ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚೊಕ್ಕಾಡಿಯ ಸತ್ಯಸಾಯಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮೇಲುಗೈ

ಚೊಕ್ಕಾಡಿ ಹೈಸ್ಕೂಲ್ ಕುಕ್ಕುಜಡ್ಕದಲ್ಲಿ ಸೆ. 23 ರಂದು ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ಬಾಲಕಿಯರ ತಂಡ ಪ್ರಥಮ, ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಪ್ರೌಢಶಾಲಾ ವಿಭಾಗದಲ್ಲಿ ಬಾಲಕ, ಬಾಲಕಿಯರು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುಳ್ಯಕ್ಕೆ ಭೇಟಿ – ಸದಸ್ಯತ್ವ ಅಭಿಯಾನದಲ್ಲಿ ಭಾಗಿ

ಬಿಜೆಪಿ ಸದಸ್ಯತನದ ಅಂಗವಾಗಿ ದ. ಕ. ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯ ನಗರದ ಶಾಂತಿನಗರ ಬೂತಿನ ಐತಪ್ಪ ನಾಯ್ಕ ಮತ್ತು ಗೋಪಾಲಕೃಷ್ಣ ಭಟ್ ಇವರ ಮನೆಗೆ ಭೇಟಿ ನೀಡಿ ಬಿಜೆಪಿ ಸದಸ್ಯರನ್ನಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ರಾಕೇಶ್...
Ad Widget

ಸುಳ್ಯಕ್ಕೆ ನೂತನ ತಹಶೀಲ್ದಾರ್ ಆಗಮನ

ಸುಳ್ಯ ತಾಲೂಕು ನೂತನ ತಹಶೀಲ್ದಾರ್ ಆಗಿ ಕೆ ಎ ಎಸ್ ಅಧಿಕಾರಿ ಅರವಿಂದ್ ಕೆ ಎಂ ಆಗಮಿಸಿದ್ದಾರೆ . ಇವರು ಸುಳ್ಯ ತಹಶೀಲ್ದಾರ್ ಆಗಿ ಪ್ರಭಾರ ಕರ್ತವ್ಯ ನಿರ್ವಹಿಸಲಿದ್ದು, ಈ ಹಿಂದೆ ಮಂಗಳೂರು ಎ ಸಿ ಕಛೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು ಮೂಲತಃ ಚಿತ್ರದುರ್ಗದವರಾಗಿದ್ದಾರೆ.

ಗುತ್ತಿಗಾರು : ಸೆ.28 ರಂದು ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ

ಲಯನ್ಸ್ ಕ್ಲಬ್ ಗುತ್ತಿಗಾರು ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಸಹಯೋಗದಲ್ಲಿ ಸೆ.28 ಶನಿವಾರದಂದು ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಗುತ್ತಿಗಾರಿನ ಲಯನ್ಸ್ ಸಭಾಭವನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ ನಡೆಯಲಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾಗುವ ಎಲ್ಲಾ ದಾಖಲೆಗಳ ಮೂಲ...

ಹರಿಹರ ಪಳ್ಳತ್ತಡ್ಕ : ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ನೇಜಿ ನೆಟ್ಟ ಸ್ಥಳೀಯರು- ಸ್ಥಳೀಯರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಳ್ಳತ್ತಡ್ಕ ಗ್ರಾಮದ ಕಿರಿಭಾಗದ ಯೋಗೀಶ್ ಕಿರಿಭಾಗ ಎಂಬುವವರ ಗದ್ದೆಯಲ್ಲಿ ಇತ್ತೀಚೆಗೆ ಧ್ವನಿ, ಬೆಳಕು ಮತ್ತು ಶಾಮಿಯಾನ ಸಂಘದವರು ಹಾಗೂ ಬಾಳುಗೋಡು ವಿಶ್ವ ಯುವಕ ಮಂಡಲದವರು ಪ್ರತ್ಯೇಕವಾಗಿ ಕೆಸರುಗದ್ದೆ ಕ್ರೀಡಾಕೂಟಗಳನ್ನು ನಡೆಸಿದ್ದರು.ಇದೀಗ ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನೇಜಿ ನೆಡಲಾಗಿದ್ದು, ಈ ಮಾದರಿ ಕಾರ್ಯಕ್ಕೆ ವ್ಯಾಪಕ...

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ಚೇರ್ಮೇನ್‌ ಆಗಿ ರಿಹಾನ್ ಸಅದಿ, ಜನರಲ್ ಕನ್ವೀನರ್ ಆಗಿ ನಿಯಾಝ್ ಎಲಿಮಲೆ, ಕೋಶಾಧಿಕಾರಿಯಾಗಿ ಶಮೀರ್ ಡಿ ಹೆಚ್ ಆಯ್ಕೆ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ವರ್ಷಕ್ಕೊಮ್ಮೆ ಆಯೋಜಿಸುವ ಸಾಂಸ್ಕೃತಿಕ ಹಾಗೂ ಪ್ರತಿಭಾ ಅನ್ವೇಷಣಾ ಸ್ಫರ್ಧಾ ಕಾರ್ಯಕ್ರಮವಾಗಿದೆ ಸಾಹಿತ್ಯೋತ್ಸವ.ಈ ವರ್ಷದ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ಸಮಿತಿ ರಚಿಸಲಾಯಿತು.ಡಿವಿಷನ್ ಅಧ್ಯಕ್ಷ ಸಿದ್ದೀಕ್ ಹಿಮಮಿ ಪೈಂಬಚ್ಚಾಲ್, ಪ್ರ.ಕಾರ್ಯದರ್ಶಿ ಕಬೀರ್ ಜಟ್ಟಿಪ್ಪಳ್ಳ, ಕೋಶಾಧಿಕಾರಿ ಶರೀಫ್ ಜಯನಗರ ಒಳಗೊಂಡ ಸಮಿತಿಯ ಚೇರ್ಮೇನ್‌ ಆಗಿ ರಿಹಾನ್ ಸಅದಿ ಬೆಳ್ಳಾರೆ, ಜನರಲ್ ಕನ್ವೀನರ್ ಆಗಿ ನಿಯಾಝ್...

ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟವಧಿ ಮುಷ್ಕರ

ಮುಷ್ಕರ ಕೈಗೊಳ್ಳಲು ಕಾರಣವಾದ ಅಂಶಗಳು ಏನು ಗೊತ್ತಾ ,ಮನವಿಯಲ್ಲಿರುವ ಅಂಶಗಳ ಕುರಿತ ಮಾಹಿತಿ ಸುಳ್ಯ:ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರಕ್ಕೆ ನಿರ್ಧರಿಸಿದ್ದು ಅದರಂತೆ ಸೆ.23 ರಿಂದ ತಾಂತ್ರಿಕ ಕೆಲಸಗಳು ಸ್ಥಗಿತಗೊಳಿಸಲಾಗಿತ್ತು. ಸೆ.26 ರಿಂದ ಸುಳ್ಯ ತಾಲೂಕು ಕಛೆರಿ ಮುಂಭಾಗದಲ್ಲಿ ಸುಳ್ಯ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು‌ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು ಪ್ರತಿಭಟನೆ...

ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ ಕಾಂಗ್ರೆಸ್ ಮುಖಂಡನ ಪುತ್ರನ ಬಂಧನ

ಸುಳ್ಯ: ಸುಳ್ಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ವಿಧ್ಯಾರ್ಥಿನಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಅಬ್ದುಲ್ ನಿಯಾಝ್ ಮೇಲೆ ಗುಂಪಿನಲ್ಲಿ ಹಲ್ಲೆ ನಡೆಸಲಾಗಿದ್ದು ಇದರ ಇನ್ನೊಂದು ಆರೋಪಿಯನ್ನು ಸುಳ್ಯ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿ ಸುಶ್ಮಿತ್ ಕುಮಟದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೋಲಿಸರು ರಾಜಕೀಯ ಒತ್ತಡಗಳಿಗೆ ಬಗ್ಗದೆ ಬಂಧಿಸಿ ಇದೀಗ ಕರೆ ತಂದಿದ್ದು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ...

ಗೂನಡ್ಕ :  ಅಪಘಾತ ಗಾಯಾಳುಗಳಿಗೆ ಉಚಿತ ಸೇವೆ ನೀಡಿದ ಅಂಬ್ಯುಲೆನ್ಸ್ ಚಾಲಕರು – ಸಾರ್ವಜನಿಕರಿಂದ ಮೆಚ್ಚುಗೆ

ಗೂನಡ್ಕ ಸೆ: 24 . ಸ್ಕೂಟಿ ಅಪಘಾತದಲ್ಲಿ ತೀವ್ರ ಗಾಯಗೊಂಡ ಕಾಸರಗೋಡು ಮೂಲದ ಯುವಕನ ಪ್ರಥಮ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಸ್ಪತ್ರೆಗೆ AIKMCC ಸುಳ್ಯದ ಅಂಬುಲನ್ಸ್ ನಲ್ಲಿ ತಾಜುದ್ದೀನ್ ಟರ್ಲಿ ಉಚಿತ ಸೇವೆ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಗೆ ಸುಳ್ಯ ಲೈಫ್ ಕೇರ್ ಅಂಬ್ಯುಲೆನ್ಸ್ ಸುಳ್ಯ ದ ರಫೀಕ್ ಕೆ.ಎಂ.ಉಚಿತ ಸೇವೆ ನೀಡಿದರು,ಸುಳ್ಯದ...

ಜಿಲ್ಲಾ ರೈತ ಸಂಘದ ಸಭೆಯಲ್ಲಿ ಕೆ.ಪಿ. ಜಾನಿಯವರಿಗೆ ಸನ್ಮಾನ

ಸೆ. 24 ರಂದು ಬಂಟ್ವಾಳದಲ್ಲಿ ದ.ಕ ಜಿಲ್ಲಾ ರೈತ ಸಂಘದ ಸಭೆ ಹಾಗೂ ರೈತ, ಕಾರ್ಮಿಕ, ದಲಿತ ಒಕ್ಕೂಟದ ಸಭೆ ನಡೆಯಿತು.‌ ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ.ಜಾನಿ ಯವರನ್ನು ಸನ್ಮಾನಿಸಲಾಯಿತು.‌ ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಪ್ರಮುಖರಾದ ರೈತಸಂಘದ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ, ಜಿಲ್ಲಾ ಕಾರ್ಯದರ್ಶಿಯಾದ...
Loading posts...

All posts loaded

No more posts

error: Content is protected !!