Ad Widget

ಬೆಳ್ಳಾರೆ: ಸುರಿದ ಮಳೆಗೆ ರಸ್ತೆ ಕೆಸರು, ಸವಾರರಿಗೆ ಸಂಕಟ

ಬೆಳ್ಳಾರೆಯ ಮೇಲಿನ ಪೇಟೆ ಸಿಂಡಿಕೇಟ್ ಬ್ಯಾಂಕ್ ಸಮೀಪ ಇಂದು ಮುಂಜಾನೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ಕೆಸರುಮಯವಾಗಿದೆ.ಪ್ರತೀ ವರ್ಷವೂ ಇಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು ಇದನ್ನು ಈ ವರ್ಷವಾದರೂ ಇಲಾಖೆ ಗಮನ ಹರಿಸಿ ಸರಿಯಾದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

ಸುಳ್ಯ ವಿಖಾಯ ತಂಡ ಸನ್ನದ್ಧ: ತುರ್ತು ಸೇವೆ ಕರೆ ಮಾಡಿ

ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ಪ್ರಭಾವದಿಂದಮುಂದಿನ 3 ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರೀ ಮಳೆ ಬೀಳುವ ಬಗ್ಗೆ ಮಾಹಿತಿ ದೊರೆತಿದೆ.ದಕ್ಷಿಣ ಕರಾವಳಿ ಭಾಗದಲ್ಲಿ ಅಂಫಾನ್ ಚಂಡಮಾರುತ ಬಂದರೇ ಭಾರಿ ವೇಗದಲ್ಲಿ ಗಾಳಿ ಬೀಸಲಿದೆ. ಜಿಲ್ಲಾಡಳಿತ ವು ಜಿಲ್ಲೆಯಲ್ಲಿ ೩ ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಿಸಿದ್ದಾರೆ.ಆದುದರಿಂದ...
Ad Widget

ಸಂಪಾಜೆ ಟಾಸ್ಕ್ ಫೋರ್ಸ್ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಮುಂಡಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು ಈ ಸಭೆಯಲ್ಲಿ ಈ ಕೆಳಗಿನ ನಿರ್ಣಯವನ್ನು ಕೈಗೊಳ್ಳಲಾಯಿತು. ಪೇಟೆಯಲ್ಲಿ ವರ್ತಕರು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿ ಕೋರಂಟೈನ್ ಗೆ ವ್ಯವಸ್ಥೆ ಹೊರ ರಾಜ್ಯ ಜಿಲ್ಲೆಯಿಂದ ಬಂದವರ ಬಗ್ಗೆ ಗಮನ ಹರಿಸುವುದು, ಗ್ರಾಮ...

ವಿದ್ಯುತ್ ಶಾಕ್ ವಿದ್ಯಾರ್ಥಿ ಮೃತ್ಯು

ಕೊಡಿಯಾಲ ಗ್ರಾಮದ ರಾಮಕುಮೇರು ಎಂಬಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಮೇ. 18 ರಂದು ಸಂಜೆ ನಡೆದಿದೆ.ರಾಮಕುಮೇರು ದಿ. ಸೋಮಶೇಖರ ಕುಂದಲ್ಪಾಡಿ ಎಂಬವರ ಪುತ್ರ ನಿಶಾಂತ್ (17 ) ಮನೆಯ ಸಮೀಪದ ಮಾವಿನ ಮರದಿಂದ ಅಲ್ಯುಮಿನಿಯಂ ಗಳೆಯಿಂದ ಮಾವಿನ ಹಣ್ಣನ್ನು ಕೊಯ್ಯುತ್ತಿರುವಾಗ ಸಮೀಪವಿದ್ದ ವಿದ್ಯುತ್ ಲೈನ್‌ಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ...

ಬಾಳೆಕೋಡಿ ಶಶಿಕಾಂತಮಣಿ ಸ್ವಾಮೀಜಿ ವಿಧಿವಶ

ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ಮೇ. 18 ರಂದು ರಾತ್ರಿ ಇಹಲೋಕ ತ್ಯಜಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮುರ ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಸಾಹಿತ್ಯ ಪ್ರೇಮಿಗಳು, ಅನೇಕ ಪ್ರಶಸ್ತಿ ಪುರಸ್ಕೃತರು, ಗೌರವ ಡಾಕ್ಟರೇಟ್ ಪದವಿಧರರು, ಮಠದ ಮೂಲಕ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು...

ಗುತ್ತಿಗಾರಿನಲ್ಲಿ ಸಂಜೆ ೫ ರವರೆಗೆ ಅಂಗಡಿ ತೆರೆಯಲು ನಿರ್ಧಾರ

ಗುತ್ತಿಗಾರಿನಲ್ಲಿ ಮೇ ಕೊನೆಯ ತನಕ ಸಂಜೆ ೫ ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ವರ್ತಕರು ನಿರ್ಧರಿಸಿದ್ದಾರೆ. ಮೇ ೧೮ ರಂದು ನಡೆದ ಗ್ರಾ.ಪಂ. ಮತ್ತು ವರ್ತಕರ ಸಂಘದ ಜಂಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ವರ್ತಕರ ಸಂಘ ತಿಳಿಸಿದೆ.
error: Content is protected !!