- Tuesday
- August 11th, 2026
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಬಾಳೆಗುಡ್ಡೆ ರಸ್ತೆ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾನಿಯಾಗಿದೆ. ರಸ್ತೆ ಬದಿ ಬೃಹತ್ ಗುಂಡಿಬಿದ್ದಿದ್ದು ಡಾಮರೆಲ್ಲ ಕಿತ್ತು ಹೋಗಿ ಸಂಚಾರಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.
ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಲ್ಮಕಾರು ಗ್ರಾಮದ ಗುಳಿಕ್ಕಾನ ಎಂಬಲ್ಲಿ ಗುಡ್ಡ ಜರಿಯುವ ಭೀತಿಯಲ್ಲಿದ್ದ 6 ಕುಟುಂಬಗಳ 21 ಜನರನ್ನು ಕಲ್ಮಕಾರು ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಲ್ಮಕಾರು ಶಾಲೆಯ ಬಿಳಿಮಲೆ ಲಕ್ಷ್ಮೀ ರಾಮಣ್ಣ ರಂಗಮಂದಿರದ ತಾತ್ಕಾಲಿಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ವರದಿ...
ಆ.03 ರಂದು ಸಂಜೆ ಸುರಿದ ಭಾರಿ ಮಳೆಗೆ ಅರಂತೋಡು ಗ್ರಾಮದ ಬೆದ್ರುಪಣೆಯಲ್ಲಿನ ಸೇತುವೆಯ ಒಂದು ಬದಿಯ ತಡೆಗೋಡೆ ಮತ್ತು ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಹೊಳೆಯ ಇನ್ನೊಂದು ಬದಿಯ ಹಲವಾರು ಮನೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಳೆ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆ ಕೂಡಲೇ ಸ್ಪಂದಿಸಿದ ಅಡ್ತಲೆಯ ನಾಗರಿಕ ಹಿತರಕ್ಷಣಾ...
ವಿಧಿಯ ಆಟ ತುಂಬಾ ಕ್ರೂರ, ಸೂತ್ರಧಾರನ ಆಟ ಘೋರ, ಕೊಚ್ಚಿ ಹೋದ ಬದುಕ ತೀರ, ಮನಸ್ಸು ಆಗಿದೆ ತುಂಬಾ ಭಾರ... ಎಲ್ಲಾ ಇದ್ದ ಊರಿನಲ್ಲಿ ಏನೂ ಇಲ್ಲದಾಗಿದೆ, ಎಲ್ಲಾ ಕೊಚ್ಚಿ ಹೋಗಿದೆ, ಖುಷಿಯು ದೂರವಾಗಿದೆ, ದುಃಖ ಎಲ್ಲೆಡೆ ತುಂಬಿದೆ... ದೂರವಿರುವ ಗಗನದಿಂದ ಘೋರವಾದ ಮಳೆಯು ಸುರಿದು ಬದುಕು ದುಸ್ತರವಾಗಿದೆ, ಈ ಊರೇ ತತ್ತರವಾಗಿದೆ, ಕಣ್ಣೀರೇ ಉತ್ತರವಾಗಿದೆ......
ಆ.4 ರ ಸಂಜೆ ಸುರಿದ ಭಾರಿ ಮಳೆಗೆ ಕಂದ್ರಪ್ಪಾಡಿ ದೇವ ಮಡಪ್ಪಾಡಿ ಸಂಪರ್ಕಿಸುವ ರಸ್ತೆಯ ಕಂದ್ರಪ್ಪಾಡಿ ಎಂಬಲ್ಲಿ ಬರೆ ಕುಸಿದು ರಸ್ತೆಯಲ್ಲಿ ಸಂಚರಿಸಲು ಸಂಕಷ್ಟವಾಗಿದೆ
ವಳಲಂಬೆ ದೇವಸ್ಥಾನದ ಬಳಿಯಿರುವ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಮಳೆಗೆ ಕೊಚ್ಚಿ ಬಂದ ಮರಗಳು ಸಿಲುಕಿ ಹಾನಿಯಾಗಿದೆ. ಮೂರು ಪಿಲ್ಲರ್ ಕೊಚ್ಚಿ ಹೋಗಿದೆ. ಇದರಿಂದ ನೀರು ಬ್ಲಾಕ್ ಆಗಿ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತ್ತು. ಉಳಿದ ಪಿಲ್ಲರ್ ಗಳಲ್ಲಿ ಸಿಲುಕಿರುವ ಮರಗಳನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಊರವರು ತೆರವುಗೊಳಿಸಿದರು.
ಮೇಘಸ್ಪೋಟದಿಂದ ನಲುಗಿ ಹೋಗಿರುವ ಕಲ್ಮಕಾರು ಕೊಲ್ಲಮೊಗ್ರು ಭಾಗದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವೀರಕೇಸರಿ ಮಿತ್ರವೃಂದ ಮಂಡೆಕೋಲು ಮೊದಲಾದ ಸಂಘಟನೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಶ್ರಮಸೇವೆ ನಡೆಸಿದರು. ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಪುನಃ ಸುರಿದ ಭಾರಿ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದ...
ಆ.3 ರಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾಲೆಮಜಲಿನ ಸುಧೀರ್ ಗೌಡ, ಹರೀಶ್, ಪುರುಷೋತ್ತಮ್ ಗೌಡ, ಶಿವಪ್ರಸಾದ್ ಹಾಲೆಮಜಲು, ವೆಂಕಪ್ಪ ಗೌಡ ಗುಡ್ಡೆಮನೆ ಇವರ ಅಡಿಕೆ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟು ನೀರು ಉಕ್ಕಿ ಹರಿದಿದೆ ಎನ್ನಲಾಗಿದೆ.
ಕಲ್ಮಕಾರು ಕೊಲ್ಲಮೊಗ್ರ ಭಾಗದಲ್ಲಿ ಮಧ್ಯಾಹ್ನ ದಿಂದಲೇ ವ್ಯಾಪಕ ಮಳೆಯಾಗುತ್ತಿದ್ದು ಮತ್ತೆ ಪ್ರವಾಹ ಪರಿಸ್ಥಿತಿ ಬಂದಿದೆ. ಕೊಲ್ಲಮೊಗ್ರ ಸೇತುವೆ ಮೇಲೆ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಅಮರ ಸೇನಾ ರಕ್ತದಾನಿಗಳ ತಂಡ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಂಯುಕ್ತಾಶ್ರಯದಲ್ಲಿ ಆ.14 ರಂದು ಆಜಾದಿ ಕಾ ಅಮೃತ ಮಹೋತ್ಸವವನ್ನು ರಕ್ತದಾನ...
Loading posts...
All posts loaded
No more posts
