- Friday
- July 24th, 2026
ಅಜ್ಜಾವರ : ಗಣೇಶೋತ್ಸವ ಸೇವಾ ಸಮಿತಿ ರಚನೆ – ಅಧ್ಯಕ್ಷರಾಗಿ ಗಿರಿಧರ ನಾರಾಲು, ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ನಾರಾಲು
ಅಜ್ಜಾವರ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 2024-25 ರ ಸಾಲಿನ ನೂತನ ಸಮಿತಿ ರಚನೆಯು ಇತ್ತೀಚೆಗೆ ಅಜ್ಜಾವರ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಅಧ್ಯಕ್ಷರಾಗಿ ಗಿರಿಧರ ನಾರಾಲು, ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ನಾರಾಲು ಆಯ್ಕೆಯಾದರು. ಪದಾಧಿಕಾರಿಗಳಾಗಿ ವಿನೋದ್ ಪಡ್ಡಂಬೈಲು , ರೂಪಾನಂದ ಕರ್ಲಪ್ಪಾಡಿ, ಲೋಕೇಶ್ ಮುಡೂರು, ಶಿವಾನಂದ...
ವಳಲಂಬೆ : ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ, ಹಣ್ಣಿನ ಗಿಡಗಳ ವಿತರಣೆ ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ
ಗುತ್ತಿಗಾರು ಲಯನ್ಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ಪಂಜ ವಲಯ ಇದರ ಆಶ್ರಯದಲ್ಲಿ ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣೆ ಮತ್ತು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಆ.10 ರಂದು ವಳಲಂಬೆ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಜ ವಲಯಾರಣ್ಯಾಧಿಕಾರಿ ಸಂತೋಷ ರೈ ನೆರವೇರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ|ಕುಶಾಲಪ್ಪ ತುಂಬತ್ತಾಜೆ ಕಾರ್ಯಕ್ರಮದ ಅಧ್ಯಕ್ಷತೆ...
ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕೊಂದು ಡಿಕ್ಕಿಯಾಗಿ ಬೈಕ್ ಮತ್ತು ಜೀಪು ಪಲ್ಟಿಯಾಗಿ ಹಲವರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ. ಜೀಪಿನಲ್ಲಿ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಅಪಘಾತ ಸಂಭವಿಸಿದ ಪರಿಣಾಮವಾಗಿ ಜೀಪು ಪಲ್ಟಿಯಾಗಿದೆ. ಬೈಕ್ ಸವಾರ ಆಲೆಟ್ಟಿಯ ಕಂಟ್ರಾಕ್ಟರ್ ಶಶಿಧರನ್ ಎಂದು ತಿಳಿದು ಬಂದಿದೆ. ಗಾಯಗೊಂಡ ಬೈಕ್ ಸವಾರ ಹಾಗೂ...
ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕೊಂದು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಜೀಪು ಪಲ್ಟಿಯಾಗಿ ಜೀಪಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ. ಜೀಪಿನಲ್ಲಿ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಅಪಘಾತ ಸಂಭವಿಸಿದ ಪರಿಣಾಮವಾಗಿ ಜೀಪು ಪಲ್ಟಿಯಾಗಿದೆ. ಬೈಕ್ ಸವಾರ ಆಲೆಟ್ಟಿಯ ಕಂಟ್ರಾಕ್ಟರ್ ಶಶಿಧರನ್ ಎಂದು ತಿಳಿದು ಬಂದಿದ್ದು ಅವರನ್ನು ತಕ್ಷಣ...
ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು, ಪೂಜಾ ಕೈಂಕರ್ಯಗಳನ್ನು ಶ್ರೀ ಗೋಪಾಲಕೃಷ್ಣ ಭಟ್ ನೆರವೇರಿಸಿದರು, ನಾಗ ತಂಬಿಲ, ಹಾಲಿನ ಅಭಿಷೇಕ ವಿಶೇಷ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು, ಈ ಸಂದರ್ಭದಲ್ಲಿ ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ಮಂಡೆಕೋಲು ಗ್ರಾಮದ ಪೇರಾಲಿನ ಹರ್ಷಿತ್ ರವರಿಗೆ ಹಠಾತ್ ಬ್ರೈನ್ ಹ್ಯಾಮರೇಜ್ ಮೆದುಳಿನ ರಕ್ತ ಸ್ರಾವ ಉಂಟಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯ ವೆಚ್ಚ ಸುಮಾರು ರೂ 7.50 ಲಕ್ಷದಷ್ಟು ತಗಲಬಹುದು ಎಂದು ವೈದ್ಯರು ತಿಳಿಸಿರುವ ಹಿನ್ನಲೆಯಲ್ಲಿ ಮನೆಯವರು ಆ ವೆಚ್ಚವನ್ನು ಭರಿಸಲು ಕಷ್ಟ ಸಾಧ್ಯವಾಗಿರುವುದೆಂದು ತಿಳಿಸಿರುವುದರಿಂದ ಸಮಾಜದ ಎಲ್ಲಾ ಬಂಧುಗಳು ತಮ್ಮ ಕೈಯಿಂದ ಸಾಧ್ಯವಾದಷ್ಟು...
ಮಡಪ್ಪಾಡಿ ಗ್ರಾಮದ ಬಾಳಿಕಳ ಬೂಡು ಶ್ರೀ ಉಳ್ಳಾಕುಲು ಹಾಗೂ ಪದ್ಮಾಂಬ ದೇವಿ ಸಂಬಂಧಿತ ನಾಗ ಸಾನಿಧ್ಯದಲ್ಲಿ ನಾಗರ ಪಂಚಮಿಯ ವಿಶೇಷ ನಾಗತಂಬಿಲ ಸೇವೆ ನಡೆಯಿತು.ವ್ಯಾಪ್ತಿಗೆ ಒಳಪಟ್ಟ ಭಕ್ತಾದಿಗಳು ಈ ತಂಬಿಲ ಸೇವೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ಆಶ್ಲೇಷ ಪೂಜೆ ನೆರವೇರಿತು. ಬೆಳಿಗ್ಗೆ ನಾಗದೇವರಿಗೆ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ನಾಗತಂಬಿಲ ಹಾಗೂ ಆಶ್ಲೇಷ ಪೂಜೆ ನಡೆಯಿತು. ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ಎಲಿಮಲೆ ಬೂತ್ ನ ಸಭೆ ಆ.04 ರಂದು ನಡೆಯಿತು. ಸಭೆಯಲ್ಲಿ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೃಷ್ಣಯ್ಯ ಮೂಲೆತೋಟ, ಶಕ್ತಿ ಕೇಂದ್ರದ ಸಹ ಪ್ರಮುಖ್ ಇಂದಿರೇಶ್ ಗುಡ್ಡೆ, ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಕೇರ, ಸವಿತಾ ಕಾಯರ, ಗ್ರಾ.ಪಂ.ಸದಸ್ಯೆ ಪ್ರೇಮಲತಾ ಕೇರ, ವಿಕ್ರಾಂತ್ ಚಳ್ಳ ಭಾಗವಹಿಸಿದ್ದರು. ಈ ಸಭೆಯಲ್ಲಿ...
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಲಂಬೆ ಇದರ ಮಹಾಸಭೆ ಆ.09 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಇಂದು ನಡೆಯಿತು. ಈ ಸಭೆಯಲ್ಲಿ 2024-24 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹರಿಶ್ಚಂದ್ರ ಕೇಪಳಕಜೆ, ಪ್ರಧಾನ ಕಾರ್ಯದರ್ಶಿಯಾಗಿ ದಿಗಂತ್ ಕಡ್ತಲ್ ಕಜೆ, ಕೋಶಾಧಿಕಾರಿಯಾಗಿ ವೆಂಕಟ್ರಮಣ ಹೊಸೊಳಿಕೆ ಇವರನ್ನು ಅವಿರೋಧವಾಗಿ...
Loading posts...
All posts loaded
No more posts
