ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಗುದ್ದಿದ ಕಾರು

ಸುಳ್ಯ: ಇಂದು KA01NC2969 skoda ಕಾರ್ ಶ್ರೀರಾಂಪೇಟೆಯ ಸಿದ್ಧಿವಿನಾಯಕ ಸೂಪರ್ ಮಾರ್ಕೆಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಡೆಬೇಲಿಗೆ ಗುದ್ದಿ ಪುಟ್ ಪಾತ್ ಏರಿದೆ. ಅಪಘಾತ ಸಂಭವಿಸಿದ ಸಂದರ್ಭ ಕಾರಿನ ಏರ್ ಬ್ಯಾಗ್ ಓಪನ್ ಆದಕಾರಣ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಗೆ OSAAT ಸಂಸ್ಥೆಯಿಂದ ಕೊಠಡಿಗಳ ನಿರ್ಮಾಣದ ಪೂರ್ವ ಭಾವಿ ಸಭೆ

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿಗೆ OSAAT ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ನಾಲ್ಕು ಕೊಠಡಿಗಳು ಹಾಗು ಶೌಚಾಲಯಗಳ ಕುರಿತಂತೆ ಚರ್ಚಿಸಲು ಸಭೆಯು ದಿನಾಂಕ10.10.2024 ರ ಗುರುವಾರ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಾರ್ದನ ಮಾಸ್ಟರ್ ಗಣಿತ ಕೇಂದ್ರ(ರಿ.) ಸುಳ್ಯ ಇದರ ಅಧ್ಯಕ್ಷರಾದ ಎಂ.ಬಿ.ಸದಾಶಿವ, ಉಪಾಧ್ಯಕ್ಷರಾದ ಡಾ. ರಂಗಯ್ಯ,...
Ad Widget

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಆಯುಧ ಪೂಜೆ.

ಸುಳ್ಯ ಮೆಸ್ಕಾಂ ವತಿಯಿಂದ ಗಣಪತಿ ಹವನ ಮತ್ತು ಆಯುಧ ಪೂಜೆಯು ದಿನಾಂಕ 10-10-2024 ರಂದು ನಡೆಯಿತು. ಮೆಸ್ಕಾಂ ಸುಳ್ಯ ಉಪ ವಿಭಾಗ ದ ಕಛೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಕೆ ನಾಯ್ಕ್ ಇವರ ನೇತೃತ್ವದಲ್ಲಿ ಭಕ್ತಿ ಸಡಗರದಿಂದ ನಡೆಯಿತು ಈ ಸಂದರ್ಭದಲ್ಲಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ

ಶ್ರೀ ವೀರಮಾರುತಿ ಸೇವಾ ಟ್ರಸ್ಟ್ (ರಿ.) ಮೂಡಬಿದ್ರೆ ಇವರ ಆಶ್ರಯದಲ್ಲಿ 35ನೇ ವರ್ಷದ ಮೂಡಬಿದಿರೆ ಶ್ರೀ ಶಾರದೋತ್ಸವದ ಪ್ರಯುಕ್ತ ಯೋಗಶ್ರೀ ಯೋಗ ಬಳಗ ಮಂಗಳೂರು ಸಹಯೋಗದಲ್ಲಿ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ 09/10/2024 ರಂದು ಶ್ರೀ ವೆಂಕಟರಮಣ ದೇವಸ್ಥಾನ ವಠಾರ ಮೂಡಬಿದ್ರೆಯಲ್ಲಿ ನಡೆಯಿತು. 1 ರಿಂದ 4 ನೇ ತರಗತಿ ಬಾಲಕರ ವಿಭಾಗದಲ್ಲಿ ವಿದಾತ್ ಎಂ.ಟಿ...

ಮೇನಾಲ ರಿಕ್ಷಾ ಚಾಲಕ ವಿಷ ಸೇವಿಸಿ ಆತ್ಮಹತ್ಯೆ.

ಅಜ್ಜಾವರ ಗ್ರಾಮದ ಮೇನಾಲ ರಿಕ್ಷಾ ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ಮಧ್ಯಾಹ್ನದ ಬಳಿಕ ಬಾಸ್ಕರ ರೈ ಯವರು ಕಾಣದೇ ಇದ್ದಾಗ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ಪ್ರಾರಂಭಿಸಿದ್ದು ಸಂಜೆ ತೋಟದಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿರುವುದು ಕಂಡುಬಂದಿದ್ದು ಪೋಲಿಸ್ ಇಲಾಖೆಗೆ ಮಾಹಿತಿ ರವಾನಿಸಿ ಇದೀಗ ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ...

ಅ.26 ರಂದು ನಿಂತಿಕಲ್ಲು ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯ ಸ್ಕೀಮ್ ನ ಪ್ರಥಮ ಡ್ರಾ – ಕಳೆದ 6 ವರ್ಷಗಳಿಂದ ಯಶಸ್ವಿಯಾಗಿ ಸ್ಕೀಮ್ ನಡೆಸಿ ಗ್ರಾಹಕರ ವಿಶ್ವಾಸ ಗಳಿಸಿದ ಸಂಸ್ಥೆ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯು ವಿನೂತನ ಆಫರ್ ಮೂಲಕ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುತ್ತಿದ್ದು ಇದೀಗ ಸತತ 6ನೇ ಬಾರಿಗೆ 'ಲಕ್ಕಿ ಡ್ರಾ' ಎಂಬ ವಿನೂತನ ಸ್ಕಿಮ್ ಆರಂಭಿಸುತ್ತಿದೆ. ಈ ಯೋಜನೆಯ ಪ್ರಥಮ ಡ್ರಾ ಅ.26 ರಂದು ನಡೆಯಲಿದ್ದು, ಬಂಪರ್ ಬಹುಮಾನವಾಗಿ ಟಿ.ವಿ.ಎಸ್ ಸ್ಟಾರ್...

ಎನ್ನೆಂಸಿ; ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಮನೆಯ ಉತ್ತಮ ವಾತಾವರಣ ಮಕ್ಕಳ ವ್ಯಕ್ತಿತ್ವ ರೂಪಿಸಿಕೊಳ್ಳಲು ಪೂರಕ: ಡಾ. ಪೂವಪ್ಪ ಕಣಿಯೂರು ಮಕ್ಕಳು ಜೀವನದಲ್ಲಿ ಶಿಸ್ತು, ತಾಳ್ಮೆ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸಂಪತ್ತಾಗಬೇಕು. ಮನೆಯಲ್ಲಿನ ಒಳ್ಳೆಯ ವಾತಾವರಣ ಮಕ್ಕಳ ವ್ಯಕ್ತಿತ್ವ ರೂಪಿಸಿಕೊಳ್ಳಲು ಪೂರಕವಾಗಬೇಕು. ಧರ್ಮಗ್ರಂಥಗಳನ್ನು ಆರಾಧನೆ ಮಾಡುವುದಿದ್ದರೆ ಅದರಲ್ಲಿನ ಮೌಲ್ಯಯುತ ವಿಚಾರಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳಬೇಕು ಎಂದು ಎನ್ನೆಂಸಿ ನಿವೃತ್ತ ಪ್ರಾಂಶುಪಾಲರು ಹಾಗೂ ಜಾನಪದ...

ನೆಹರೂ ಮೆಮೋರಿಯಲ್ ಕಾಲೇಜಿನ ನೂತನ ಎನ್.ಎಸ್.ಎಸ್ ಅಧಿಕಾರಿಯಾಗಿ ಹರಿಪ್ರಸಾದ್ ಅತ್ಯಾಡಿ ಅಧಿಕಾರ ಸ್ವೀಕಾರ

ನೆಹರೂ ಮೆಮೋರಿಯಲ್ ಕಾಲೇಜಿನ 2024-2ನೇ ಶೈಕ್ಷಣಿಕ ವರ್ಷದಿಂದ ಎನ್.ಎಸ್.ಎಸ್.ನ ನೂತನ ಕಾರ್ಯಕ್ರಮ ಅಧಿಕಾರಿಯಾಗಿ ಹರಿಪ್ರಸಾದ್ ಅತ್ಯಾಡಿ ಅಧಿಕಾರ ಸ್ವೀಕರಿಸಿದರು. ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕರಾದ ಇವರು ಈ ಅಕ್ಟೋಬರ್ ನಿಂದ ಕಾಲೇಜು ಎನ್.ಎಸ್.ಎಸ್ ಘಟಕವನ್ನು ಮುನ್ನಡೆಸಲಿದ್ದಾರೆ. ಕಳೆದ 27 ವರ್ಷ ಕಾರ್ಯಕ್ರಮ ಅಧಿಕಾರಿಯಾಗಿದ್ದ ಸಂಜೀವ ಕುತ್ಪಾಜೆ ನೂತನ ಅಧಿಕಾರಿಗಳಿಗೆ ಶುಭಹಾರೈಸಿದರು. ಈ ಸಂದರ್ಭ ಕಾಲೇಜಿನ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಯುವ ದಸರದಲ್ಲಿ ನೃತ್ಯ ಪ್ರದರ್ಶನ

ಮೈಸೂರಿನಲ್ಲಿ ನಾಡ ಹಬ್ಬದ ಪ್ರಯುಕ್ತ ನಡೆದ ಯುವದಸರಾ ಕಾರ್ಯಕ್ರಮದಲ್ಲಿ ಕೆಎಸ್ಎಸ್ ಕಾಲೇಜಿನ ಸಾಂಸ್ಕೃತಿಕ ತಂಡ ದಕ್ಷಿಣ ಕನ್ನಡದ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ, ಅವರ ನೇತೃತ್ವದಲ್ಲಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ. ವಿನ್ಯಾಸ್ ಹೊಸೊಳಿಕೆ ಮತ್ತು ರಾಜಕೀಯ ಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಸ್ವಾತಿ ಅವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ...

ಅಜ್ಜಾವರ : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆಯ ನೇತೃತ್ವದಲ್ಲಿ ನಡೆದ ಭಜನಾ ತರಬೇತಿ ಶಿಬಿರದ ಸಮರೋಪ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ನೇತೃತ್ವದಲ್ಲಿ ಭಜನಾ ತರಬೇತಿ ಶಿಬಿರವು ನಿರಂತರವಾಗಿ ಎಂಟು ದಿನಗಳ ಕಾಲ ಅಜ್ಜಾವರದ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಸಭಾಂಗಣದಲ್ಲಿ ನಡೆದು ಅ. 10 ರಂದು ಸಮರೋಪ ಸಮಾರಂಭ ನಡೆಯಿತು . ಸಮಾರಂಭ ಅಧ್ಯಕ್ಷತೆಯನ್ನು ಭಾಸ್ಕರ್ ರಾವ್ ಬಯಂಬು ದಂಪತಿಗಳು ವಹಿಸಿದ್ದರು....
Loading posts...

All posts loaded

No more posts

error: Content is protected !!