ಸುಳ್ಯ: ಬಾಲ ವಿಕಾಸ ಸಮಿತಿ ವತಿಯಿಂದ ಅಭಿಯೋಜಕ ಜನಾರ್ದನ್ ಅವರಿಗೆ ಸನ್ಮಾನ

ಬೂಡು ಅಂಗನವಾಡಿ ಕೇಂದ್ರದಲ್ಲಿ ಬಾಲ ವಿಕಾಸ ಸಮಿತಿ ವತಿಯಿಂದ ಸುಳ್ಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅವರಿಗೆ ಗೌರವಾರ್ಪಣೆ. ಬೂಡು ಅಂಗನವಾಡಿ ಕೇಂದ್ರದಲ್ಲಿ ನಡೆದ ಸ್ವಾತಂತ್ರ್ಯ ಅಮೃತ್ ಮಹೋತ್ಸವ ದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅವರಿಗೆ ಗೌರವಾರ್ಪಣೆ ನಡೆಯಿತು. ಹಲವಾರು ಪ್ರಕರಣಗಳಲ್ಲಿ ಸರಕಾರದ ಪರವಾಗಿ ಸಮರ್ಥ...

ಸಂಪಾಜೆ: ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷರಾಗಿ ಲೋಹಿತ್‌ ಹೊದ್ದೆಟ್ಟಿ ಆಯ್ಕೆ.

ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸಂಪಾಜೆ- ಕೊಡಗು ಇದರ 2022-2023 ನೇ ಸಾಲಿನ ನೂತನ ಸಮಿತಿ ಅಧ್ಯಕ್ಷರಾಗಿ ಲೋಹಿತ್‌ ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಕಿರಣ್ ಬಾಲಂಬಿ, ಖಜಾಂಜಿಯಾಗಿ ರವಿಪ್ರಕಾಶ್ ಕುದ್ಭುಳಿ ಇವರು ಆಯ್ಕೆಗೊಂಡಿದ್ದಾರೆ.
Ad Widget

ಮೇನಾಲ: ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಮಮತಾ ರೈ ಬೇಳೆಂತಿಮಾರು ಆಯ್ಕೆ

ಮೇನಾಲ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. 2022-23ನೇ ಸಾಲಿನ ಅಧ್ಯಕ್ಷರಾಗಿ ಮಮತಾ ರೈ ಬೇಳೆಂತಿಮಾರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪೂರ್ಣಿಮಾ ಅವಿನ್ ರೈ ಬೇಲ್ಯ ಹಾಗೂ ಉಷಾಬಾಲಕೃಷ್ಣ ಕಲ್ಲಗುಡ್ಡೆ, ಪ್ರಧಾನ ಕಾವ್ಯದರ್ಶಿಯಾಗಿ ಚಿತ್ರಾ ರಾಧೇಶ್, ಕಾರ್ಯದರ್ಶಿಯಾಗಿ ದೀಪ್ತಿ ಸುನಿಲ್ ರೈ ಹಾಗೂ ಪ್ರಮೀಳಾ ತುದಿಯಡ್ಕ ಆಯ್ಕೆಯಾದರು. ಪೂಜಾ ಸಮಿತಿಯ ಅಧ್ಯಕ್ಷೆ...

ಸುಳ್ಯ : ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ ; ಅಧ್ಯಕ್ಷ ಹರೀಶ್ ರೈ – ಕಾರ್ಯದರ್ಶಿ ಪ್ರಕಾಶ್ ಯಾದವ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ವತಿಯಿಂದ ನಡೆಯುವ ಮೊಸರು ಕುಡಿಕೆ ಉತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. 9ನೇ ವರುಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಹರೀಶ್ ರೈ ಉಬರಡ್ಕ, ಉಪಾಧ್ಯಕ್ಷರಾಗಿ. ಪುರುಷೋತ್ತಮ ಕಿರ್ಲಾಯ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಯಾದವ್, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕೋಶಾಧಿಕಾರಿಯಾಗಿ ರಂಜಿತ್ ಸುಳ್ಯ,...

ಪಾದೆ: ಗಣೇಶೋತ್ಸವ ಸಮಿತಿಅಧ್ಯಕ್ಷರಾಗಿ ಸತ್ಯನಾರಾಯಣ ಕುಜಗುರಿ ಆಯ್ಕೆ

ಬಳ್ಳ ಗ್ರಾಮದ ಪಾದೆಯಲ್ಲಿ 21 ನೇ ವರುಷದ ಶ್ರೀ ಗಣೇಶೋತ್ಸವದ ಸಮಿತಿ ರಚನೆ ಗೊಂಡಿತ್ತು.ಅಧ್ಯಕ್ಷರಾಗಿ ಸತ್ಯನಾರಾಯಣ ಕುಜಗುರಿ, ಕಾರ್ಯದರ್ಶಿ ಯಾಗಿ ಶಿವಪ್ರಸಾದ್ , ಖಜಾಂಚಿ ರಾಮಕೃಷ್ಣ ಪಡ್ಯೊಟ್ಟು ಆಯ್ಕೆಯಾದರು. ಸ್ಥಾಪಕಾಧ್ಯಕ್ಷ ನಾರಾಯಣ ಆಚಾರ್ಯ ನರಿಯಂಗ ಉಪಸ್ಥಿತರಿದ್ದರು.

ಎಡಮಂಗಲ: ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಅಶ್ವತ್ ಬಳಕ್ಕಬೆ ಆಯ್ಕೆ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶೋತ್ಸವದ ಬಗ್ಗೆ ಆಗಸ್ಟ್ 7ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಿಪ್ರಸಾದ್, ರಾಮಕೃಷ್ಣ ರೈ ಮಾಲೆಂಗ್ರಿ, ಗಿರೀಶ್ ನಡುಬೈಲು, ರವೀಂದ್ರ ದೇರಳ, ಪ್ರಿಯಾಂಕ ಪುಳಿಕುಕ್ಕು, ಪ್ರಧಾನ ಅರ್ಚಕರಾದ ಸೀತಾರಾಮಯ್ಯ ನೂಚಿಲ, ಶ್ಯಾಮ್‌ ಕಿಶೋರ್ ಕೇಂಜೂರು, ಸಿಬ್ಬಂದಿ ರವೀಂದ್ರ ಮಾಲೆಂಗಿರಿ ಉಪಸ್ಥಿತರಿದ್ದರು....

ಪಾಲೆಪ್ಪಾಡಿ : ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಂದರಲಿಂಗಂ ಆಯ್ಕೆ

ಪಾಲೆಪ್ಪಾಡಿಯ ಮಂಜುಶ್ರೀ ಗೆಳೆಯರ ಬಳಗ ಮತ್ತು ಸಾರ್ವಜನಿಕ ಗಣೇಶೋತ್ಸವ ವತಿಯಿಂದ ಆ.31 ರಂದುನಡೆಯುವ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಸಮಿತಿಯನ್ನು ರಚಿಸಲಾಯಿತು. 2022-2023 ರ ಸಾರ್ವಜನಿಕ ಗಣೇಶೋತ್ಸವ ಅಧ್ಯಕ್ಷರಾಗಿ ಸುಂದರಲಿಂಗಂ ಸಿ ಕೂಪ್ ಮತ್ತು ಕಾರ್ಯದರ್ಶಿಯಾಗಿ ಜಯಪ್ರಸಾದ್‌ ಕಜೆತ್ತಡ್ಕ, ಹಾಗೂ ವಿಶ್ವನಾಥ್ ಕಟ್ಟತಾರು ಸಮಿತಿಯ ಉಪಾಧ್ಯಕ್ಷರಾಗಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.

ಸಚಿವ ಅಂಗಾರರಿಂದ ಉಡುಪಿಯಲ್ಲಿ ಧ್ವಜಾರೋಹಣ

ಅಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಉಡುಪಿ ಜಿಲ್ಲೆ ವತಿಯಿಂದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ , ಅಜ್ಜರಕಾಡು, ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶ ನೀಡಿದರು....

ಕರುಣಾಕರ ಮಡ್ತಿಲ ರವರಿಗೆ ಸೇವಾ ನಿವೃತ್ತಿ

ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ಕರುಣಾಕರ ಮಡ್ತಿಲರವರು ಸೇವಾ ನಿವೃತ್ತಿ ಹೊಂದಿದ್ದ ಪ್ರಯುಕ್ತ ಆ.14 ರಂದು ಐವರ್ನಾಡಿನ ಪಲ್ಲತಡ್ಕ ಕಾಂಪ್ಲೆಕ್ಸ್ ನಲ್ಲಿ ಅಭಿನಂದನೆ ಮತ್ತು ಸತ್ಕಾರ ಕೂಟ ನಡೆಯಿತು.ಈ ಸಂದರ್ಭದಲ್ಲಿ ಕರುಣಾಕರ ಮಡ್ತಿಲ ಮತ್ತು ಶ್ರೀಮತಿ ಸವಿತಾ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದಿನೇಶ ಮಡ್ತಿಲ ಹಾಗೂ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡರು ಮಾತನಾಡಿ ಕರುಣಾಕರ...

ಬೀರಮಂಗಲ : ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

ಸುಳ್ಯದ ಬೀರಮಂಗಲ ಗೆಳೆಯರ ಬಳಗ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಯತೀಶ್ ಕುಮಾರ್ ಬೀರಮಂಗಲ ನೆರವೇರಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆ, ನಿವೃತ್ತ ಎಎಸೈ ಭಾಸ್ಕರ್, ಕೇಶವ ಬಂಗ್ಲೆಗುಡ್ಡೆ, ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಗಣಪತಿ, ಪುರುಷೋತ್ತಮ, ಗುರುಸ್ವಾಮಿ ರಾಮ್ ಮೋಹನ್ ಸೆಣೈ...
Loading posts...

All posts loaded

No more posts

error: Content is protected !!