ಪೆರುವಾಜೆ-ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಕಳೆದುಹೋಗಿದೆ

ಪೆರುವಾಜೆ ಸವಣೂರು ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಇಂದು (ಎ.05) ಕಳೆದುಹೋಗಿರುತ್ತದೆ. ಯಾರಿಗಾದರೂ ಸಿಕ್ಕಲ್ಲಿ 8197763860, 9663065466 ಸಂಖ್ಯೆಗೆ ಕರೆಮಾಡುವಂತೆ ಕಳೆದುಕೊಂಡವರು ವಿನಂತಿಸಿದ್ದಾರೆ.

ಜಗನ್ಮೋಹನ ದಂಡಿನಮನೆ ಹೃದಯಾಘಾತದಿಂದ ನಿಧನ

ನಾಲ್ಕೂರು ಗ್ರಾಮದ ದಂಡಿನಮನೆ ಜಗನ್ಮೋಹನ ದಂಡಿನಮನೆ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.‌ ಅವರು ಬಳ್ಳಾರಿ ಥರ್ಮಲ್ ಪವರ್ ಕಾರ್ಪೋರೇಷನ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೃದಯಾಘಾತಗೊಂಡ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ , ಓರ್ವ ಪುತ್ರ, ಸಹೋದರ, ಸಹೋದರಿಯರು...
Ad Widget

ಎ.5 ಕೆದಂಬಾಡಿ ಉತ್ಸವ ಮಾಡಬೇಕು – ಗೋಪಾಲ ಪೆರಾಜೆ

ಅಮರ ಸುಳ್ಯದ ಸ್ವಾತಂತ್ರ್ಯ ಸಮರದ ಸ್ಮಾರಕ ನಿರ್ಮಾಣ ಮತ್ತು ಕೆದಂಬಾಡಿ ಉತ್ಸವದ ಕುರಿತು ಎ.4 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗೋಪಾಲ ಪೆರಾಜೆ ಅವರು ಉಬರಡ್ಕ ಮಿತ್ತೂರು ಮತ್ತು ಬೆಳ್ಳಾರೆಯಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡುವ ವಿಚಾರ, ಮಂಗಳೂರು ವಿ.ವಿಯಲ್ಲಿ ಅಮರ ಸುಳ್ಯ ಸ್ವಾಂತಂತ್ರ್ಯ ಹೋರಾಟ ಅಥವಾ...

ಕುಂಬ್ರ: ಬೈಕ್ ಗಳ ನಡುವೆ ಡಿಕ್ಕಿ- ಅಪಾಯದಿಂದ ಪಾರಾದ ಸವಾರರು

ಪುತ್ತೂರು ತಾಲೂಕಿನ ಕುಂಬ್ರ ಪೇಟೆಯ ಮುಖ್ಯರಸ್ತೆಯ ಸಮೀಪ ಇಂದು ಬೆಳಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಸಂಶೋಧನೆ ನಡೆಸುತ್ತಿರುವ ನವೀನ್ ಕುಮಾರ್ ಪೆರುವಾಜೆ ರವರು ಚಲಾಯಿಸುತ್ತಿದ್ದ ಯಮಹಾ ಎಫ್.ಜ಼ೆಡ್ ಬೈಕ್ ಹಾಗೂ ಸುಳ್ಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿಯ ಶಮಂತ್ ಎಂಬವರ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದ್ದು, ಹೆಲ್ಮೆಟ್ ಧರಿಸಿದ್ದ...

ದೇವಚಳ್ಳ: ತಳೂರು ಚಾಕಟೆತಡಿಯಲ್ಲಿ ವಾರ್ಷಿಕ ಕ್ರೀಡಾಕೂಟ

ಶ್ರೀ ರಾಜ್ಯ ದೈವ ಪುರುಷ ದೈವ ದೇವಸ್ಥಾನ ತಳೂರು, ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲದ ಜಂಟಿ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಏ.3 ರಂದು ತಳೂರಿನ ಚಾಕಟೆತಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಾಗಪ್ಪ ಗೌಡ ಮೆತ್ತಡ್ಕ ನಡೆಸಿದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಶಿವಣ್ಣ ಗೌಡ ತಳೂರು, ಸ್ನೇಹ ಯುವ ಬಳಗ ಅಧ್ಯಕ್ಷ ವರ್ಷಿತ್...

ಯೋಗಾಸನದಲ್ಲಿ ದಾಖಲೆ ನಿರ್ಮಿಸಿದ ಮೋನಿಷ್ ತಂಟೆಪ್ಪಾಡಿ

ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಮೋನಿಷ್ ತಂಟೆಪ್ಪಾಡಿ ಸಾಧನೆ ಮೆರೆದಿದ್ದಾರೆ.‌ ಬದ್ದ ಪದ್ಮಾಸನ ದಲ್ಲಿ 1ಗಂಟೆ 02 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಏಳು ತಿಂಗಳಿಂದ ಯೋಗಾಭ್ಯಾಸವನ್ನು ನಿರಂತರ ಯೋಗ ಕೇಂದ್ರ ಸುಳ್ಯ ಇದರ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಯೋಗ...

ವಳಲಂಬೆ ಸಮೀಪ ಪರ್ಸ್ ಬಿದ್ದು ಸಿಕ್ಕಿದೆ

ವಳಲಂಬೆ ಸಮೀಪ ಲೇಡಿಸ್ ಪರ್ಸೊಂದು ಇಂದು ಬಿದ್ದು ಸಿಕ್ಕಿರುತ್ತದೆ. ಕಳೆದುಕೊಂಡವರು ಅಮರ ಸುಳ್ಯ ಸುದ್ದಿ ಕಛೇರಿಯನ್ನು ಸಂಪರ್ಕಿಸಬಹುದು. ಮೊ: 9449387044

ಎ.13: ಐವರ್ನಾಡು ಬಿರ್ಮುಕಜೆ ತರವಾಡು ಮನೆಯ ಧರ್ಮ ನಡಾವಳಿ

ಐವರ್ನಾಡಿನ ಬಿರ್ಮುಕಜೆ ತರವಾಡು ಮನೆಯ ಶ್ರೀ ರುದ್ರಚಾಮುಂಡಿ, ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಎ.13 ರಂದು ಬಿರ್ಮುಕಜೆ ಕುಟುಂಬದ ತರವಾಡು ಮನೆಯಲ್ಲಿ ಜರುಗಲಿದೆ. ಎ.6 ರಂದು ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಎ.13ರ ಬೆಳಿಗ್ಗೆಯಿಂದ ಗಣಹೋಮ, ನಾಗತಂಬಿಲ, ಮುನಿಸ್ವಾಮಿಗೆ ನೈವೇದ್ಯ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಲಿದೆ....

ಅರಂತೋಡು: ಖುಷಿ ಬೇಕರಿ ಶುಭಾರಂಭ

ಅರಂತೋಡಿನಲ್ಲಿ ಅನಿಲ್ ಕುಮಾರ್ ಬಿಳಿಯಾರು ಅವರ ಮಾಲೀಕತ್ವದಲ್ಲಿ ಖುಷಿ ಬೇಕರಿ ಏ.2 ರಂದು ಶುಭಾರಂಭಗೊಂಡಿತು. ಬೇಕರಿಯನ್ನು ಅರಂತೋಡು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ., ಅರಂತೋಡು ಮಲ್ಲಿಕಾರ್ಜುನ...

ಐನೆಕಿದು: ತೋಟಕ್ಕೆ ಆನೆ ದಾಳಿ

ಐನೆಕಿದು ಗ್ರಾಮದ ಕೆದಿಲ ಶಶಿಧರ್ ರವರ ತೋಟಕ್ಕೆ ಆನೆ ದಾಳಿ ನಡೆಸಿದ ಘಟನೆ ಇಂದು ಬೆಳಗಿನ ಜಾವ 5.30ಕ್ಕೆ ಸಂಭವಿಸಿದೆ. ಎರಡು ದಿವಸಗಳ ಹಿಂದೆ ಇದೇ ಗ್ರಾಮದ ರವಿ ಕೆದಿಲರವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಇದರಿಂದ ಕೃಷಿಗೆ ಸಾಕಷ್ಟು ಹಾನಿಯಾಗಿತ್ತು. ಇದೀಗ ಆನೆ ದಾಳಿ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು ಕೃಷಿಗೆ ವ್ಯಾಪಕ ಹಾನಿಯಾಗುತ್ತಿದೆ.
Loading posts...

All posts loaded

No more posts

error: Content is protected !!