- Tuesday
- August 11th, 2026
ನಿವೃತ್ತ ಸೇನಾನಿ, ಶಿಕ್ಷಕ ದಿ|ಶೀಂಟೂರು ನಾರಾಯಣ ರೈ ಅವರ ಸ್ಮರಣೆಯ 'ಶೀಂಟೂರು ಸ್ಮೃತಿ' ಕಾರ್ಯಕ್ರಮವು ಆ.13ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ನಾರಾಯಣ ರೈ ಅವರ ದೂರದೃಷ್ಟಿಯ ಫಲವಾಗಿ ಇಂದು ವಿದ್ಯಾಸಂಸ್ಥೆ ಬೆಳೆದು ಹೆಮ್ಮರವಾಗಿದ್ಜರಿಂದ ಗ್ರಾಮೀಣ ಭಾಗದ ಅನೇಕ...
75ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವು ಪಂಜದ ವನಿತಾ ಸಮಾಜ ವತಿಯಿಂದ ಆ.15 ರಂದು ನಡೆಯಿತು. ಧ್ವಜಾರೋಹಣವನ್ನು ನೂತನ ಧ್ವಜಸ್ತಂಭದ ನಿರ್ಮಾಣಕ್ಕೆ ದಾನಿಗಳಾದ ಶ್ರೀಮತಿ ಲೀಲಾವತಿ ಮತ್ತು ಬಾಲಕೃಷ್ಣ ನೇರಳ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪಾ ಡಿ ಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ ಭಾಗವಹಿಸಿದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷೆ ಶ್ರೀಮತಿ ಹೇಮಾವತಿ ಜನಾರ್ಧನ ಉಪಸ್ಥಿತರಿದ್ದರು....
ವೃತ್ತಿಯಲ್ಲಿ ಲಾರಿ ಚಾಲಕರಾಗಿರುವ ಸುಳ್ಯ ನಿವಾಸಿ ವಿಜಯಕುಮಾರ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರ ಹಾರ್ದಿಕ್ (9 ವರ್ಷ ಪ್ರಾಯ) 4 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಇದೀಗ ತೀವ್ರವಾದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಗೆಳೆಯರೊಂದಿಗೆ ಆಟವಾಡುತ್ತಾ ಬೆಳೆಯಬೇಕಿದ್ದ ಮಗು ಗಂಭೀರವಾದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ಹೆತ್ತವರ ಪಾಲಿಗೆ ಅರಗಿಸಲಾಗದ ನೋವಾಗಿ ಪರಿಣಮಿಸಿದೆ. ಇಲ್ಲಿಯ ತನಕ ಈತನ ಚಿಕಿತ್ಸೆಗೆ...
ಹಟ ಮಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ದಾರುಣ ಘಟನೆ ಸುಳ್ಯದ ನಾವೂರಿನಿಂದ ವರದಿಯಾಗಿದೆ.ಆರು ದಿನಗಳ ಹಿಂದೆ ಈ ಘಟನೆ ನಡೆದಿದೆಯೆನ್ನಲಾಗಿದ್ದು ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಆ ಮನೆಗೆ ಧಾವಿಸಿ ಪರಿಶೀಲಿಸಿದರು. ಬಳಿಕ ಮಗುವನ್ನು ಸಿ.ಡಿ.ಪಿ.ಒ. ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತೆಂದು...
ಅರಂತೋಡು ಗ್ರಾಮದ, ಕಲ್ಲುಗದ್ದೆ ಶೇಷಪ್ಪ ಮಾಸ್ಟರ್ (ವ.98)ರವರು ಅಲ್ಪಕಾಲದ ಅಸೌಖ್ಯದಿಂದ ಆ.18ರಂದು ಬೆಳಿಗ್ಗೆ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ನಿವೃತ್ತ ಶಿಕ್ಷಕ ಚಂದ್ರಶೇಖರ ಮಾಸ್ಟರ್ ಕಲ್ಲುಗದ್ದೆ, ವಸಂತ ಕಲ್ಲುಗದ್ದೆ, ನಿವೃತ್ತ ಶಿಕ್ಷಕ ಶಾಂತರಾಮ ಮಾಸ್ಟರ್ ಐವರ್ನಾಡು, ದುಗಲಡ್ಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟ್ರಮಣ ಮಾಸ್ಟರ್, ಪುತ್ರಿಯರಾದ ದಮಯಂತಿ ಶಿವಪ್ಪ ಐವರ್ನಾಡು,...
ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ ಆ. 16 ರಂದು ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಎಸ್.ಆರ್. ರಂಗನಾಥನ್ ರವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹರಾಗಿದ್ದು, ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಗುತ್ತಿತು. ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಆರಂಭಗೊಂಡಿತು. ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಂಸುಪಾಲರಾದ ಡಾ. ಮೋಕ್ಷಾ ನಾಯಕ್ ಗ್ರಂಥಾಲಯದ ಮಹತ್ವ ಮತ್ತು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಂಡೋಡಿಯಲ್ಲಿ ಆ.15 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ ಚಾಂತಾಳ ಅವರು ಧ್ವಜಾರೋಹಣ ನೆರವೇರಿಸಲು ಆಗಮಿಸಿದ್ದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಮಾಧವ ಚಾಂತಾಳ ಅವರು ವಿದ್ಯಾರ್ಥಿ ನಾಯಕನ ಕೈಯಲ್ಲಿ ಧ್ವಜಾರೋಹಣ ಮಾಡಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ...
ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಅಮರ ಸೇನಾ ರಕ್ತ ದಾನಿಗಳ ತಂಡ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ, ಅಮರ ಯೋಗ ಕೇಂದ್ರ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಅಮೃತ ಮಹೋತ್ಸವ ಸ್ವತಂತ್ರ್ಯೋತ್ಸವದ ಅಂಗವಾಗಿ...
ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಆ.18 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಿಗ್ಗೆ 9:00 ಗಂಟೆಯಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ರಾತ್ರಿ 7:00 ಗಂಟೆಯಿಂದ 12:00 ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.ವರದಿ :- ಉಲ್ಲಾಸ್ ಕಜ್ಜೋಡಿ
Loading posts...
All posts loaded
No more posts
