- Sunday
- July 26th, 2026
ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಎರಡು ದಿನಗಳ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಮೇ. 29ನೇ ಬುಧವಾರ ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯದ ಉದ್ಯಮಿ ಹಾಗೂ ಹವ್ಯಾಸಿ ಕಲಾವಿದರಾದ ಯಜ್ಞೇಶ್ ಆಚಾರ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ಇವರು ವಹಿಸಿದ್ದರು....
https://youtu.be/Cm62YoZ4lb0?si=ECI-wMdzIndH3vFi ಮೇ. 30 ಸುರಿದ ಭಾರಿ ಮಳೆಗೆ ಕೊಲ್ಲಮೊಗ್ರದ ಪನ್ನೆ ಹತ್ತಿರ ತೆಂಗಿನ ಕಾಯಿ ಸಾಗಿಸುತ್ತಿದ್ದ ಪಿಕಪ್ ಹೊಳೆ ದಾಟುವ ವೇಳೆ ನೀರು ಉಕ್ಕಿ ಹರಿದ ಪರಿಣಾಮ ಸಂಕಷ್ಟ ಸಿಲುಕಿದ ಘಟನೆ ನಡೆದಿದ್ದು ಅದೃಷ್ಟವಶಾತ್ ಚಾಲಕ ಹಾಗೂ ಪಿಕಪ್ ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಹೊಳೆಯಲ್ಲಿ ನೀರು ಕಡಿಮೆ ಇದೆ ಎಂದು ಚಾಲಕ ಮಹೇಶ್ ದಬ್ಬಡ್ಕ ಪಿಕಪ್...
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಮೇ.30ರಂದು ನಿವೃತ್ತರಾಗಿದ್ದಾರೆ. ಕಳೆದ ೩೫ ವರ್ಷಗಳಿಂದ ಸರಕಾರಿ ಸೇವೆಯಲ್ಲಿದ್ದ ಇವರು ೩೩ ವರ್ಷಗಳಿಂದ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಾರ್ಯತತ್ಪರ ಅಧಿಕಾರಿಯಾಗಿದ್ದ ಇವರು ಕಳೆದ ಮೂರು ವರ್ಷಗಳಿಂದ ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ತನ್ನ ಸರಕಾರಿ ಸೇವೆಯನ್ನು ದ.ಕ ಜಿಲ್ಲೆಯಲ್ಲೇ ಆರಂಭಿಸಿ ದ.ಕ ಜಿಲ್ಲೆಯಲ್ಲೇ...
ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಅನಾಥ ಶವವೊಂದು ಇಂದು (ಮೇ31) ಬೆಳಗ್ಗೆ ಪತ್ತೆಯಾಗಿದೆ.ವ್ಯಕ್ತಿಯ ಗುರುತು ಪರಿಚಯ ಪತ್ತೆಯಾಗಿಲ್ಲ. ಅಚ್ಚು ಪ್ರಗತಿ ಅವರ ಆಂಬ್ಯುಲೆನ್ಸ್ ನಲ್ಲಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಇರಿಸಲಾಗಿದೆ. ವಾರಿಸುದಾರರು ಯಾರಾದರು ಇದ್ದರೆ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಿರಿಯ ಸರ್ವೆಯರ್ ಸಿಂಗಾರ ಶೆಟ್ಟಿ ನೇಮಕಗೊಂಡಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ತೀರ್ಥರಾಮ ಹೊಸೊಳಿಕೆಯವರು ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಸಿಂಗಾರ ಶೆಟ್ಟಿ ಯವರು ಪ್ರಭಾರ ಅಧ್ಯಕ್ಷರಾಗಿದ್ದರು. ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ತಾಲೂಕು ಸಮಿತಿಯಿಂದ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗಿತ್ತು. ಇನ್ನು 5...
ಸಂಘ ಸಂಸ್ಥೆಗಳಿ0ದ ಅಭಿಮಾನಿಗಳಿಂದ ಸನ್ಮಾನಗಳ ಮಹಾಪೂರ: ಶುಭ ಹಾರೈಕೆಯ ಹೊನಲುಸುಬ್ರಹ್ಮಣ್ಯ: ತನ್ನ ೩೫ ವರ್ಷಗಳ ಸರಕಾರಿ ಸೇವೆಯಿಂದ ಸೇವಾ ನಿವೃತ್ತಿ ಹೊಂದಲಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಮತ್ತು ಸಾರ್ವಜನಿಕ ಸನ್ಮಾನ ಸುಬ್ರಹ್ಮಣ್ಯದ ವಲ್ಲೀಶ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಅನೇಕ ಸಂಘ ಸಂಸ್ಥೆಗಳು, ನೂರಾರು ಅಭಿಮಾನಿಗಳು...
ಅಯ್ಯನಕಟ್ಟೆಯಲ್ಲಿ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಮೇ.30ರಂದು ಶುಭಾರಂಭಗೊಂಡಿತು. ಬೆಳ್ಳಾರೆ ಕೆಪಿಎಸ್ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀನಾಥ್ ರೈ ದೋಳ್ತೋಡಿ ದೀಪ ಬೆಳಗುವ ಮೂಲಕ ಟ್ಯೂಷನ್ ಸೆಂಟರ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಸಂಕಪ್ಪ ರೈ ಕಳಂಜ, ಕಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವಿಪ್ರಸಾದ್ ರೈ ಕಳಂಜ, ಟ್ಯೂಷನ್ ಸೆಂಟರ್ ನ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 2022- 23ನೇ ಶೈಕ್ಷಣಿಕ ಅವಧಿಯ ಅಂತಿಮ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಹಾವಿದ್ಯಾಲಯದ ತೃತೀಯ ಬಿಬಿಎ ವಿದ್ಯಾರ್ಥಿನಿ ಸಿಂಧೂರ ಕೆ. ಐದನೇ ರ‌್ಯಾಂಕ್ ಹಾಗೂ ಅಂತಿಮ ಪದವಿ ವಿದ್ಯಾರ್ಥಿನಿ ಶ್ರಾವ್ಯ ಎಂ.ಎಂ. ಇವರು ಹತ್ತನೇ ರ‌್ಯಾಂಕ್ ಪಡೆದಿರುತ್ತಾರೆ.ಬಿ.ಬಿ.ಎಂ. ವಿದ್ಯಾರ್ಥಿನಿಯಾಗಿರುವ ಸಿಂಧೂರ ರಾಮಕುಂಜದ ನಿವಾಸಿ. ಶ್ರಾವ್ಯ ಎಂ.ಎಂ. ಅವರು ಗುತ್ತಿಗಾರು ಗ್ರಾಮದ...
ಗುತ್ತಿಗಾರು : ಸ್ವಚ್ಛತೆಗಾಗಿ ಎಷ್ಟೆ ಜನ ಜಾಗೃತಿ ಮೂಡಿಸಿದರೂ ಕ್ಯಾರೆ ಅನ್ನದೇ ಕಸ ಎಸೆಯುವವರಿಗೆ ಗ್ರಾಮ ಪಂಚಾಯತ್ ದಂಡ ಪ್ರಯೋಗ ಮಾಡಿದೆ. ಎರಡು ದಿನದ ಹಿಂದೆ ಗುತ್ತಿಗಾರು-ಬಳ್ಪ ರಸ್ತೆಯ ಚತ್ರಪ್ಪಾಡಿ ಬಳಿ ಜೀಪಿನಲ್ಲಿ ಕಸ ತಂದು ಹಾಕಲಾಗಿತ್ತು. ಕಸ ಎಸೆದರನ್ನು ದಾಖಲೆ ಸಮೇತ ಪತ್ತೆ ಮಾಡಿ ಗ್ರಾ.ಪಂ. ರೂ. 1000 ದಂಡ ವಿಧಿಸಿ, ಕಸ ಎಸೆದವರಿಂದಲೇ...
Loading posts...
All posts loaded
No more posts
