ಗುತ್ತಿಗಾರು : ಮಹಿಳೆ ಆತ್ಮಹತ್ಯೆ

ಗುತ್ತಿಗಾರು ಗ್ರಾಮದ ಕಮಿಲ ಬಳಿ ಮಹಿಳೆಯೊಬ್ಬರು ನೇಣು ಬಿಗಿದು ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ವರದಿಯಾಗಿದೆ.ಕಮಿಲದ ಸತೀಶ್ ಕೊಚ್ಚಿ ಎಂಬವರ ಪತ್ನಿ ಗೀತಾ ಎನ್ನುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ. ಅನುರಾಧಾ ಕುರುಂಜಿಯವರಿಗೆ ಗೌರವಾರ್ಪಣೆ

ಇತ್ತೀಚೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಸುಳ್ಯದ ಉದ್ಯಮಿ ಹನೀಫ್ ಬುಶ್ರಾ ರವರ ನಿವಾಸ "ಮೆಹಫಿಲ್" ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕರಾದ ರಮೇಶ್ ಭಟ್ ರವರು ಶಾಲು...
Ad Widget

ಸರಕಾರದ ಹಿಂದೂ ವಿರೋಧಿ ನಡೆಯನ್ನು ಖಂಡಿಸಿದ ವಿ.ಎಚ್.ಪಿ ಮುಖಂಡ ಸೋಮಶೇಖರ ಪೈಕ

ಹಿಂದೂ ಸಮಾಜದ ಒಳಿತಿಗಾಗಿ ಜಾಗೃತಿಗಾಗಿ ದುಡಿಯುವ ಕಾರ್ಯಕರ್ತರನ್ನು ಹಿಂದೂ ವಿರೋಧಿ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಗಡಿಪಾರು ಮಾಡುವ ಆದೇಶದ ಮೂಲಕ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ ನಡೆಯುತ್ತಿದ್ದು ಸರಕಾರದ ಈ ದೋರಣೆಯನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಬಲವಾಗಿ ಖಂಡಿಸುತ್ತದೆ. ಸದಾ ಗೋಮಾತೆಯ ರಕ್ಷಣೆಯಲ್ಲಿ ತೊಡಗಿರುವ ಹಾಗೂ ಹಿಂದೂ ಸಮಾಜದ ಒಳಿತಿಗಾಗಿ...

ಮಡಪ್ಪಾಡಿ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

ಯುವಕ ಮಂಡಲ (ರಿ.) ಮಡಪ್ಪಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಿನಾಂಕ 12/11/23 ರಂದು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಧನ್ಯಕುಮಾರ್ ದೇರುಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಲಿ ಸುಳ್ಯ ಇದರ...

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಲನ ಚಿತ್ರ ತಂಡಕ್ಕೆ ಗೌರವಾರ್ಪಣೆ

ಸುಳ್ಯ ಪರಿಸರದಲ್ಲಿ ಚಿತ್ರೀಕರಣಕ್ಕೆ ಆಗಮಿಸಿದ ಚಲನ ಚಿತ್ರ ತಂಡದ ಸದಸ್ಯರಾದ ಹಿರಿಯ ನಿರ್ದೇಶಕರಾಗಿ ಹಲವು ಸಿನೇಮಾಗಳಿಗೆ ಪ್ರೇರಣಾ ಶಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಭಟ್, ಸಂಗೀತ ನಿರ್ದೇಶಕರಾಗಿರುವ ಸುಳ್ಯದ ಮಯೂರ ಅಂಬೆಕಲ್ಲು, ನಾಯಕ ನಟರಾಗಿರುವ ತೇಜಸ್ ಕಿರಣ್ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಉದ್ಯಮಿ ಹನೀಫ್ ಬುಶ್ರ ರವರ ಗೃಹ ಕಛೇರಿ [ಮೆಹಫಿಲ್] ಯಲ್ಲಿ ಸನ್ಮಾನಿಸಲಾಯಿತು....

ಪೈಚಾರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಪೈಚಾರಿನಲ್ಲಿ ನ.16ರಂದು ಅಪರಾಹ್ನ ಸಂಭವಿಸಿದೆ. ಸುಳ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ಸುಳ್ಯದ ರೋಷನ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ಪೈಚಾರಿನ ಸುಪ್ರೀಂ ಚಿಕನ್ ಸೆಂಟರ್ ಸಮೀಪ ನಿಯಂತ್ರಣ ಕಳೆದು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ರೋಷನ್ ಅಪಾಯದಿಂದ...

ಹಿಂದು ಮುಖಂಡ ಲತೀಶ್ ಗುಂಡ್ಯ ಗಡಿಪಾರಿಗೆ ಶಿಫಾರಸ್ಸು ನೋಟಿಸ್ ! ಕಾರ್ಯಕರ್ತರಲ್ಲಿ ಹೆಚ್ಚಿದ ಆಕ್ರೋಶ , ಸಹಾಯಕ ಆಯುಕ್ತರ ಭೇಟಿಗೆ ಸಿದ್ದತೆ.

ಸುಳ್ಯದಲ್ಲಿ ಹಿಂದು ಪರ ಸಂಘಟನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸುಳ್ಯ ಮೀಸಲು ಕ್ಷೇತ್ರಕ್ಕೆ ಪ್ರಭಲ ಅಬ್ಯರ್ಥಿಯಾಗಿ ಯುವ ಜನತೆಯಲ್ಲಿ ಹೆಸರು ಪಡೆದು ಭಾರಿ ಪೈಪೋಟಿ ನೀಡಿ ನಾಯಕರ ಗಮನ ಸೆಳೆದಿದ್ದರು . ಇದೀಗ ಲತೀಶ್ ಗುಂಡ್ಯರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ ಅಲ್ಲದೇ ಗುಂಪು ಕಟ್ಟಿಕೊಂಡು ಕೋಮು...

ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಆಧಾರ್ ನೊಂದಾಣಿ ಮತ್ತು ತಿದ್ದುಪಡಿ ಶಿಬಿರ

ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮತ್ತು ಅಮರಮುಡ್ನೂರು ಗ್ರಾಮ ಪಂಚೀಯತ್ ಸಹಕಾರದೊಂದಿಗೆ ಆಧಾರ್ ನೊಂದಾಣಿ ಮತ್ತು ತಿದ್ದುಪಡಿ ಶಿಬಿರ ನ. 11ರಂದು ಅಮರಮುಡ್ನೂರು ಪಂಚಾಯತ್ ಸಭಾಭವನ ಕುಕ್ಕುಜಡ್ಕದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ ಅಧ್ಯಕ್ಷರಾದ ಪ್ರವೀಣ್ ಕುಲಾಲ್ ಇವರು ವಹಿಸಿದರು. ಸುಳ್ಯ ವಿಧಾನ...

ಕುಕ್ಕೆ: ದೇವಳದ ವತಿಯಿಂದ ಗೋಪೂಜೆ

ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ  ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ  ಆದೇಶದ ಮೇರೆಗೆ ಗೋಪೂಜೆಯನ್ನು ಮಂಗಳವಾರ  ವಿಶೇಷವಾಗಿ ಆಚರಿಸಲಾಯಿತು.ಆರಂಭದಲ್ಲಿ ದೇವಳದ ಗೋಶಾಲೆಯಲ್ಲಿದ್ದ ಗೋವುಗಳನ್ನು ಸ್ನಾನ ಮಾಡಿಸಿ ಅವುಗಳನ್ನು ಶ್ರೀ ದೇವಳಕ್ಕೆ ಕರೆತರಲಾಯಿತು.ದೇವಳದಲ್ಲಿ ಗೋಮಾತೆಯನ್ನು ಹೂವಿನಿಂದ ಅಲಂಕರಿಸಿ, ಕುಂಕುಮ ತಿಲಕನ್ನಿಟ್ಟು ಸಿಂಗರಿಸಲಾಯಿತು.ಬಳಿಕ ಶ್ರೀ ದೇವಳದ ಮುಂಭಾಗ ಕ್ಷೇತ್ರ ಪುರೋಹಿತ ಮದುಸೂಧನ...

ಕುಕ್ಕೆ ದೇವಳದಲ್ಲಿ ಗಜಲಕ್ಷ್ಮಿ ಪೂಜೆ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಶ್ರೀ  ದೇವಳದ ಗಜರಾಣಿ  ಯಶಸ್ವಿಗೆ ಮಂಗಳವಾರ  ಬಲಿಪಾಡ್ಯಮಿ ಪ್ರಯುಕ್ತ ಗಜಲಕ್ಷ್ಮಿ ಪೂಜೆಯು ನಡೆಯಿತು. ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ಯಶಸ್ವಿಗೆ ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಅಲ್ಲದೆ ಆನೆಗೆ ಹಣ್ಣುಹಂಪಲು ತೆಂಗಿನಕಾಯಿ,ಅವಲಕ್ಕಿ, ಹೊದ್ಲು, ಬೆಲ್ಲ,ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು. ನಂತರ ಗಜಲಕ್ಷ್ಮಿಗೆ ಮಂಗಳಾರತಿ...
Loading posts...

All posts loaded

No more posts

error: Content is protected !!