ಮರಳಿ ಕಾಂಗ್ರೆಸ್‌ ಗೆ ಸೇರ್ಪಡೆಗೊಂಡ ಬೊಳ್ಳೂರು

ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರಿದರು. ಸಚಿವರು ಹಾರ ಹಾಕಿ, ಕಾಂಗ್ರೆಸ್‌ ಶಾಲು ತೊಡಿಸಿ ಬೊಳ್ಳೂರು ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಬಿ.ಜೆ.ಪಿ. ಪ್ರಾಥಮಿಕ ಸದಸ್ಯತ್ವಕ್ಕೆ...

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ

ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವವು ಡಿ.20 ರಂದು ನಡೆಯಿತು.ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪುತ್ತೂರು ಫಿಲೋಮಿನ ಕಾಲೇಜು ಕ್ಯಾಂಪಸ್ ನಿರ್ದೇಶಕ ರೆ.ಪಾ ಸ್ಟಾನಿಪಿಂಟೋ ಉದ್ಘಾಟಿಸಿ ಮಾತನಾಡಿದರು.ಸುಳ್ಯ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಮಕ್ಕಳ ಅರೋಗ್ಯ ಮತ್ತು ಮಕ್ಕಳ ಸುರಕ್ಷತೆ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಪಾ...
Ad Widget

ಬೆಳ್ಳಾರೆ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

ಝಖರಿಯ ಜುಮಾ ಮಸೀದಿ ಬೆಳ್ಳಾರೆ ಉರೂಸ್ ಸಮಾರಂಭದ ಪೋಸ್ಟರ್ ಅನ್ನು ಮಸೀದಿಯ ಖತೀಬರಾದ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ ಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಉರೂಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಕಾದರ್ ಹಾಜಿ ಬಯಂಬಾಡಿ ಹಾಗೂ ಕಮಿಟಿಯ ಸದಸ್ಯರುಗಳು ಬೆಳ್ಳಾರೆ ಜಮಾಅತಿನ ಸದಸ್ಯರುಗಳು ಮತ್ತು ಉಸ್ತಾದರುಗಳು ಉಪಸ್ಥಿತರಿದ್ದರು.

ಸುಳ್ಯ ಸಿ. ಎ. ಬ್ಯಾಂಕ್ ಚುನಾವಣೆ : ಪಕ್ಷೇತರ ಅಭ್ಯರ್ಥಿಯಾಗಿ ಶ್ರೀ ಶಿವಪ್ರಕಾಶ್ ಅಡ್ಪಂಗಾಯ ನಾಮಪತ್ರ ಸಲ್ಲಿಕೆ

ಸುಳ್ಯ ಸಿ. ಎ. ಬ್ಯಾಂಕ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ, ಅಡ್ಪಂಗಾಯ ಅಯ್ಯಪ್ಪ ಮಂದಿರದ ಧರ್ಮದರ್ಶಿ ಹಾಗೂ ಸುಳ್ಯ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷರಾದ ಶ್ರೀ ಶಿವಪ್ರಕಾಶ್ ಅಡ್ಪಂಗಾಯರು ಈ ದಿನ ನಾಮಪತ್ರ ಸಲ್ಲಿಸಿದರು. ಸುಳ್ಯದ ಹಿರಿಯ ಗುರುಸ್ವಾಮಿಗಳಾಗಿರುವ ಇವರು, ಧಾರ್ಮಿಕ ಸೇವಾಕಾರ್ಯಗಳಲ್ಲಿ ಗುರುತಿಸಿಕೊಂಡು ಅಪಾರ ಗೌರವ ಹಾಗೂ ಜನಮನ್ನಣೆಯನ್ನು ಗಳಿಸಿಕೊಂಡಿರುತ್ತಾರೆ. ಈ ಸಲದ ಸುಳ್ಯದ...

ಡಿ.27 ರಿಂದ 29 : ಕಿರ್ಲಾಯ ಪೂಜಾರಿಮನೆ ಕುಟುಂಬದ ಧರ್ಮದೈವ ಹಾಗೂ ಉಪದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ

ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ತರವಾಡು ಕುಟುಂಬದ ದೇವಸ್ಥಾನದಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಉಪದೈವಗಳ ಪ್ರತಿಷ್ಠಾ ಮಹೋತ್ಸವ ಡಿ.27 ರಿಂದ ಡಿ.29 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ನಂತರ ಶ್ರೀ ದೈವಗಳ ಧರ್ಮ ನಡಾವಳಿ ನಡೆಯಲಿದೆ ಎಂದು ಕುಟುಂಬದ ಹಿರಿಯರಾದ...

ಇಂದು (ಡಿ.22) ರಾಷ್ಟ್ರೀಯ ಗಣಿತ ಶಾಸ್ತ್ರ ದಿನ

ಪ್ರತಿ ವರ್ಷ ಡಿಸೆಂಬರ್ 22 ರಂದು 'ರಾಷ್ಟ್ರೀಯ ಗಣಿತ ಶಾಸ್ತ್ರ ದಿನ' ಎಂದು ಆಚರಣೆ ಮಾಡಿ ಗಣಿತ ಶಾಸ್ತ್ರಕ್ಕೆ ಅಮೋಘ ಕೊಡುಗೆ ನೀಡಿದ ಮಹಾನ್ ಗಣಿತ ಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರನ್ನು ನೆನಪಿಸಿಕೊಂಡು ಅವರು ಗಣಿತ ಶಾಸ್ತ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸುವ ಕಾರ‍್ಯವನ್ನು ರಾಷ್ಟ್ರದಾದ್ಯಂತ ಮಾಡಲಾಗುತ್ತದೆ. ಇದರ ಜೊತೆಗೆ ಯುವಜನರಲ್ಲಿ ಮತ್ತು ಮಕ್ಕಳಲ್ಲಿ ಗಣಿತ ಶಾಸ್ತ್ರದ...

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ವಿಶ್ವ ಅವಳಿ ಜವಳಿ ದಿನಾಚರಣೆ

ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಆರು ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸೋಮವಾರ ವಿಶ್ವ ಅವಳಿ ಜವಳಿ ದಿನಾಚರಣೆಯ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಅವಳಿ ಜವಳಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಪ್ರಶಂಶಿಸಲಾಯಿತು. ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಸುನೈನ ಬಿ ಅವರು...

ನಾಗಪಟ್ಟಣ ಅಂಗನವಾಡಿ ಕೇಂದ್ರದ ಬಳಿ ಕಸ ತ್ಯಾಜ್ಯ ಹಾಕಿರುವ ಬಗ್ಗೆ ಸಾರ್ವಜನಿಕರಿಂದ ಮತ್ತೊಂದು ದೂರು ದಾಖಲು

ನಾಗಪಟ್ಟನದಲ್ಲಿ ಸುಳ್ಯ ನಗರ ಪಂಚಾಯತಿನವರು ಪಯಸ್ವಿನಿ ನದಿ ತೀರದಲ್ಲಿ ಕಸ ತ್ಯಾಜ್ಯ ಹಾಕಿ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ಆಲೆಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನಗಪಟ್ಟನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರ ಇದ್ದು, ಕೇಂದ್ರದ ಹಿಂಭಾಗ ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕರು ಕಸ ತ್ಯಾಜ್ಯ ಹಾಕುತ್ತಿದ್ದು ಇದನ್ನು ತೆಗೆಸುವಂತೆ ಇಂದು...

ಸೇವಾಜೆ : ಅಯ್ಯಪ್ಪ ವೃತದಾರಿ ಯುವಕ ಸಂಶಯಾಸ್ಪದ ಸಾವು

ಸೇವಾಜೆ ಬಳಿ ಅಯ್ಯಪ್ಪ ವೃತದಾರಿ ತನ್ನ ಆಶ್ರಮದಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಇದೀಗ ವರದಿಯಾಗಿದೆ. ದೇವಚಳ್ಳ ಗ್ರಾಮದ ದೇವ ದಿ.ಹೊನ್ನಪ್ಪ ಎಂಬವರ ಪುತ್ರ ಪದ್ಮನಾಭ (26) ಎಂಬವರೇ ಮೃತ ವ್ಯಕ್ತಿ. ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿ ವೃತಚಾರಣೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಮೃತ ಪದ್ಮನಾಭ ಅವರ...

ಮೆಸ್ಕಾಂ ಜಾಗೃತಿದಳ ಧೀಡೀರ್ ಭೇಟಿ , ಗೃಹ ಉಚಿತ ಪಂಪುಸೆಟ್ಟ್ ಗಳ ನೀರು ಬಳಕೆ ಪರಿಶೀಲನೆ

ಸುಳ್ಯ ಜಾಲ್ಸೂರು ಮೆಸ್ಕಾಂ ಉಪವಿಭಾಗಕ್ಕೆ ಸಂಭದಿಸಿದ ಗ್ರಾಮಗಳಲ್ಲಿ ಮನೆ ಮತ್ತು ಕೃಷಿ ಬಳಕೆಯ ಪಂಪುಸೆಟ್ಟ್ ಗಳ ಬಳಕೆ ಕುರಿತಾಗಿ ಜಾಗೃತಿ ದಳವು ಕಾಂತಮಂಗಲದಲ್ಲಿ ಇಂದು ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಹಿರಿಯ ಜಾಗೃತದಳದ ಅಧಿಕಾರಿಗಳು ಮತ್ತು ಮೆಸ್ಕಾಂ ಪೋಲಿಸರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!