- Saturday
- August 15th, 2026
ಬಾಳಿಲ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಡಿ.03ರಂದು ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕುಣಿತ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ, ಐಕ್ಯೂಎಸಿ ಹಾಗೂ ಕಾಮರ್ಸ್ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ನ.30 ರಂದು ಕಂದ್ರಪ್ಪಾಡಿಯ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ "ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನರ ಪಾತ್ರ" ಎಂಬ ಕಾರ್ಯಕ್ರಮ ನಡೆಯಿತು.ಈ ಭತ್ತ ನಾಟಿಯ ಕಾರ್ಯಕ್ರಮದಲ್ಲಿ ಕಾಲೇಜಿನ ಅಂತಿಮ ವಾಣಿಜ್ಯ ಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೀತಮ್ ಮುಂಡೋಡಿ ಅವರ ಮನೆಯವರು ಈ ಕಾರ್ಯಕ್ರಮದಲ್ಲಿ...
ಟೆಂಪೋ ಟ್ರಾವೆಲರ್ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಭೀಕರ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಗೂನಡ್ಕ ಎಂಬಲ್ಲಿ ಡಿ.3 ರ ಮಧ್ಯರಾತ್ರಿ ನಡೆದಿದೆ. ಸುಳ್ಯ ಕಸಬಾ ದುಗ್ಗಲಡ್ಕ ಕಂದಡ್ಕ ಕಾಲನಿ ನಿವಾಸಿ ಸೆಲ್ವ ಮೇಸ್ತ್ರಿ ಪುತ್ರ ವಿನೋದ್ ಕುಮಾರ್ (23) ಮೃತಪಟ್ಟ ಬೈಕ್ ಸವಾರ. ಸವಣೂರುನಿಂದ ವಿರಾಜಪೇಟೆ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆಸುಬ್ರಹ್ಮಣ್ಯದ ವತಿಯಿಂದ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು. ಕಡಬ, ಇಚ್ಲಂಪಾಡಿ, ಗುಂಡ್ಯ, ಗುತ್ತಿಗಾರು ಮಾರ್ಗದಲ್ಲಿ ಬಸ್ಸಿನ ಸಮಸ್ಯೆ ಎದುರಾಗಿದ್ದು, ಈ ಭಾಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಈ ಮಾರ್ಗದಲ್ಲಿ ಬಸ್ ಒದಗಿಸುವಂತೆ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು. ಪ್ರತಿಭಟನೆಯ...
ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಟೆಲು ಅಡಿಕೆಹಿತ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ಮರದ ದಿಮ್ಮಿಗಳಿಂದ ತುಂಬಿದ್ದು, ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಇದನ್ನು ಮನಗಂಡ ದೊಡ್ಡತೋಟ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಡಿಸೆಂಬರ್ 02 ರಂದು ಈ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಸಮೀಪದ ಮನೆಯವರಾದ ಶಕುಂತಳಾ ಭಟ್ ಅಡಿಕೆಹಿತ್ಲು ಎಂಬುವವರು...
ಕಳಂಜದ ಬುಖಾರಿಯಾ ಜುಮಾ ಮಸ್ಜಿದ್ ನ ಆಡಳಿತ ಮಂಡಳಿಗೆನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಡಿ.01ರಂದು ನಡೆಯಿತು. ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್.ಕೆ.ಎಚ್, ಕೋಶಾಧಿಕಾರಿಯಾಗಿ ಮಹಮ್ಮದ್.ಕೆ.ಎಂ ಆಯ್ಕೆಯಾದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಡಿ.12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಹಲವು ಮತದಾರರಲ್ಲಿ ಗುರುತಿನ ಚೀಟಿ ಇಲ್ಲದಿರುವುದರಿಂದ ಎಲ್ಲಾ ಮತದಾರರಿಗೆ ಗುರುತಿನ ಚೀಟಿಯನ್ನು ಒದಗಿಸಲು ರಾಜ್ಯ ಒಕ್ಕಲಿಗರ ಸಂಘವು ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದಸ್ಯತ್ವ ಮತ್ತು ಡಿಜಿಟಲ್ ಮಾದರಿಯಲ್ಲಿ ಗುರುತಿನ ಚೀಟಿ ದೊರೆಯುವಂತಾಗಬೇಕು...
ಜೆ.ಜೆ. ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿಯು ಡಿ.2 ರಂದು ಗುತ್ತಿಗಾರಿನ ಎಸ್ ಎಮ್ ಎಸ್ ಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ನೆರವೇರಿಸಿದರು. ಗುತ್ತಿಗಾರು ಗ್ರಾ.ಪಂ ಸದಸ್ಯರು,ಕಾಂಪ್ಲೆಕ್ಸ್ ಮಾಲಕರಾದ ವೆಂಕಟ್ ವಳಲಂಬೆ ಮೊದಲ ಪಾಲಿಸಿ ಹಸ್ತಾಂತರಿಸಿ ಶುಭ...
ಪಾಲೆಪ್ಪಾಡಿ ಇರ್ವೆರ್ ಉಳ್ಳಾಕ್ಲು ಚಾವಡಿಯ ವಠಾರದಲ್ಲಿ ಸ್ವರ್ಣ ಇಡುವ ಕಾರ್ಯಕ್ರಮ ಹಾಗೂ ಅಷ್ಟಮಂಗಲ ಕಾರ್ಯಕ್ರಮವು ನ.29 ರಿಂದ ಡಿ.2 ರವರೆಗೆ ನಡೆಯಿತು. ಶಶಿಧರನ್ ನಾಯರ್ ಕುತ್ತಿಕೋಳು ಇವರ ನೇತೃತ್ವದಲ್ಲಿ ಅಷ್ಟಮಂಗಲ ನಡೆದು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಪಾಲೆಪ್ಪಾಡಿ ಬೈಲಿನ ಭಕ್ತಾಭಿಮಾನಿಗಳು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಶಿಕ್ಷಣ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಹೋರಾಟ ಮುಂದುವರಿಯಲಿದೆ ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಇವರು ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ...
Loading posts...
All posts loaded
No more posts
