ಕೊರೊನಾ ರೋಗವು ಇಡೀ ವಿಶ್ವದಾದ್ಯಂತ ಹರಡಿದ್ದು,ನಮ್ಮ ದೇಶದಲ್ಲಿ ಇದರ ಹಾವಳಿಯು ವಿಪರೀತವಾಗಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.ಇಂತ ಘಳಿಗೆಯಲ್ಲಿ ನಮ್ಮ ಎಲ್ಲಾ ಜವಾಬ್ದಾರಿಗಳನ್ನು ಮರೆತು ನಾವು ಮನೆಯಲ್ಲಿರಬೇಕಾದ ಸಂದರ್ಭ ಬಂದಿರುತ್ತದೆ.ಈ ಲಾಕ್ ಡೌನ್ ಅವಧಿಯಲ್ಲಿ ನಾ ಕಂಡಂತೆ ನಮ್ಮ ತಾಯಂದಿರ,ಸಹೋದಿಯರ ಕಾರ್ಯ ಶ್ಲಾಘನೀಯ,ಇಡೀ ಜಗತ್ತೇ ಲಾಕ್ ಡೌನ್ ಆದರೂ ನಮ್ಮ ತಾಯಂದಿಯರಿಗೆ,ಸಹೋದರಿಯರಿಗೆ ಅನ್ವಯಿಸಿಲಿಲ್ಲಾ ಯಾಕಂದರೆ ಈ ಸಮಯದಲ್ಲಿ ಇದೆಲ್ಲವನ್ನು ಮೀರಿ ತನ್ನ ಕರ್ತವ್ಯವನ್ನು ಮೊದಲಿನಂತೆ ವಿಶ್ರಾಂತಿ ಇಲ್ಲದೇ ನಿರ್ವಹಿಸಿದ ಕಣ್ಣಿಗೆ ಕಾಣುವ ದೇವತೆಯರು ಎಂದು ಹೇಳಿದರು. ತಪ್ಪಾಗಲಿಕ್ಕಿಲ್ಲ.ಅದಲ್ಲದೆ ಕೊರೊನ ರೋಗದ ವಿರುದ್ಧ ನಿರಂತರವಾಗಿ ಹಗಲಿರುಳು ಹೋರಾಡಿಕೊಂಡು ಬಂದಿರುವ ವೈದ್ಯರು,ದಾದಿಯರು(ನರ್ಸ್),ಆಶಾಕಾರ್ಯಕರ್ತೆಯರು,ಅರಕ್ಷಕ ಸಿಬ್ಬಂದಿ,ಗೃಹರಕ್ಷಕರ ಹಾಗೂ ಸಂಘ ಸಂಸ್ಥೆಗಳ ಕಾರ್ಯವು ಶ್ಲಾಘನೀಯ.
✒️ ಪ್ರಣೀತ್ ಕಣಕ್ಕೂರು