ಕನಕಮಜಲು: ಸುಳ್ಯ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಕ್ಕೆ ಸ್ವಾಗತ

ತಹಶಿಲ್ದಾರ್, ಇ.ಒ. ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿ ಭಾರತ ಸಂವಿಧಾನ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫೆ.17ರ ಬೆಳಿಗ್ಗೆ ಕನಕಮಜಲಿನ ಮೂಲಕ ಸುಳ್ಯ ತಾಲೂಕಿಗೆ ಪ್ರವೇಶಿಸಿದ್ದು, ಸುಳ್ಯ ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಬರಮಾಡಿಕೊಳ್ಳಲಾಯಿತು. ಪುತ್ತೂರಿನಿಂದ ಕನಕಮಜಲಿಗೆ...

ಸುಳ್ಯ ; ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

ಭಾರತ ಸಂವಿಧಾನ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫೆ.17ರ ಬೆಳಿಗ್ಗೆ 11.15 ರಿಂದ 12ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸುಳ್ಯ ನಗರದಲ್ಲಿ ಸಂವಿಧಾನ ‘ಜಾಗೃತಿ ಜಾಥಾ’ ಹಾಗೂ ಸ್ತಬ್ಧ ಚಿತ್ರ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Ad Widget

ಸುಳ್ಯದಲ್ಲಿ ಸಮಾನ ಮನಸ್ಕ ರೈತಪರ ಹೋರಾಟಗಾರರ ಸಮಿತಿಯಿಂದ ಪ್ರತಿಭಟನಾ ಸಭೆ

ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಪ್ರತಿಭಟನಾಕಾರರು. ದೆಹಲಿಯಲ್ಲಿ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬ್ರಹತ್ ಹೋರಾಟ ದಿಲ್ಲಿ ಚಲೋ ಅಂಗವಾಗಿ ರೈತರು ಮತ್ತು ಕಾರ್ಮಿಕರು ಕರೆ ಕೊಟ್ಟಿರುವ ದೇಶದಾಧ್ಯಂತ ಗ್ರಾಮೀಣ ಭಾರತ್ ಬಂದ್ ಗೆ ಬೆಂಬಲವಾಗಿ ಇಂದುಸಮಾನಮನಸ್ಕ ರೈತಪರ ಹೋರಾಟಗಾರರು ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ಸುಳ್ಯ...

4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಬೆಳ್ಳಾರೆ ಪೋಲೀಸ್ , ಆರೋಪಿಗೆ ನ್ಯಾಯಾಂಗ ಬಂಧನ.‌

ಬೆಳ್ಳಾರೆ ಪೊಲೀಸ್ ಠಾಣಾ ಅ. ಕ್ರ. 36/2018 ಕಲಂ -20 (B)(li)(A) NDPS ಪ್ರಕರಣದ ಆರೋಪಿಯಾಗಿ, ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಕೆರೆಕೋಡಿ ಬೂದಿಗುಂಡಿ, ಹಳೇಬಿಡು, ಹಾಸನ ಜಿಲ್ಲೆಯ ನಿವಾಸಿ ಸಾಧಿಕ್ ಶರೀಫ್ ಎಂಬಾತನನ್ನು, ದಿನಾಂಕ 16.02.2024, ರಂದು ಬೆಳ್ಳಾರೆ ಠಾಣಾ PC 2295, ಹಾಗೂ PC 2308 ರವರುಗಳು ಹಾಸನ ಜಿಲ್ಲೆ ಅರಕಲಗೂಡು ತಾಲೂಕು,...

ಫೆ.24 : ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿಹಬ್ಬದ ಪ್ರಯುಕ್ತ ಕೊಡಿಯಾಲಬೈಲು ಎಂ.ಜಿ.ಎಂ. ಶಾಲಾ 2 ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಕ್ರೀಡಾ ಸಮ್ಮಿಲನ

ಬೆಳ್ಳಿ ಹಬ್ಬ ಆಚರಣೆ ಸಂದರ್ಭ 25 ಶಾಖೆಗಳ ಗುರಿ : ಅಧ್ಯಕ್ಷ ಪಿ.ಸಿ.ಜಯರಾಮ್ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಕೊಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗಳ ಶಾಲಾ ೨ ಕೊಠಡಿಗಳಿಗೆ ಗುದ್ದಲಿಪೂಜೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಇತರೆ ಸಹಕಾರಿ...

ಮೇನಾಲ ಕುಟುಂಬದ ಧೂಮಾವತಿ ಹಾಗೂ ವಿಷ್ಣುಮೂರ್ತಿ ದೈವಗಳ ನೇಮೋತ್ಸವ

ಅಜ್ಜಾವರ ಗ್ರಾಮದ ಮೇನಾಲ ಕುಟುಂಬದ ಶ್ರೀ ಧರ್ಮದೈವ ಧೂಮಾವತಿ ಚಾವಡಿಯಲ್ಲಿ ಶ್ರೀ ಧೂಮಾವತಿ ಹಾಗೂ ಶ್ರೀ ವಿಷ್ಣುಮೂರ್ತಿ ದೈವಗಳ ನೇಮೋತ್ಸವ ಫೆ.15‌ ಮತ್ತು ಫೆ.16ರಂದು ನಡೆಯಿತು. ಕುಟುಂಬದ ಯಜಮಾನರಾದ ಗುಡ್ಡಪ್ಪ ರೈ ಹಾಗೂ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.

ಮಾ.1 ರಿಂದ ಮಾ.7 ರವರೆಗೆ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ , ಮಾ.3ರಂದು ಸುಳ್ಯ ಸಮಾಜ ಬಾಂಧವರಿಂದ ಹಸಿರುವಾಣಿ ಸಮರ್ಪಣೆ.

ಕಾಸರಗೋಡು ಜಿಲ್ಲೆಯ ಕುಂಬಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವವು ಮಾ.1 ರಿಂದ ಮಾ.7ರ ತನಕ ನಡೆಯಲಿದ್ದು, ಆ ಪ್ರಯುಕ್ತ ಮಾ.3ರಂದು ಸುಳ್ಯದ ಚೆನ್ನಕೇಶವ ದೇವಾಲಯದ ಬಳಿಯಿಂದ ಪೆರ್ಣೆ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆಯು ನಡೆಯುವುದು. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಾಲೂಕು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ...

ಕೊಯನಾಡು;  ಆನೆ ದಾಳಿ, ಕೃಷಿ ನಾಶ!

ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಹಾನಿ ಉಂಟುಮಾಡಿದ ಘಟನೆ ಸಂಪಾಜೆ ಗ್ರಾಮದ ಕೊಯನಾಡಿನ ಕುಂದಲ್ಪಾಡಿ ಎಂಬಲ್ಲಿ ಫೆ. ೧೫ರ ರಾತ್ರಿ ಸಂಭವಿಸಿದೆ. ಆನೆ ದಾಳಿಯಿಂದ ತೆಂಗಿನ ಮರ, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿದೆ. ಜಯಪ್ರಕಾಶ್ ಅವರ ತೋಟದಲ್ಲಿ ೮ ತೆಂಗಿನ ಮರ ಹಾಗೂ ಬಾಳೆ ಹಾಗೂ ಅಡಿಕೆ ಗಿಡಗಳನ್ನು, ಪದ್ಮನಾಭ ಅವರ...

ಸುಳ್ಯ : ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರ ಮಹಾಸಮ್ಮೇಳನದ ಕರಪತ್ರ ಬಿಡುಗಡೆ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಾಸಮ್ಮೇಳನದ ಫೆ.27 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು ಕರಪತ್ರ ಬಿಡುಗಡೆ ಫೆ 15 ರಂದು ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷರಾದ ತೀರ್ಥರಾಮ ಎಚ್‌.ಬಿ. ಕಾರ್ಯದರ್ಶಿಯಾದ ಧನಲಕ್ಷ್ಮಿ ಬಿ. ಖಜಾಂಚಿಯಾದ ಮಹದೇವ ರಾಜ್ಯ ಪರಿಷತ್ ಸದಸ್ಯರಾದ ಪೃಥ್ವಿ ಕುಮಾರ್ ಟಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ್...

ಅಜ್ಜಾವರ: ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಅಜ್ಜಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ ಫೆ.೧೧ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೂಪಾನಂದ ಇವರು ವಹಿಸಿದ್ದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ರೂಪಾನಂದ ಕರ್ಲಪ್ಪಾಡಿ, ಅಧ್ಯಕ್ಷರಾಗಿ ಬೆಳ್ಯಪ್ಪ ಗೌಡ ಮುಡೂರು, ಕಾರ್ಯದರ್ಶಿಯಾಗಿ ಗುರುರಾಜ್ ಅಜ್ಜಾವರ,  ಖಜಾಂಜಿಯಾಗಿ ಗಿರಿಧರ ನಾರಾಲು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪಡ್ಡಂಬೈಲು, ಅಬ್ದುಲ್ಲ ಎ, ಜತೆಕಾರ್ಯದರ್ಶಿಯಾಗಿ...
Loading posts...

All posts loaded

No more posts

error: Content is protected !!