- Tuesday
- June 23rd, 2026
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ಅರೆ ಭಾಷೆ ಸಂಸ್ಕೃತಿ ಮತ್ತು ಕಲಾ ಶಿಬಿರವನ್ನು ಏರ್ಪಡಿಸಲಾಯಿತು. ಶಿಬಿರವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ ಇವರು ಉದ್ಘಾಟಿಸಿ “ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಭಾಷೆಯನ್ನು ಮಾತನಾಡುವವರಿಗೆ...
ಬೆಳ್ಳಾರೆ ಗ್ರಾಮದ ಬೆಳ್ಳಾರೆ ನಿವಾಸಿ ಗಂಗಾಧರ ಶೆಟ್ಟಿ ಮುಂಡೇಪು (76 ) ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಏ.13 ರಂದು ನಿಧನರಾದರು.ಮೃತರು ಪತ್ನಿ ಯಮುನಾ, ಪುತ್ರರಾದ ರಾಘವ, ವೆಂಕಟ್ರಮಣ, ವಿಜಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬೆಳ್ಳಾರೆಯ ಸಾಮಾಜಿಕ ಸಂಘಟಕರೂ, ಈಶ್ವರಮಂಗಳದ ಶ್ರೀ ಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವ ಸಮಿತಿಗೆ ಬೆಳ್ಳಾರೆಯ ಸಾಮಾಜಿಕ ಜಾಲತಾಣದ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿರುವ ಪ್ರೇಮಚಂದ್ರ ಬೆಳ್ಳಾರೆಯವರಿಗೆ ಅಲ್ಲಿನ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ ರವೀಶ್ ಪಡುಮಲೆಯವರು ಗೌರವಾರ್ಪಣೆ ಮಾಡಿದರು. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)
ದಿನಾಂಕ : 13 ಏಪ್ರಿಲ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 13) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-487/490ಹಳೆ ಅಡಿಕೆ...
ಪೆರಾಜೆಯ ಕಲ್ಚರ್ಪೆ ಬಳಿ ದಮಯಂತಿ ಎಂಬವರ ಜಾಗದಲ್ಲಿರುವ ಪಾಳು ಭಾವಿಗೆ ಕಳೆದ ರಾತ್ರಿ ಆನೆಮರಿಯೊಂದು ಬಿದ್ದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆ ಮರಿ ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆನೆ ಮರಿ ಮೇಲೆ ಬರಲು ಹಿಟಾಚಿ ಬಳಸಿ ದಾರಿ ಮಾಡಲಾಗುತ್ತಿದೆ.
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:13/04/2026 ಸೋಮವಾರ*01,🐏ಮೇಷರಾಶಿ🐏*📃,ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ದೀರ್ಘಾವಧಿಯ ಸಾಲ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಫಲ...
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪೆರಾಜೆ ಗ್ರಾಮದ ಕೊಳಂಗಾಯ ಕುಟುಂಬದ ಇಬ್ಬರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.ಬೆಂಗಳೂರಿನ ಯಲಹಂಕದ ರೇವಾ ಇಂಡಿಪೆಂಡೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯಶ್ ಕೊಳಂಗಾಯ ವಾಣಿಜ್ಯ ವಿಭಾಗದಲ್ಲಿ 580(ಶೇ.96.6) ಅಂಕಗಳನ್ನು ಪಡೆದುಕೊಂಡು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಪೆರಾಜೆ ಗ್ರಾಮದ ಕೊಳಂಗಾಯ ಲೋಲಜಾಕ್ಷ ಹಾಗೂ ಸವಿತಾ.ಕೆ.ಎಲ್ ದಂಪತಿಗಳ ಪುತ್ರ.ಕುಶಾಲನಗರದ...
ಪೆರಾಜೆಯಲ್ಲಿ ಸತೀಶ್ ಎಚ್.ಆರ್. ಹೊದ್ದೆಟ್ಟಿ ಮಾಲಕತ್ವದ ಕನ್ನಿಕಾ ಇಲೆಕ್ಟ್ರಿಕಲ್ ಏ.12 ರಂದು ಶುಭಾರಂಭಗೊಂಡಿತು. ಇದರ ಅಂಗವಾಗಿ ಗಣಹೋಮ ನೆರವೇರಿತು.ಇಲ್ಲಿ ಎಲ್ಲಾ ಇಲೆಕ್ಟ್ರಿಕಲ್ ಉಪಕರಣಗಳ ಮಾರಾಟ ಮತ್ತು ದುರಸ್ತಿ, ವಿದ್ಯುತ್ ವಯರಿಂಗ್, ಪ್ಲಂಬಿಂಗ್ ಕೆಲಸ ಹಾಗೂ ಸೋಲಾರ್ ಪಂಪ್ ಅಳವಡಿಸಿಕೊಡಲಾಗುವುದು. ಜನರೇಟರ್ ಬಾಡಿಗೆಗೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಶೇ.98 ಫಲಿತಾಂಶ ದಾಖಲಿಸಿದ ಸುಳ್ಯದ ರೋಟರಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ರೋಟರಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ಶೇ.98 ಫಲಿತಾಂಶ ದಾಖಲಿಸಿದೆ. ಒಟ್ಟು 129 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 127 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 67 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ...
ಅಂತಾರಾಜ್ಯ ರಸ್ತೆಯಾಗಿರುವ ಸುಳ್ಯ ಕೋಲ್ಚಾರು-ಬಂದಡ್ಕ ರಸ್ತೆಯಲ್ಲಿರುವ ನಾಗಪಟ್ಟಣ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಏ.15 ರಿಂದ ಮೇ.31 ರವರೆಗೆ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಸೇತುವೆ ಮೇಲೆ ಸಂಚಾರ ಬಂದ್ ಆಗಲಿದ್ದು ಪರ್ಯಾಯ ಮಾರ್ಗ ಬಳಸಲು ಇಲಾಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸುಳ್ಯಕ್ಕೆ ಸಂಚರಿಸುವ ಪ್ರಯಾಣಿಕರು ನಾರ್ಕೋಡು - ಮೇನಾಲ ಕಾಂತಮಂಗಲ ಸುಳ್ಯ ರಸ್ತೆಯನ್ನು ಬಳಸಬಹುದಾಗಿದೆ.
Loading posts...
All posts loaded
No more posts
