- Sunday
- July 26th, 2026
ಸುಳ್ಯದಿಂದ ಅರಂತೋಡು ಮಾರ್ಗವಾಗಿ ಮರ್ಕಂಜ ವರೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತೇರ್ಥಮಜಲು ವರೆಗೆ ವಿಸ್ತರಣೆ ಮಾಡಲಾಗಿದೆ. ಬೆಳಿಗ್ಗೆ 7.45 ಕ್ಕೆ ಮರ್ಕಂಜದಿಂದ ಹೊರಟು ತೇರ್ಥಮಜಲು - ಮರ್ಕಂಜ - ಅಡ್ತಲೆ-ಅರಂತೋಡು ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಸೂಚಿಸಿರುತ್ತಾರೆ.
ಶ್ರಿಕೃಷ್ಣ ಭಜನಾ ಮಂದಿರ ಮೇನಾಲ ಇದರ ವಾರ್ಷಿಕ ಮಹಾಸಭೆಯು ಭಜನಾ ಮಂದಿರದ ಸಭಾಂಗಣದಲ್ಲಿ ಜೂ-೯ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರದ ನಿಕಟಪೂವಾಧ್ಯಕ್ಷರಾದ ಪ್ರಭೋದ್ ಶೆಟ್ಟಿ ಮೇನಾಲ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಮಂದಿರದ ಕರ‍್ಯದರ್ಶಿ ಸುಕುಮಾರ ಕಲ್ಲಗುಡ್ಡೆ ಹಾಗೂ ಹಿರಿಯರಾದ ಕಿಟ್ಟಣ್ಣ ರೈ ಇರಂತಮಜಲು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಾಲಕೃಷ್ಣ ಪಿ...
ಇತ್ತೀಚೆಗೆ ಕರ್ನಾಟಕ ಸರಕಾರದಿಂದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡು ಅಧಿಕಾರ ಸ್ವೀಕರಿಸಿದ ನಿವೃತ್ತ ಐ. ಪಿ. ಎಸ್ ಅಧಿಕಾರಿ ನಿಸಾರ್ ಅಹ್ಮದ್ ರವರನ್ನು ಬೆಂಗಳೂರಿನ ಕೆಎಂಡಿಸಿ ಭವನ ದಲ್ಲಿ ಭೇಟಿಯಾದ ಸುಳ್ಯದ ಪ್ರಮುಖ ನಾಯಕರು ನಿಸಾರ್ ಅಹ್ಮದ್ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಸಾರ್ ಅಹ್ಮದ್ ರವರು ದ. ಕ. ಜಿಲ್ಲೆಗೆ...
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೆಲ್ಲಿತೀರ್ಥ, ಗುರುಪುರ ಮೂಡಬಿದ್ರೆಯ ಕಲ್ಲಬೆಟ್ಟು, ಮೂಲ್ಕಿಯ ಕಮ್ಮಾಜೆ, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳದ ವಗ್ಗ, ಪುಂಜಾಲಕಟ್ಟೆ ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ/ ಡಾ. ಬಿ. ಆರ್. ಅಂಬೇಡ್ಕರ್/ ಇಂದಿರಾ ಗಾಂಧಿ/ನಾರಾಯಣ ಗುರು ವಸತಿ ಶಾಲೆಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ 7 ಮತ್ತು 8ನೇತರಗತಿಯಲ್ಲಿ...
ಯುವಕನೋರ್ವ ಕಳೆದೆರಡು ವರ್ಷಗಳಿಂದ ತನ್ನನ್ನು ಪ್ರೀತಿಸಿ ಇದೀಗ ಸಂಪರ್ಕಕ್ಕೆ ಸಿಗದೇ ವಂಚಿಸಿ ನಾಪತ್ತೆಯಾಗಿದ್ದಾನೆ ಎಂದು ಯುವತಿಯೋರ್ವಳು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ ಘಟನೆ ವರದಿಯಾಗಿದೆ. ಎಣ್ಮೂರು ಗ್ರಾಮದ ನಿಂತಿಕಲ್ಲು ಕಾಲನಿ ನಿವಾಸಿ ಅಶ್ವಿತ್ ಎಂಬ ಯುವಕ ಹಾಗೂ ಬೆಳ್ಳಾರೆ ಮೂಲದ ಯುವತಿ ಪರಸ್ಪರ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ಇದೀಗ ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವುದಾಗಿ...
ಸುಳ್ಯ: ಸುಳ್ಯ ಶಾಸಕರು ಪ್ರತಿ ಸೋಮವಾರ ಸುಳ್ಯ ತಾಲ್ಲೂಕು ಪಂಚಾಯತ್ ನ ತಮ್ಮ ಕಛೇರಿಯಲ್ಲಿ ಮತ್ತು ಪ್ರತಿ ಮಂಗಳವಾರ ಕಡಬ ಮಿನಿವಿಧಾನ ಸೌಧ ಕಛೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 3ಗಂಟೆಯವರೆಗೆ ಸಾರ್ವಜನಿಕರಿಗೆ ತಮ್ಮ ಕುಂದು ಕೊರತೆಗಳನ್ನು ಆಲಿಸಲು ಕಛೇರಿಯಲ್ಲಿ ಲಭ್ಯರಿದ್ದಾರೆ ಎಂದು ಶಾಸಕರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ಗಾಂಧಿನಗರದ ಕೆಪಿಎಸ್ ಶಾಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿದರು.ಕೋಟೆ ಫೌಂಡೇಶನ್ ವತಿಯಿಂದ ಕೊಡಲ್ಪಟ್ಟ ಡೆಸ್ಕ್ ಮತ್ತು ಬೆಂಚುಗಳನ್ನು ಮತ್ತು ಸರಕಾರದ ಅನುದಾನದಿಂದ ರಚಿಸಿದ ಸುಸಜ್ಜಿತ ಗಣಕಯಂತ್ರ ವಿಭಾಗ ಹಾಗೂ 2023-2024ರಲ್ಲಿ ಹತ್ತನೆತರಗತಿಯಲ್ಲಿ ವಿಶಿಷ್ಟ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು ಹಿಂದಿನ ಕಾಲದಲ್ಲಿ...
ಕಾಳುಮೆಣಸಿನ ದರ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ನಿರೀಕ್ಷೆಯಲ್ಲಿದ್ದಾರೆ. ಹವಾಮಾನದ ಕಾರಣ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ ಎನ್ನಲಾಗಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಕಾಳುಮೆಣಸು ಕೆ.ಜಿ. ಗೆ ರೂ. 680 ರ ವರೆಗೆ ಏರಿಕೆಯಾಗಿದ್ದು, ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ ಆಗಿದೆ. ಆದರೆ, 2018 ರಲ್ಲಿ ಕೆ.ಜಿ...
ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ ಸಮಾಜದ ಅಂಗೀ ಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ(ಡಿ.ಎಂ.ಇ.ಡಿ) ಪೂರ್ಣಿಗೊಳಿಸಿದ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಆಯ್ಕೆಯಾಗಿದ್ದಾರೆ. ಕಾಂಚನ ಕೆವಿಜಿ ಐ.ಪಿ.ಎಸ್ ಸುಳ್ಯ, ಪೂರ್ಣಿಮಾ ವಿದ್ಯಾರಶ್ಮಿ ವಿದ್ಯಾಲಯ ಸವಣೂರು,...
ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಜೂ.09ರಂದು ಮಾತೃಶಕ್ತಿ, ದುರ್ಗಾವಾಹಿನಿಯ ನೂತನ ಸಮಿತಿ ರಚನೆಯಾಯಿತು.ಮಾತೃಶಕ್ತಿಯ ಸಂಚಾಲಕಿಯಾಗಿ ಲತಾ.ಯಂ ರೈ, ಸಹ ಸಂಚಾಲಕಿಯಾಗಿ ಸುಜಾತ ಕುರುಂಜಿ ಹಾಗೂ ಹರಿಣಾಕ್ಷಿ ರೈ ಮೇನಾಲ.ದುರ್ಗಾ ವಾಹಿನಿ ಸಂಚಾಲಕಿಯಾಗಿ ಪ್ರೀತಿಕಾ ಚೆಮ್ನೂರು, ಸಹ ಸಂಚಾಲಕಿ ಯಾಗಿ ಚಂದ್ರಿಕಾ ಹೋದ್ದೇಟಿ ಹಾಗೂ ಗೀತಾಶ್ರಿ ಕಾಯರ್ತೋಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ...
Loading posts...
All posts loaded
No more posts
