ದೇವಸ್ಥಾನದ ಪೂಜೆಯನ್ನು ಆನ್ ಲೈನ್ ಮೂಲಕ ಅವಕಾಶ ಕಲ್ಪಿಸುವ ಕೆಲಸ ಖಂಡಿತವಾಗಿಯೂ ಸರಿಯಲ್ಲ ಮತ್ತು ನಮ್ಮ ತುಳುನಾಡಿನ ಸಂಸ್ಕೃತಿಗಳಿಗೆ ಧಕ್ಕೆ ತರುವ ವಿಷಯ. ಎಲ್ಲಾ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ ಹೊರತು ಪೋಟೋ ತೆಗೆಯುವ ಮತ್ತು ವಿಡಿಯೋ ಮಾಡುವ ಅವಕಾಶವನ್ನು ನಿರ್ಬಂಧಿಸಲಾಗಿದೆ ಆದರೆ ಈಗ ದೇವರ ಪೂಜೆಯನ್ನು ವೀಡಿಯೋ ಮೂಲಕ ಆನ್ ಲೈನ್ ಪೂಜೆಗೆ ಅವಕಾಶ ಕಲ್ಪಿಸುವ ಉದ್ದೇಶ ತಪ್ಪು ಜನರಿಗೆ ಕುಡಿಯುವ ಅವಕಾಶಕ್ಕಾಗಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರುವಾಗ ದೇವಾಲಯ, ಮಸೀದಿ, ಚರ್ಚ್ ಗಳನ್ನು ತೆರೆಯಲು ಯಾಕೆ ಅವಕಾಶ ನೀಡಬಾರದು ? ಪ್ರತಿ ದಿನ ದೇವಾಲಯದಲ್ಲಿ ಮಿತಿ ಜನರಿಗೆ ದೇವರ ದರ್ಶನ ಪೂಜೆಯ ಅವಕಾಶ ಕೊಡುವಂತಾಗಲಿ ಯಾಕೆಂದರೆ ದೇವಸ್ಥಾನ ಮತ್ತು ದೈವ ಸ್ಥಾನ ನಮ್ಮ ತುಳುನಾಡಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ದಯವಿಟ್ಟು ಅದಕ್ಕೆ ದಕ್ಕೆ ತರುವ ಕೆಲಸವನ್ನು ಮಾಡದಿರೋಣ ಎಂದು ಪ್ರದೀಪ್ ಎಣ್ಮೂರು ಮನವಿ ಮಾಡಿದ್ದಾರೆ.
- Friday
- November 1st, 2024