ಎಡಮಂಗಲ : ಮಾಲೆಂಗಿರಿ ಸೇತುವೆ ಬದಿ ಕುಸಿತ

ಎಡಮಂಗಲ ಸಂಪರ್ಕ ರಸ್ತೆ ಮಾಲೆಂಗಿರಿ ಸೇತುವೆ ಬದಿ ಮಣ್ಣು ಕುಸಿದು ಬಿದ್ದಿದ್ದು ಅಪಾಯದಲ್ಲಿದೆ.ಇನ್ನಷ್ಟು ಮಣ್ಣು ಕುಸಿದ್ದು ಬಿದ್ದರೆ ಎಡಮಂಗಲ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು ಸೇತುವೆ ಹಾನಿಯಾದರೆ ಸಮಸ್ಯೆ ಎದುರಾಗಲಿದ್ದು ಜನಪ್ರತಿನಿಧಿಗಳು,ಅಧಿಕಾರಿಗಳು ಗಮನಹರಿಸಬೇಕಾಗಿ ಸಾರ್ವಜನಿಕರು ತಿಳಿಸಿದ್ದಾರೆ.

ಗುರುಂಪುವಿನಲ್ಲಿ ಬೈಕ್ ಜೀಪ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಮೃತ್ಯು

ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿ ಯವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ‌ ಆ.10 ರಂದು ಬೆಳಗ್ಗೆಆಲೆಟ್ಟಿಯಿಂದ ಸುಳ್ಯಕ್ಕೆ ತಮ್ಮ ಬೈಕಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ...
Ad Widget

ವಿಪತ್ತು ನಿರ್ವಹಣೆ , ಗ್ರಾಮದ ಆಗುಹೋಗುಗಳಿಗೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಮಾದರಿ ಪಂಚಾಯತ್

ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್ ಕುರಿತ ಮಾಹಿತಿ ಇಲ್ಲಿದೆ ಸಂಪಾಜೆ : ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯ ಪಕ್ಕದಲ್ಲಿಯೇ ಹೊಳೆಯು ಹರಿಯುತ್ತಿದ್ದು ಕೆಲ ವರ್ಷಗಳ ಹಿಂದೆ ಹೊಳೆಯ ನೀರು ನುಗ್ಗಿ ಭಾರಿ ಅವಾಂತರವೇ ಸೃಷ್ಟಿಯಾಗಿತ್ತು. ಇದಾದ ಬಳಿಕ ಸಂಘಟನ ಚತುರ ಈ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಜಿ ಕೆ ಹಮೀದ್...

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗೀತಗಾಯನ ಸ್ಪರ್ಧೆ – ಬಾಳಿಲ ಪ್ರಾಥಮಿಕ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆ ಆಯೋಜಿಸಿದ ಗೀತಗಾಯನ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸ್ಕೌಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಗೈಡ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡವನ್ನು ಶಾಲಾ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ತರಬೇತುಗೊಳಿಸಿದ್ದರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಕೊಲ್ಲಮೊಗ್ರು ಪೋಸ್ಟ್ ಮೆನ್ ಅಬ್ದುಲ್ ಜಬ್ಬಾರ್ ನಿಧನ

ಕೊಲ್ಲಮೊಗ್ರದಲ್ಲಿ ಅಂಚೆ ಪಾಲಕರಾಗಿರುವ ಜಾಲ್ಸೂರು ಮೂಲದ ಅಬ್ದುಲ್ ಜಬ್ಬಾರ್ ಅವರು ಆ.12 ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.ಚಾಳೆಪ್ಪಾಡಿ ಎಂಬಲ್ಲಿ ರೂಮ್ ನಲ್ಲಿ ವಾಸವಿರುವ ಅವರು ಅಲ್ಲೇ ನಿಧನರಾಗಿದ್ದು, ಅವರಿಗೆ 55 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ, ಮಕ್ಕಳು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೆಹಲಿಯಲ್ಲಿ ನಡೆಯುವ 78 ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಸುಳ್ಯದ ಅಚ್ರಪ್ಪಾಡಿ ಶಾಲೆಯ ಮಾಜಿ ಶಿಕ್ಷಕಿ ಶ್ವೇತಾ ವೇಣುಗೋಪಾಲ್ ಸೇರಿ ಜಿಲ್ಲೆಯ ಮೂವರಿಗೆ ಅವಕಾಶ

ಹೊಸದಿಲ್ಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ವಿಶೇಷ ಅವಕಾಶ ಪಡೆದುಕೊಂಡಿದ್ದು, ಇದರಲ್ಲಿ ಮೈಸೂರು ಶೈಕ್ಷಣಿಕ ವಿಭಾಗದಿಂದ ದ.ಕ. ಜಿಲ್ಲೆಯ ಓರ್ವ ವಿದ್ಯಾರ್ಥಿನಿ, ಶಿಕ್ಷಕಿ ಹಾಗೂ  ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರಿಗೆ ಭಾಗವಹಿಸಲು ವಿಶೇಷ ಆಮಂತ್ರಣ ದೊರಕಿದೆ.ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ ನಾಲ್ಯಪದವು ಕುವೆಂಪು...

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು, ಪುತ್ತೂರುಇದರ ಆಶ್ರಯದಲ್ಲಿ ,ಗೋಸೇವಾ ಗತಿ ವಿಧಿ,ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ  ಇದರ ಸಹಯೋಗದಲ್ಲಿ"Answer for cancer " ಖ್ಯಾತಿಯ ಡಾ .ಡಿ .ಪಿ .ರಮೇಶ್ , ಆಯುರ್ವೇದ ತಜ್ಞ ವೈದ್ಯರು ಹಾಗೂ ಪಂಚಗವ್ಯ ಚಿಕಿತ್ಸಾ ತಜ್ಞರು, ಬೆಂಗಳೂರು...

ಬೆಟ್ಟ : ಯಾದವ ಸಮಿತಿ ಆಶ್ರಯದಲ್ಲಿ ಆಟಿಡೊಂಜಿ ದಿನ ಹಾಗೂ ಗ್ರಾಮೀಣ ಕ್ರೀಡಾಕೂಟ

ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿ ಇದರ ಆಶ್ರಯದಲ್ಲಿ ಸಾರ್ವಜನಿಕರಿಗೆ ಎರಡನೇ ವರ್ಷದ 'ಆಟಿಡೊಂಜಿ ದಿನ ಹಾಗೂ ಗ್ರಾಮೀಣ ಕ್ರೀಡಾಕೂಟ ಆ. 11ರಂದು ಬೊಳ್ಳಾಜೆ ಶಾಲಾ ವಠಾರಲ್ಲಿ ನಡೆಯಿತು. ಮಂಗಳೂರಿನ ಖ್ಯಾತ ವೈದ್ಯರಾದ ಡಾ| ಶ್ರೀರಾಮ ಭಟ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಕಿಲಾರ್ಕಜೆ...

ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಮಾನವ ಸರಪಳಿ

ಸುಳ್ಯದ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ಆಕ್ರಮಣ ಅತ್ಯಚಾರ ದೌರ್ಜನ್ಯವನ್ನು ಖಂಡಿಸಿ ಹಿಂದೂ ಬಾಂಧವರು ಸುಳ್ಯ ನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಜ್ಯೋತಿ ವೃತ್ತದ ಬಳಿಯಿಂದ ಮಾನವ ಸರಪಳಿ ರಚಿಸಿ ಪ್ಲೇ ಆಫ್ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ವಿವಿಧ ಹಿಂದೂ ಸಂಘಟನೆಯ...

ಕಲ್ಮಕಾರು ಭಾಗದಲ್ಲಿ ಭಾರೀ ಮಳೆ – ಉಕ್ಕಿ ಹರಿಯುತ್ತಿರುವ ನದಿ

ಕೊಲ್ಲಮೊಗ್ರ,ಕಲ್ಮಕಾರು ಸುತ್ತಮುತ್ತಲಿನ ಪರಿಸರದಲ್ಲಿ ಸಂಜೆಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ನದಿಯು ಉಕ್ಕಿ ಹರಿಯುತ್ತಿದ್ದು, ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. https://youtube.com/shorts/inpk-h88jf4?si=53dNlI0-3cSdQ6Do ಮಳೆಗೆ ನೀರು ಜಾಸ್ತಿ ಹರಿದು ಬರುತ್ತಿದೆ. ಆದರೇ ಜಾಲತಾಣಗಳಲ್ಲಿ ಬರುವಂತೆ ಮರದ ದಿಮ್ಮಿಗಳು ತೇಲಿಬರುತ್ತಿಲ್ಲ, ಜನ  ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸ್ಥಳೀಯರು ಅಮರ ಸುದ್ದಿಗೆ ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!