ಕಾಂಗ್ರೆಸ್ ಪಕ್ಷದ ಮುಖಂಡರು ರಫೀಕ್ ಪಡು, ಸಿದ್ದಿಕ್ ಕೊಕ್ಕೋ, ಶಾಫಿ ಕುತ್ತಮಟ್ಟೆ, ಎಸ್ ಎಸ್ ಎಫ್ ಸಂಘಟನೆಯ ವತಿಯಿಂದ ಸಿದ್ದಿಕ್ ಗೂನಡ್ಕ, ಕಬೀರ್ ಜಟ್ಟಿಪಳ್ಳ, ಸುನ್ನಿ ಮಧರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಜೆಡಿಎಸ್ ಪಕ್ಷದವತಿಯಿಂದ ಹಸೈನಾರ್ ಕಲ್ಲುಗುಂಡಿ, ಸ್ಥಳೀಯ ಸಂಘಟನೆಗಳ ಮುಖಂಡರಾದ ರಾಜು ಪಂಡಿತ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಮಂಗಳೂರು, ನಿತಿನ್ ಮಂಗಳೂರು, ಪುತ್ತೂರು ಹೋರಾಟ ಸಮಿತಿಯ ಮುಖಂಡ ಅಶ್ರಫ್ ಕಲ್ಲೇರಿ, ಎ.ಕೆ.ಇಬ್ರಾಹಿಂ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ರೂವಾರಿ ಸುಳ್ಯ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕೆ.ಪಿ.ಜಾನಿ ಕಲ್ಲುಗುಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಿಸೆಂಬರ್ 10 ನೇ ತಾರೀಖಿನಂದು ಸುಳ್ಯ ತಾಲೂಕು ಕಚೇರಿ ಮುಂಭಾಗ ಬೃಹತ್ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!