ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಜ್ರಕಾಯ ಶಾಖೆ ಪದವು ಚೊಕ್ಕಾಡಿ ವತಿಯಿಂದ ಡಿ. 01 ರಂದು ಅಮರಮೂಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ವಜ್ರಕಾಯ ಶಾಖೆ ಪದವು ಚೊಕ್ಕಾಡಿ ಇದರ ಅಧ್ಯಕ್ಷರಾದ ಸತ್ಯ ಪ್ರಸಾದ್ ಪುಳಿಮರಡ್ಕ, ಭಜರಂಗದಳ ಸಂಚಾಲಕ ವರ್ಷಿತ್ ಚೊಕ್ಕಾಡಿ, ಕಾರ್ಯದರ್ಶಿ ಸುದರ್ಶನ್ ಪದವು, ನವೀನ್ ಕಣಿಪ್ಪಿಲ, ಮಿಥುನ್ ಪದವು, ಸತೀಶ್ ಪದವು, ಕಿರಣ್, ರೋಹಿತ್, ಶಿವಪ್ರಸಾದ್ ಉಪಸ್ಥಿತರಿದ್ದರು.
- Thursday
- November 21st, 2024