ಅಜ್ಜಾವರ : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆಯ ನೇತೃತ್ವದಲ್ಲಿ ನಡೆದ ಭಜನಾ ತರಬೇತಿ ಶಿಬಿರದ ಸಮರೋಪ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ನೇತೃತ್ವದಲ್ಲಿ ಭಜನಾ ತರಬೇತಿ ಶಿಬಿರವು ನಿರಂತರವಾಗಿ ಎಂಟು ದಿನಗಳ ಕಾಲ ಅಜ್ಜಾವರದ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಸಭಾಂಗಣದಲ್ಲಿ ನಡೆದು ಅ. 10 ರಂದು ಸಮರೋಪ ಸಮಾರಂಭ ನಡೆಯಿತು .

. . . . . . . . .

ಸಮಾರಂಭ ಅಧ್ಯಕ್ಷತೆಯನ್ನು ಭಾಸ್ಕರ್ ರಾವ್ ಬಯಂಬು ದಂಪತಿಗಳು ವಹಿಸಿದ್ದರು. ಸಭಾ ವೇದಿಕೆಯಲ್ಲಿ ಸೋಮಶೇಖರ ಪೈಕ , ಶಿವಪ್ರಕಾಶ್ ಅಡ್ಪಂಗಾಯ , ವಿಶಾಲಕ್ಷಿ ಕರ್ಲಪ್ಪಾಡಿ , ಹರಿಪ್ರಸಾದ್ ಎಲಿಮಲೆ , ರಾಜೇಶ್ ಶೆಟ್ಟಿ ಮೇನಾಲ , ಸತೀಶ್ ಟಿ ಎನ್ , ರಾಘವ ಪಾಲ್ತಾಡು ಉಪಸ್ಥಿತರಿದ್ದರು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಗೀತಾ ಕಡಬ ಹಾಗೂ ರಾಜರಾಮ್ ಐತಾಳ್ ಶಿಬಿರಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ದಿನಚರಿಗಳು ಹೇಗಿರಬೇಕು, ಸಂಸ್ಕಾರವಂತರಾಗಿ ಬದುಕಲು ಹೇಗೆ ಸಾಧ್ಯವೆಂದು ಭೋದಿಸಿದರು.

. . . . . . .

ಭಜನಾ ತರಬೇತಿ ಶಿಬಿರವು 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ನಡೆಸಿದ್ದು ಈ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು ಭಜನಾ ತರಬೇತಿ ಜೊತೆಗೆ ಸಂಸ್ಕಾರ ಶಿಬಿರವನ್ನು ಕೂಡ ನೀಡಲಾಯಿತು. ತರಬೇತಿಯಲ್ಲಿ ಪ್ರತಿನಿತ್ಯವು ಸಾವಿತ್ರಿ ಕಣೆಮರಡ್ಕ ಯೋಗಾಸನ ತರಬೇತಿಯನ್ನು ನೀಡಿದರು. ಬಳಿಕ ಶಿಬಿರ ಗೀತೆ , ಭಜನೆ ತರಬೇತಿ , ಕುಣಿತ ಭಜನೆ ತರಬೇತಿ ಬಳಿಕ ಆದ್ಮಾತ್ಮ ಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭಕ್ಕೆ ಮುನ್ನ ಅಜ್ಜಾವರ ಮುಖ್ಯ ರಸ್ತೆಯಲ್ಲಿ ಶಿಬಿರಾರ್ಥಿಗಳು ಮೆರವಣಿಗೆ ಜೊತೆಗೆ ಕುಣಿತ ಭಜನೆ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನವೀನ್ ಎಲಿಮಲೆ , ನಾರಾಯಣ ಬಂಟ್ರಬೈಲು , ವಿನಯ ಕರ್ಲಪ್ಪಾಡಿ , ಸುಭೋದ್ ಶೆಟ್ಟಿ ಮೇನಾಲ ,ಸೀತರಾಮ ಕರ್ಲಪ್ಪಾಡಿ , ಶಶ್ಮಿ ಭಟ್ ಅಜ್ಜಾವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಶೆಟ್ಟಿ ಮೇನಾಲ ಸ್ವಾಗತಿಸಿ ವಿಶಾಲ ಕರ್ಲಪ್ಪಾಡಿ ವಂದಿಸಿ ಬಾಲಕೃಷ್ಣ ಮೇನಾಲ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading