ಲಾಕ್ ಡೌನ್ ವೇಳೆ ಕೆಲವರು ಸಂಕಷ್ಟದಲ್ಲಿ ಕೆಲವರು ಕೃಷಿ ಕೆಲಸ ಮಾಡಿ ಹಾಯಾಗಿದ್ದವರು ಇದ್ದಾರೆ. ಕೃಷಿಗೆ ಅವಕಾಶವಿದ್ದ ಹಲವರು ಸಮಯ ದುರುಪಯೋಗ ಮಾಡಿಲ್ಲ. ತರಕಾರಿ ಕೃಷಿ ಮಾಡಿ ತಮಗೆ ಬೇಕಾದ ವಸ್ತು ಬೆಳೆದರೂ ಇದ್ದಾರೆ.ತರಕಾರಿಗೆ ಪೇಟೆಗೆ ಹೋಗದೇ ಸಮಯ ಹಣ ಆರೋಗ್ಯ ಕಾಪಾಡಿದವರೂ ಇದ್ದಾರೆ. ಕೆಲವು ವಿದ್ಯಾರ್ಥಿಗಳು ಲಾಕ್ ಡೌನ್ ರಜೆಯ ಅವಧಿಯಲ್ಲಿ ಮನೆಯವರಿಗೆ ಸಹಕಾರ ಕೊಟ್ಟರೇ, ಕೆಲವರು ಆಟ,ಮೊಬೈಲ್ ಹೀಗೆ ಸಮಯ ಕಳೆದಿದ್ದಾರೆ. ಆದರೇ ಈ ವಿದ್ಯಾರ್ಥಿ ಮಾತ್ರ ರಜೆಯ ಅವಧಿಯನ್ನು ಸದುಪಯೋಗಿಸಿಕೊಂಡು ರಟ್ಟನ್ನು ಉಪಯೋಗಿಸಿ ಮನೆಯ ಮಾದರಿ ನಿರ್ಮಾಣ ಮಾಡಿದ್ದಾನೆ. ಈತ ಸುಳ್ಯ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಲತೀಶ್ ಕುಮಾರ್ ಹೆಚ್. ದೇವಚಳ್ಳ ಗ್ರಾಮದ ಹಲಸಿನಡ್ಕ ದಲ್ಲಿರುವ ತನ್ನ ಮನೆಯಲ್ಲಿ ನೋಡಲು ಕಲರ್ ಫುಲ್ ಆಗಿರುವ ಈ ಮಾದರಿ ತಯಾರಿಸಿದ್ದಾನೆ. ಇದಕ್ಕೆ ನನ್ನ ತಮ್ಮ, ತಂಗಿ ಸಹಕಾರ ಪಡೆದು 3 ದಿನಗಳಲ್ಲಿ ತಯಾರು ಮಾಡಿದ್ದಾನೆ.ಇದಕ್ಕೆ ರಟ್ಟು, ಕತ್ತರಿ, ಗಮ್(ಅಂಟು), ಬಿದಿರಿನ ಕಡ್ಡಿ (ಕಿಟಕಿಗೆ) ಸುಂದರವಾಗಿ ಕಾಣಲು ಪೈಂಟ್ ಮಾಡಿದ್ದಾನೆ.
ಲಾಕ್ ಡೌನ್ ಅವಧಿಯಲ್ಲಿ ಈತ ಮಾಡಿದ ಕೆಲಸ ಸಣ್ಣದಾದರೂ ಅದರಿಂದಾಗುವ ಪ್ರಭಾವ ಜಾಸ್ತಿಯೇ. ಸಮಯ ಸದುಪಯೋಗವಾಗಿ ಬೇರೆ ಅನಗತ್ಯ ವಿಷಯಗಳ ಕಡೆ ಗಮನ ಹರಿಯುವುದಿಲ್ಲ, ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಲು ತಮ್ಮ ತಂಗಿಗೆ ತರಬೇತಿ ನೀಡಿದಂತಾಯಿತು.ಮುಂದೆ ತಾನು ಇಂಜಿನಿಯರ್ ಆಗಬೇಕೆಂದು ಆಸಕ್ತಿ ಬರುತ್ತದೆ ಜತೆಗೆ ಅಂತಹ ನಿಜವಾದ ಮನೆ ಕಟ್ಟಬೇಕೆಂಬ ಪ್ರಯತ್ನಕ್ಕೆ ದಾರಿ ಹುಡುಕಿಕೊಡುತ್ತದೆ.
ಇದೇ ತರಹ ಹಲವಾರು ವಿದ್ಯಾರ್ಥಿಗಳು ತಮ್ಮ ಸಮಯ ಸದುಪಯೋಗ ಮಾಡಿದ ಉದಾಹರಣೆಗಳಿದ್ದರೇ ನಮಗೆ ವಿವರ ಕಳುಹಿಸಿ ಕೊಡಿ. ವಾಟ್ಸಾಪ್ ಸಂಖ್ಯೆ 9449387044