- Thursday
- August 13th, 2026
ಅಜ್ಜಾವರ ಗ್ರಾಮದ ಅಡ್ಪಂಗಾಯ ಬಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ತಿರುವೊಂದರಲ್ಲಿ ಅಪಘಾತವಾದ ಘಟನೆ ಏ.15(ಇಂದು) ಬೆಳ್ಳಂಬೆಳಗ್ಗೆ 2.00 ಗಂಟೆಗೆ ಸಂಭವಿಸಿದೆ. ಇಲ್ಲಿನ ಬಿ.ಎಸ್.ಎನ್.ಎಲ್ ಟವರ್ ಸಮೀಪ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರು ಜಖಂಗೊಡಿದ್ದು ಅದೃಷ್ಟವಶಾತ್ ಕಾರಿನೊಳಗಿದ್ದ ಮಾಧ್ಯಮ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು ವಲಯದ ಮೆಟ್ಟಿನಡ್ಕ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ವಿಜಯ ದೋಣಿಮನೆ ,ಉಪಾಧ್ಯಕ್ಷರಾಗಿ ರವಿ ಗುಂಡಡ್ಕ ಕಾರ್ಯದರ್ಶಿಯಾಗಿ ರತಿ ಶಶಿಧರ, ಜೊತೆ ಕಾರ್ಯದರ್ಶಿಯಾಗಿ ಯತೀಂದ್ರ ಸಾಲ್ತಾಡಿ, ಕೋಶಾಧಿಕಾರಿಯಾಗಿ ಸಾಜಿದ ತಸ್ಲಿಂ ಆಯ್ಕೆಯಾದರು. ಈ ಸಂದರ್ಭ ವಲಯ ಮೇಲ್ವಿಚಾರಕರಾದ ಮುರಳೀಧರ ,ಒಕ್ಕೂಟದ ಅಧ್ಯಕ್ಷರಾದ...
ಎ.14: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು ವಲಯದ ವಳಲಂಬೆ ಒಕ್ಕೂಟದ ನೂತನ ಪುಣ್ಯಕೋಟಿ ಸ್ವಸಹಾಯ ಸಂಘವನ್ನು ಒಕ್ಕೂಟದ ಅಧ್ಯಕ್ಷೆ ಕಲಾವತಿ ಮೊಟ್ಟೆಮನೆ ಉದ್ಘಾಟಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕರಾದ ಮುರಳೀಧರರವರು ಸಂಘದ ನಿಯಮಾವಳಿಗಳು ಹಾಗೂ ದಾಖಲಾತಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಪ್ರಬಂಧಕರಾಗಿ ಲತಾ ಕುಮಾರಿ, ಕಾರ್ಯದರ್ಶಿಯಾಗಿ ಕುಮಾರಿ ಸಂಗೀತಾ ಹಾಗೂ ಕೋಶಾಧಿಕಾರಿಯಾಗಿ ಭಾಗೀರಥಿ...
ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಇಂದು ಕಸ ಸಂಗ್ರಹಣೆಯಲ್ಲಿ ಮಾದರಿಯಾಗಿ ಹೊರಹೊಮ್ಮಿದೆ. ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರು ಸ್ವ-ಇಚ್ಛೆಯಿಂದಲೇ ಕಸ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಚ್ಚತೆಗಾಗಿ 2019ರ ಪರಿಸರ ಪ್ರಶಸ್ತಿಯನ್ನು ಈ ಗ್ರಾಮ ಪಂಚಾಯತ್ ಸ್ವಚ್ಛತಾ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ. ಸ್ವಸಹಾಯ ಸಂಘದ ಮೂಲಕ ಪಂಚಾಯತಿನ ಕಸ ನಿರ್ವಹಣೆಜಿಲ್ಲೆಯಲ್ಲಿ ಒಟ್ಟು 37 ಘನ ತ್ಯಾಜ್ಯ ಘಟಕಗಳು...
ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ (ರಿ.) ಸುಳ್ಯ ದ.ಕ .ಇದರ ವತಿಯಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನದ ಅಂಗವಾಗಿ ಮಹಾ ರಕ್ತದಾನ ಶಿಬಿರ ಸುಳ್ಯ ಅಂಬೇಡ್ಕರ್ ಭವನದಲ್ಲಿ ಏ.14 ಗುರುವಾರದಂದು ನಡೆಯಿತು. ಕಾರ್ಯಕ್ರಮವನ್ನು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ ದೀಪ ಬೆಳಗಿಸಿ ಉದ್ಘಾಟಿಸಿದರು. ನ್ಯಾಯವಾದಿಗಳಾದ ಪ್ರದೀಪ್ ಕುಮಾರ್ ಅವರು...
ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಕಡಬ ತಾಲೂಕಿನ ಸವಣೂರು ಸಮೀಪದ ಮಾಂತೂರು ಶ್ರೀಮತಿ ಶ್ಯಾಮಲರಿಗೆ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪಂಚಾಯತ್ ನಿವೇಶನದಲ್ಲಿ ನೂತನವಾಗಿ ೨.೫೩ಲಕ್ಷ ದಲ್ಲಿ ನಿರ್ಮಿಸಿದ ಅಮರ ಜ್ಯೋತಿ ಮನೆಯ ಹಸ್ತಾಂತರ ಕಾರ್ಯಕ್ರಮ ಎ. ೧೦ರಂದು ನಡೆಯಿತು. ಗಣಪತಿ ಹವನದ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್...
ಸುಡುವ ಬಿಸಿಲಿನಲಿಕೊರೆಯುವ ಚಳಿಯಲಿದಿನನಿತ್ಯ ನಮ್ಮ ಕಾಯುವಧೀರ ಸೈನಿಕನೇನಿನಗೊಂದು ನನ್ನ ಸಲಾಂ.. ನೀನಿದ್ದರೆ ಈ ಭೂಮಿಯಲ್ಲಿನಮಗೆಲ್ಲ ಸುಖ ನಿದ್ರೆನಮಗಾಗಿ ಹೋರಾಡುವ ಸೈನಿಕನಿನಗೊಂದು ನನ್ನ ಸಲಾಂ.. ತನ್ನವರನ್ನು ಮರೆತುಕೈಯಲ್ಲಿ ಬಂದೂಕನ್ನು ಹಿಡಿದುದೇಶದ ಜನರಿಗಾಗಿ ನಿದ್ರೆ ಬಿಡುವ ಸೈನಿಕನಿನಗೊಂದು ನನ್ನ ಸಲಾಂ.. ದೇಶದ ಮೂಲೆ ಮೂಲೆಗಳಲ್ಲಿಇರುವ ಶತ್ರುಗಳನ್ನು ಸದೆ ಬಡಿಯಲುಎದೆ ಉಬ್ಬಿಸಿ ನಿಂತಿರುವ ಸೈನಿಕನಿನಗೊಂದು ನನ್ನ ಸಲಾಂ.. ಸಾಗರದಂತಹ ಸುಳಿಗಳೆಡೆಯಲಿಬೀಸುವ...
ಅರಂತೋಡು ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿಯ ರಚನೆಯು ಏ.9 ರಂದು ಪೆರಾಜೆ ಶ್ರೀ ಶಾಸ್ತಾ ವು ದೇವಸ್ಥಾನದ ವಠಾರದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶಿವರಾಮರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ತಂಬೂರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಧರನ್ ಪರಯಂಬಳ್ಳ,ಉಪಾಧ್ಯಕ್ಷರಾದ ಪವಿತ್ರನ್ ಗುಂಡ್ಯ,ಕ್ಷೇತ್ರ...
ಸಂಪೂರ್ಣ ಡಿಜಿಟಲೀಕರಣದಂತ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಸದಸ್ಯರಿಗೆ ಗುಣಮಟ್ಟದ ಸೇವೆ, ಸಾಮಾಜಿಕ ಸ್ಪಂದನೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು, ಇದು ನಮ್ಮ ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಮಾಜಿ ವಿಧಾನಸಭಾದ್ಯಕ್ಷ ,ಶಾಸಕ ಕೆ.ಜಿ.ಬೋಪಯ್ಯ ಶ್ಲಾಘಿಸಿದರು. ಅವರು ಇಂದು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ 1.76 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಗೋದಾಮು...
ಸುಳ್ಯ ಸಿ.ಎ. ಬ್ಯಾಂಕ್ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಫಿಲ್ಟರ್ ಮೆಷಿನ್ ಇಂದು ಕೊಡುಗೆಯಾಗಿ ನೀಡಲಾಯಿತು. ಕೆ.ಎಸ್.ಆರ್.ಟಿ.ಸಿ. ಯ ಟ್ರಾಫಿಕ್ ಇನ್ಸ್ ಪೆಕ್ಟರ್ ಪದ್ಮನಾಭ ಮತ್ತು ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಶುದ್ಧೀಕರಣ ಯಂತ್ರವನ್ನು ಬಸ್ಸು ನಿಲ್ದಾಣದಲ್ಲಿ ಲೋಕಾರ್ಪಣೆ ಮಾಡಿದರು. ಸುಳ್ಯ ಸಿ ಎ ಬ್ಯಾಂಕ್...
Loading posts...
All posts loaded
No more posts
