ಉಡುಪಿಯ ತಿರಂಗಾ ಯಾತ್ರೆಯಲ್ಲಿ ಸಚಿವ ಅಂಗಾರ ಭಾಗಿ

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ವತಿಯಿಂದ ಕಡಿಯಾಳಿಯಲ್ಲಿರುವ ಪಕ್ಷದ ಕಛೇರಿಯಿಂದ ಸರ್ವೀಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ವರೆಗೆ ಆಯೋಜಿಸಿದ ತಿರಂಗಾ ಯಾತ್ರೆಗೆ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು ಚಾಲನೆ ನೀಡಿ ಜಾಥಾದಲ್ಲಿ ಪಾಲ್ಗೊಂಡು ಕ್ಲಾಕ್ ಟವರ್ ಬಳಿ ಇರುವ ಗಾಂಧಿ ಪ್ರತಿಮೆಗೆ ಪುಷ್ಪಾರ್ಚಣೆ ಮಾಡಿದರು. ಈ ಸಂದರ್ಭದಲ್ಲಿ...

ಪಂಬೆತ್ತಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

ಪಂಬೆತ್ತಾಡಿ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ ಜಯರಾಮ ಭಟ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಜಾಕೆ ದಯಾನಂದ, ಸಂಘದ ನಿರ್ದೇಶಕರಾದ ಕುಲದೀಪ್, ದಿನೇಶ್ ಪಂಜದ ಬೈಲು, ನಾಗಪ್ಪ ಗೌಡ,ಗಣೇಶ್ ಭಟ್,ಕಾರ್ತಿಕ್ ಭೀಮಗುಳಿ,ಊರಿನ ಪ್ರಮುಖರು ಉಪಸ್ಥಿತರಿದ್ದರು.
Ad Widget

ಮಡಪ್ಪಾಡಿ : ಗ್ರಾ.ಪಂ.ನಲ್ಲಿ ಧ್ವಜಾರೋಹಣ

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಆಗಸ್ಟ್15 ರಂದು ಧ್ವಜಾರೋಹಣ ವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಿತ್ರದೇವ ಮಡಪ್ಪಾಡಿ ರವರು ನೆರವೇರಿಸಿದರು ಹಾಗೂ ಮೆರವಣಿಗೆ ಮುಖಾಂತರ ಯುವಕ ಮಂಡಲ ದಲ್ಲಿ ಸಭಾ ಕಾರ್ಯಕ್ರಮವನ್ನೂ ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಮತ್ತು...

ಯೋಧರನ್ನು ಗೌರವಿಸುವುದು ದೇಶ ಪ್ರೇಮದ ಔನತ್ಯಕ್ಕೆ ಅಡಿಗಲ್ಲು- ಮೋಹನರಾಂ ಸುಳ್ಳಿ

ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಶುಭ ಸಮಾರಂಭದಲ್ಲಿ ಯೋಧರನ್ನು ಗೌರವಿಸುವುದು ಶ್ರೇಷ್ಟ ಮತ್ತು ಹೆಮ್ಮೆಯ ಕ್ಷಣವಾಗಿದೆ. ನಿವೃತ್ತ ಯೋಧರಿಗೆ ಗೌರವ ನೀಡುವುದು ದೇಶ ಪ್ರೇಮದ ಭಾವನೆಗಳ ಔನತ್ಯಕ್ಕೆ ಅಡಿಗಲ್ಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ವನ್ನು ಉಳಿಸಿ ಬೆಳೆಸುವತ್ತ ಆಧುನಿಕ ಯುಗದಲ್ಲಿ ಯುವ ಜನಾಂಗ ಕಟಿಬದ್ಧವಾಗಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...

ಯೇನೆಕಲ್ಲು : ಯೋಧರ ಸವಿನೆನಪಿಗಾಗಿ ಸೈನಿಕ ರಸ್ತೆ ನಾಮಕರಣ

ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಸುಬ್ರಹ್ಮಣ್ಯ ಪಂಚಾಯತ್ ವ್ಯಾಪ್ತಿಯ ಯೇನೆಕಲ್ಲುನ ಬಾನಡ್ಕ-ಬೋಳಡ್ಕ ಪಂಚಾಯತ್ ರಸ್ತೆಗೆ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸೈನಿಕ ರಸ್ತೆ ಎಂದು ನಾಮಕರಣ ಮಾಡಲಾಯಿತು.ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್ ರಸ್ತೆ ನಾಮಕರಣ ಫಲಕವನ್ನು ಅನಾವರಣಗೊಳಿಸಿದರು.ಈ ಮೂಲಕ ಬಾನಡ್ಕ-ಬೋಳಡ್ಕ ರಸ್ತೆಯು ಅಧಿಕೃತವಾಗಿ ಸೈನಿಕ ರಸ್ತೆ ಎಂದು ಉಲ್ಲೇಖಿತವಾಯಿತು. ಗ್ರಾಮೀಣ...

ಕೊಡಗು ಸಂಪಾಜೆ ಪಯಸ್ವಿನಿ ಸೊಸೈಟಿಯಲ್ಲಿ ಧ್ವಜಾರೋಹಣ

ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಸಹಕಾರಿ ಸಂಘದ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯ ದಿನದ ದ್ವಜಾರೋಹಣದ ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷರಾದ ರಾಜಾರಾಮ್ ಕಳಗಿ ರವರು ನೆರವೇರಿಸಿದರು. ಈ ಶುಭ ಸಮಾರಂಭದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳು ರವೀಂದ್ರ ಯು.ಪಿ, ಪಯಶ್ವಿನಿ ಸಹಕಾರಿ ಸಂಸ್ಥೆಯ ಸಿಇಓ ಆನಂದ, ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ಹಿರಿಯರು, ಊರಿನವರು ಉಪಸ್ಥಿತರಿದ್ದರು.

ಉಬರಡ್ಕ : ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಮರಗಳ ತೆರವು

ಉಬರಡ್ಕ : ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಮರಗಳ ತೆರವು ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕದಲ್ಲಿ ಸಿಕ್ಕಿಕೊಂಡ ಮರದ ತುಂಡು ಹಾಗೂ ಕಸಗಳನ್ನು ಸ್ವಚ್ಚಗೊಳಿಸಲಾಯಿತು. ಯದುಕುಮಾರ್ ಅಮೈ ಇವರ ನೇತೃತ್ವದ ಸುಮಾರು 20 ಜನರ ತಂಡ ಈ ಕಾರ್ಯವನ್ನು ನಿರ್ವಹಿಸಿದರು.

ಅಡಿಕೆಯ ರಾಷ್ಟ್ರಧ್ವಜದ ಚಿಹ್ನೆ ಜಾಲತಾಣದಲ್ಲಿ ವೈರಲ್

ಅಡಿಕೆ ,ಹಾಳೆಯನ್ನು ಬಳಸಿ ರಾಷ್ಟ್ರಧ್ವಜ ಚಿಹ್ನೆ ರಚನೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹರಿಹರ ಪಲ್ಲತ್ತಡ್ಕ :- ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಹರಿಹರ ಪಲ್ಲತ್ತಡ್ಕ ಪ್ರೌಢ ಶಾಲೆಯಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಗಣ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳಾದ ಮೇಘಶ್ರೀ, ನಿಶ್ಮಿತಾ ಪ್ರಾರ್ಥನೆ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಲವ ಮಲ್ಲಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೇಗನ್...

ಕೊಡಗು ಸಂಪಾಜೆ: 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ

ಕೊಡಗು ಸಂಪಾಜೆ ಗ್ರಾಮದ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದ್ವಜಾರೋಹಣ ಕಾರ್ಯಕ್ರಮವನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್ ರವರು ನೆರವೇರಿಸಿದರು. ಈ ಸಮಾರಂಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಪರಮಲೆ, ಸದಸ್ಯರಾದ ಶ್ರೀಮತಿ ರಮಾದೇವಿ ಕಳಗಿ, ಶ್ರೀ ಕುಮಾರ್ ಚೆದ್ಕಾರ್, ಆಡಳಿತಾಧಿಕಾರಿ ಶ್ರೀ...
Loading posts...

All posts loaded

No more posts

error: Content is protected !!