ಕೊರೊನ ರೋಗ ಬಾಧಿಸುತ್ತಿರುವ ಸಂದರ್ಭದಲ್ಲಿ ಸ್ವ ಆರೋಗ್ಯ ರಕ್ಷಣೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ನಿಟ್ಟಿನಲ್ಲಿ ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ
ಬಳ್ಪ ಮತ್ತು ಕೇನ್ಯ ಗ್ರಾಮದ ಪ್ರತಿ ಮನೆಯ ಪ್ರತಿ ಸದಸ್ಯರಿಗೂ ಉಚಿತ ಮಾಸ್ಕ್ ಅನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು. ವಿತರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಪ್ರಕಾಶ ಮೂಡ್ನೂರು ನೆರವೇರಿಸಿದರು. ಬಳ್ಪ ಮತ್ತು ಕೇನ್ಯ ಗ್ರಾಮದ ಪ್ರತಿಯೊಂದು ಮನೆಯ ಪ್ರತಿ ಸದಸ್ಯರಿಗೂ ತಲಾ ಒಂದು ಮಾಸ್ಕ್ ಉಚಿತವಾಗಿ ನೀಡಲಾಗುತ್ತದೆ. ಆಯಾ ಬೈಲುವಾರಿನ ಸಂಚಾಲಕರು ಇದನ್ನು ನಿರ್ವಹಿಸುವರು.ಈಗಾಗಲೇ ಬೈಲುವಾರಿನ ಸಂಚಾಲಕರಿಗೆ ತಲುಪಿಸಲಾಗಿದೆ.ಇದರ ಸಂಪೂರ್ಣ ವೆಚ್ಚವನ್ನು ದಾನಿಗಳ ನೆರವಿನಿಂದ ಭರಿಸಲಾಗುವುದು ಎಂದರು.
- Thursday
- October 31st, 2024