ಸೆ.30 : ಅಂಚೆ ಇಲಾಖೆಯಿಂದ ಚೆನ್ನಕೇಶವ ಪಾರೆಪ್ಪಾಡಿ ಸೇವಾ ನಿವೃತ್ತಿ

ಭಾರತೀಯ ಅಂಚೆ ಇಲಾಖೆಯಲ್ಲಿ ಕಳೆದ 42 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಚೆನ್ನಕೇಶವ ಪಾರೆಪ್ಪಾಡಿಯವರು ಗುತ್ತಿಗಾರು ಆರಂತೋಡು, ಸುಳ್ಯ, ದೊಡ್ಡತೋಟ, ನೆಟ್ಟಣ, ಸುಬ್ರಹ್ಮಣ್ಯ ಹಾಗೂ ಪ್ರಸ್ತುತ ಸಂಪಾಜೆ ಅಂಚೆಕಛೇರಿಯಲ್ಲಿ ಸೆ.30 ರಂದು ಸೇವಾ ನಿವೃತ್ತರಾಗಲಿದ್ದಾರೆ. ಚೆನ್ನಕೇಶವ ರವರು ನಾಲ್ಕೂರು ಗ್ರಾಮದ ಮೆಟ್ಡಿನಡ್ಕದ ಪಾರೆಪ್ಪಾಡಿ ದಿ. ಸುಂದರ ಗೌಡ ಮತ್ತು ಶ್ರೀಮತಿ ಬಾಲಕಿ...

ವಿಧ್ಯಾರ್ಥಿನಿ ಮೇಲೆ ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿತನ ಬಂಧನ .

ಸುಳ್ಯ : ಸುಳ್ಯ ಇಂಜಿನಿಯರಿಂಗ್ ಕಾಲೇಜ್ ವಿಧ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿತನಾದ ಅಬ್ದುಲ್ ನಿಯಾಝ್ ನನ್ನು ಸುಳ್ಯ ಪೋಲಿಸರು ಬಂಧಿಸಿ ಕರೆತಂದಿದ್ದಾರೆ . ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಬಳಿಕ ಅಲ್ಲಿಂದ ತೆರಳಿ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇದೀಗ ಈತನನ್ನು ಪೋಲಿಸ್ ಅಧಿಕಾರಿಗಳು ಬಂಧಿಸಿ ಕರೆತಂದಿದ್ದಾರೆ...
Ad Widget

ಸುಳ್ಯ ನಗರ ಪಂಚಾಯತ್ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ.

ಸುಳ್ಯ ನಗರ ಪಂಚಾಯತ್ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯು ಸೆ.24 ರಂದು ಸುಳ್ಯ ಲಯನ್ಸ್ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಮಾತನಾಡಿ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಿಸಿಕೊಂಡು ಕೆಲಸ ಮಾಡಬೇಕು ಎಂದು...

ಅಲಂಕಾರು: ಪಂಡಿತ್ ದೀನದಯಾಳು ಉಪಾಧ್ಯಾಯರವರ ಜನ್ಮದಿನ ಕಾರ್ಯಕ್ರಮ

ಇಂದು ಸೆ 25, ಪಂಡಿತ್ ದೀನದಯಾಳು ಉಪಾಧ್ಯಾಯರವರ ಜನ್ಮದಿನವನ್ನು ಇಂದು ಭಾಜಪ ಅಲಂಕಾರು ಶಕ್ತಿಕೇಂದ್ರದ ವತಿಯಿಂದ ಅಲಂಕಾರು ಶಕ್ತಿಕೇಂದ್ರ ಪ್ರಮುಖರಾದ ಜಯಕರ ಪೂಜಾರಿ ಅವರ ಮನೆಯಲ್ಲಿ ಆಚರಿಸಲಾಯಿತು.ಮಂಡಲಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆಯವರುಪ್ರಸ್ತಾವಿಕ ನುಡಿಗಳನ್ನಾಡಿದರು, ತತ್ವಸಿದ್ದಂತಗಳನ್ನು, ಆದರ್ಶಗಳನ್ನು ಶಾಸಕರಾದ ಭಾಗೀರಥಿ ಮುರುಳ್ಯ ಸಭೆಯಲ್ಲಿ ತಿಳಿಸಿದರು,ಸಂದರ್ಭದಲ್ಲಿ ಹಿರಿಯರಾದ ಈಶ್ವರ ಭಟ್, ಅಲಂಕಾರು ಶಕ್ತಿ ಕೇಂದ್ರ ಪ್ರಮುಖರಾದ...

ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಜಾ – ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರಿನಲ್ಲಿ ಮೂಡ ಸೈಟ್ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಅವರ ತನಿಖೆ ನಡೆಸಬೇಕೆಂದು ಖಾಸಗಿ ವ್ಯಕ್ತಿಗಳು ನೀಡಿದ ಅರ್ಜಿಯನ್ನು ರಾಜ್ಯಪಾಲರು ಪುರಸ್ಕರಿಸಿ ಅನುಮತಿ ನೀಡಲಾಗಿತ್ತು. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ ನ ಏಕ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಸ್ತೃತ ವಿಚಾರಣೆ ಬಳಿಕ ನ್ಯಾಯಾಲಯವು ರಾಜ್ಯಪಾಲರು ಅನುಮತಿ ನೀಡಿದ್ದು ಸರಿ...

ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಜಾ – ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರಿನಲ್ಲಿ ಮೂಡ ಸೈಟ್ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಅವರ ತನಿಖೆ ನಡೆಸಬೇಕೆಂದು ಖಾಸಗಿ ವ್ಯಕ್ತಿಗಳು ನೀಡಿದ ಅರ್ಜಿಯನ್ನು ರಾಜ್ಯಪಾಲರು ಪುರಸ್ಕರಿಸಿ ಅನುಮತಿ ನೀಡಲಾಗಿತ್ತು. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ ನ ಏಕ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಸ್ತೃತ ವಿಚಾರಣೆ ಬಳಿಕ ನ್ಯಾಯಾಲಯವು ರಾಜ್ಯಪಾಲರು ಅನುಮತಿ ನೀಡಿದ್ದು ಸರಿ...

ಕೊಲ್ಲಮೊಗ್ರು : ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕುರುಂಜಿಬಾಗ್ ಸುಳ್ಯ, ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ(ರಿ.) ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು, ಗ್ರಾಮ ಪಂಚಾಯತ್ ಕೊಲ್ಲಮೊಗ್ರು, ಯುವಕ ಮತ್ತು ಯುವತಿ ಮಂಡಲ ಕೊಲ್ಲಮೊಗ್ರು ಇವುಗಳ ಸಹಭಾಗಿತ್ವದಲ್ಲಿ ಸೆ.24 ರಂದು ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರವು...

ಕಲ್ಮಡ್ಕ : ಪೋಷಣ್ ಮಾಸಾಚರಣೆ

ಕಲ್ಮಡ್ಕ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಸಪ್ತ ಗೊಂಚಲು ಸಮಿತಿ ಕಲ್ಮಡ್ಕ ಗ್ರಾಮ ಪಂಚಾಯಿತ್ ಕಲ್ಮಡ್ಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ಶಿವಗೌರಿ ಸಭಾಂಗಣ ಪಡ್ಪಿನಂಗಡಿ ಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಡಾ ಮಂಜುನಾಥ ಆರೋಗ್ಯ ದ ಬಗ್ಗೆ...

ಉದ್ಯೋಗ ನಿಮಿತ್ತ ವಿಶಾಕ್ ಇರಂತಮಜಲು ದುಬೈಗೆ

ಅಜ್ಜಾವರ ಗ್ರಾಮದ ಗೋಪಾಲ ಇರಂತಮಜಲು ಇವರ ಪುತ್ರ ವಿಶಾಕ್ ಇವರು ಉದ್ಯೋಗದ ನಿಮಿತ್ತ ದುಬೈಗೆ ತೆರಳಲಿದ್ದಾರೆ.

ವಿಜಯ ಕುಮಾ‌ರ್ ಸುಳ್ಯರವರಿಗೆ “ಗಾಯನ ರತ್ನ” ಪ್ರಶಸ್ತಿ ಪ್ರದಾನ

ಚಿತೇಶ್ ಸಂಗೀತ ಬಳಗ ಐವರ್ನಾಡು ಸುಳ್ಯ ಇದರ ಆಶ್ರಯದಲ್ಲಿ ಸೆ.22 ರಂದು ಸ.ಹಿ.ಪ್ರಾ. ಶಾಲೆ ಐವರ್ನಾಡು ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆದ ಸಂಗೀತ ಸ್ಪರ್ಧೆ (ಕರೋಕೆ) ನನ್ನ ಹಾಡು ನನ್ನದು ಕಾರ್ಯಕ್ರಮದಲ್ಲಿ ವಿಜಯಕುಮಾ‌ರ್ ಸುಳ್ಯ ಇವರು ಹಾಡಿ “ಗಾಯನ ರತ್ನ 2024” ಪ್ರಶಸ್ತಿ ಪಡೆದಿರುತ್ತಾರೆ. ಪ್ರಸ್ತುತ ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ತು...
Loading posts...

All posts loaded

No more posts

error: Content is protected !!