
ಕೆಲ ದಿನಗಳ ಹಿಂದೆ ನಮ್ಮ ರಾಜ್ಯ ಸರಕಾರದ ಕಾನೂನು ಸಚಿವರಾದ ಮಾಧುಸ್ವಾಮಿ ಅವರು ರೈತ ಮಹಿಳೆಯ ವಿರುದ್ದ ಏಯ್ ರಾಸ್ಕ್ಯಾಲ್ ಎಂಬ ಪದ ಬಳಸಿ ಅವಹೇಳನಕಾರಿಯಾಗಿ ಮಾತನಾಡಿ ರೈತರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯ ವಿರುದ್ದ ಪದ ಬಳಕೆ ಮಾಡಿರುವುದ್ದನ್ನು ಅಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಕಂಡಿಸುತ್ತದೆ . ಕೇವಲ ಕ್ಷಮೆ ಕೇಳಿ ಬಚಾವಾಗುವುದು ನಾಟಕದ ಒಂದು ಭಾಗ . ಮುಖ್ಯಮಂತ್ರಿಗಳೇ , ಬಿಜೆಪಿ ಮುಖಂಡರೇ ಕೂಡಲೇ ಕಾನೂನು ಸಚಿವರ ರಾಜೀನಾಮೆ ಪಡೆಯಿರಿ . ಆಗ ತಾವುಗಳು ರೈತ ಪರ ಎಂದು ಹೇಳಬಹುದಾಗಿದೆ ಎಂದು ಅಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ