ಮೇ.06: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಬೆಳಗ್ಗೆ 10.00ರಿಂದ ಮಧ್ಯಾಹ್ನ 1.00 ಗಂಟೆಯ ತನಕ ಜರುಗಲಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿಯವರು ವಹಿಸಲಿದ್ದಾರೆ.

ಶುಭ ವಿವಾಹ : ಉಷಾ – ತೇಜಕುಮಾರ

ಗುತ್ತಿಗಾರು ಗ್ರಾಮದ ಅಡ್ಡನಪಾರೆ ನಿವಾಸಿ ಕಕ್ಯಾನ ಗುಡ್ಡೆಮನೆ ಶ್ರೀಮತಿ ಜಲಜಾಕ್ಷಿ ಮತ್ತು ಮಾಯಿಲಪ್ಪ ಗೌಡರ ಪುತ್ರಿ ಉಷಾಳ ವಿವಾಹವು ಗುತ್ತಿಗಾರು ಗ್ರಾಮದ ಪೈಕ ಗುಡ್ಡೆಮನೆ ಶ್ರೀಮತಿ ಜಾನಕಿ ಮತ್ತು ದಿ. ತಿಮ್ಮಪ್ಪ ಗೌಡರ ಪುತ್ರ ತೇಜಕುಮಾರ ರೊಂದಿಗೆ ಮೇ. 4 ರಂದು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
Ad Widget

ನ್ಯಾಷನಲ್ ಲೆವೆಲ್ ಅಬಾಕಸ್ ಸ್ಪರ್ಧೆ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ 6 ವಿದ್ಯಾರ್ಥಿಗಳಿಗೆ
ಸಮಗ್ರ ಪ್ರಶಸ್ತಿ

ಪುತ್ತೂರು ಸಿಟಿ ಆಸ್ಪತ್ರೆ ಬಳಿ ಕಾರ‍್ಯಾಚರಿಸುತ್ತಿರುವ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ 21 ವಿದ್ಯಾರ್ಥಿಗಳು ಎಪ್ರಿಲ್ 10 ರಂದು ನಡೆದ ನ್ಯಾಷನಲ್ ಲೆವೆಲ್ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಅರ್ಹತಾ ಅಂಕಗಳನ್ನು ಗಳಿಸುವುದರೊಂದಿಗೆ, 6 ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳು ಐಆರ್‌ಸಿಎಂಡಿ ಶಿಕ್ಷಣ...

ಬೊಳುಬೈಲು : ನವಚೇತನ ಯುವಕ ಮಂಡಲದ ಪದಗ್ರಹಣ – ಅಧ್ಯಕ್ಷ ಶಶಿಪ್ರಸಾದ್ ಕಾಟೂರು, ಕಾರ್ಯದರ್ಶಿ ನಿತಿನ್ ಅರ್ಭಡ್ಕ

ನವ ಚೇತನ ಯುವಕ ಮಂಡಲ ಬೊಳುಬೈಲು ಇದರ ವಾರ್ಷಿಕ ಮಹಾಸಭೆ ಮತ್ತು 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೇ.3 ರಂದು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಸುಧೀರ್ ನೆಕ್ರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು....

ಹರಿಹರ ಪಲ್ಲತ್ತಡ್ಕ : ಮೇ.06 ರಿಂದ ಯೋಗ ಶಿಬಿರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಮೇ.06 ರಿಂದ ಮೇ.25 ರವರೆಗೆ ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಯೋಗ ಶಿಬಿರ ನಡೆಯಲಿದೆ.

ಪೆರಾಜೆಯಲ್ಲಿ ಈಜು ತರಬೇತಿ ಶಿಬಿರ ಉದ್ಘಾಟನೆ

ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು. ಶಿಬಿರವನ್ನು ಪೆರಾಜೆ ಶ್ರೀ ಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಉದ್ವಾಟಿಸಿದರು. ಈ ಸಂದರ್ಭದಲ್ಲಿ ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ...

ಸುಳ್ಯ : ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮನುದೇವ ಪರಮಲೆ

ಸುಳ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೇತನ್ ನಾವೂರು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಯುವ ಮೋರ್ಚಾ ಉಪಾಧ್ಯಕ್ಷ ರಾಗಿದ್ದ ಮನುದೇವ್ ಪರಮಲೆ ಅವರಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ : ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚೇತನ್ ನಾವೂರು ರಾಜಿನಾಮೆ

ಸುಳ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚೇತನ್ ನಾವೂರು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಸುಳ್ಯ ಮಂಡಲದಲ್ಲಿ ಮೂರು ವರ್ಷಗಳ ಅವಧಿಗೆ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ವ್ಯಾಪ್ತಿಯಿಂದ ಚೇತನ್ ನಾವೂರು ಅವರನ್ನು ಆಯ್ಕೆ ಮಾಡಲಾಗಿತ್ತು. ಸ್ಥಳೀಯ ಬಿಜೆಪಿ ನಾಯಕರ ವರ್ತನೆಯಿಂದ ಮನನೊಂದು ಪಕ್ಷದ...

ಕೊಲ್ಲಮೊಗ್ರು : ಶಿರಾಡಿ ಹಾಗೂ ಉಪ ದೈವಗಳ ನೇಮೋತ್ಸವ

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲುವಿನಲ್ಲಿ ಮೇ.01 ಮತ್ತು 02 ರಂದು ಶಿರಾಡಿ ಹಾಗೂ ಉಪ ದೈವಗಳ ನೇಮ ನಡಾವಳಿ ನಡೆಯಿತು.ಮೇ.01 ರಂದು ಶ್ರೀ ದೈವದ ಭಂಡಾರ ಬಂದು, ಮೇ.02 ರಂದು ಶಿರಾಡಿ ಹಾಗೂ ಉಪ ದೈವಗಳ ನೇಮೋತ್ಸವ ನಡೆಯಿತು. ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ

ನಾಗಪಟ್ಟಣ ಸೇತುವೆ ದುರಸ್ತಿ ಕಾರ್ಯ ಆರಂಭ – ಪಂಚಾಯತ್ ಸದಸ್ಯರ ಮನವಿಗೆ ಸ್ಪಂದಿಸಿದ ಇಲಾಖೆ

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸೇತುವೆ ಕಾಮಗಾರಿ ತುರ್ತಾಗಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಇಲಾಖೆಯ ಅಭಿಯಂತರರಾದ ಲೋಕೇಶ್ ಮತ್ತು ಪರಮೇಶ್ವರ ರವರು ಎ.29 ರಂದು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ...
Loading posts...

All posts loaded

No more posts

error: Content is protected !!