- Wednesday
- August 5th, 2026
ಸುಬ್ರಹ್ಮಣ್ಯ ಜುಲೈ 26 : ದಕ್ಷಿಣ ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಜಿನಿಗುಟ್ಟುತ್ತಿರುವ ಮಳೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸಿರುತ್ತಾರೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಪ್ರಮುಖ ಸೇವೆಗಳಾದ ಸರ್ಪ ಸಂಸ್ಕಾರ,...
ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ವತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿ ವಿದ್ಯಾ ಕೇಂದ್ರ ಚೊಕ್ಕಾಡಿ ಇಲ್ಲಿಯ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.ಕ್ಷಯ ಮುಕ್ತ ಭಾರತ ಮತ್ತು ವ್ಯಸನ ಮುಕ್ತ ಭಾರತ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ನಡೆದ ಮಾಹಿತಿ ಕಾರ್ಯಾಗಾರವನ್ನು ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಚೊಕ್ಕಾಡಿ ಇದರ ಅಧ್ಯಕ್ಷ ಮಹಾಬಲೇಶ್ವರ...
ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಜ್ಜಾವರ ಕಾಂತಮಂಗಲ ಯುವಕ ನಿಕೇಶ್ ಮೃತಪಟ್ಟ ಘಟನೆ ಜು.26 ನಡೆದಿದೆ. ಜು.24ರಂದು ಮೈಸೂರಿನಲ್ಲಿ ಬೈಕ್ ಅಪಘಾತಕ್ಕೊಳಗಾಗಿದ್ದು ಗಂಭೀರ ಗಾಯಗೊಂಡ ನಿಕೇಶ್ ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮುಂಜಾನೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿಕೇಶ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಮೃತರು ತಂದೆ ಜಗದೀಶ್,...
ತೋಟಗಾರಿಕೆ ಇಲಾಖೆಯಲ್ಲಿ ಕೃಷಿಕರಿಗೆ ಸಿಗುವಂತಹ ವಿವಿಧ ಸವಲತ್ತುಗಳ ಕುರಿತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, 2026-27ನೇ ಸಾಲಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ಫೇಟ್(ಮೈಲುತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ 600 ರೂಪಾಯಿ...
ಸುಳ್ಯದ ಕೆ. ಎಸ್. ಆರ್. ಟಿ. ಸಿ ಬಸ್ಸು ನಿಲ್ದಾಣದ ಬಳಿಯ ಸುಳ್ಯ ಸೆಂಟರ್ ನಲ್ಲಿ ಸಂಜರಿ ಪವರ್ ಟೂಲ್ಸ್ ಜುಲೈ 27 ರಂದು ಶುಭಾರಂಭಗೊಳ್ಳಲಿದೆ. ಈ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ವಿವಿಧ ಬಗೆಯ ಪವರ್ ಟೂಲ್ಸ್ ಗಳ ಮಾರಾಟಗಳು ಮತ್ತು ಸೇವೆಗಳು ಇರಲಿವೆ ಎಂದು ಮಾಲಕರು ತಿಳಿಸಿದ್ದಾರೆ.
ಪಕ್ಷದ ನಿಸ್ವಾರ್ಥ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ ಸ್ಮೃತಿ ದಿನಾಚರಣೆ ಅಂಗವಾಗಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಪಕ್ಷದ ಮುಖಂಡರು ಅವರ ನಿವಾಸಕ್ಕೆ ಭೇಟಿ ನೀಡಿದರು. ಶಾಸಕರು ದಿ.ಪ್ರವೀಣ್ ನೆಟ್ಡಾರು ಪುತ್ಥಳಿಗೆ ಹಾರ ಹಾಕಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ನಿವೃತ್ತ ಯೋಧ ಮಾಧವ ಪೂಜಾರಿ ಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ...
ದಿನಾಂಕ : 26-07-2026 ಭಾನುವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197*01,ಮೇಷರಾಶಿ*,ಹಲವು ಕಾರಣಗಳಿಂದ ಕುಟುಂಬದಲ್ಲಿ ಉದ್ವಿಗ್ನತೆಯ ವಾತಾವರಣವಿರಬಹುದು, ಇದರಿಂದಾಗಿ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ವೈಯಕ್ತಿಕ ಜೀವನವು ಸಾಮಾನ್ಯವಾಗಿರುತ್ತದೆ, ಆದರೆ ನಿಮ್ಮ ಜೀವನ ಸಂಗಾತಿಯೊಂದಿಗೆ ಬಿರುಕು ಉಂಟಾಗುವ ಸಾಧ್ಯತೆಗಳಿವೆ, ಗಮನಿಸಿ:- ಇಂದು ಸ್ವಲ್ಪ ಜಾಗರೂಕರಾಗಿರಿ, ಪರಿಹಾರ:-ಆಂಜನೇಯನನ್ನು ಪೂಜಿಸಿ, *02,ವೃಷಭರಾಶಿ*,ಹೊರಗಿನ ಆಹಾರ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸದಿದ್ದರೆ ಆರೋಗ್ಯ...
ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನಲ್ಲಿ ಮಾದಕ ದ್ರವ್ಯ, ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ಬಗ್ಗೆ ಅರಿವು ಕಾರ್ಯಕ್ರಮ
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾಕೋಶ ಇದರ ಸಹಯೋಗದೊಂದಿಗೆ ಆ್ಯಂಟಿ ಡ್ರಗ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಜಂಟಿಯಾಗಿ ದಿನಾಂಕ ಜು.24ರಂದು ಮಾದಕ ದ್ರವ್ಯ, ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ...
ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜುಲೈ 20 ಸೋಮವಾರದಿಂದ ಜುಲೈ 25...
ರಾಷ್ಟ್ರೀಯ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಬೆಂಗಳೂರು ಇದರ ಸಹಕಾರದೊಂದಿಗೆ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಸಂಸ್ಕೃತಿ ಸಂಭ್ರಮವು ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜು 26 ರಂದು ಜರುಗಲಿದೆ.ಚುಟುಕು ಕವಿಗೋಷ್ಠಿಯಲ್ಲಿ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಸ್ವರಚಿತ 2 ಚುಟುಕುಗಳನ್ನು ವಾಚಿಸಲಿದ್ದಾರೆ.
Loading posts...
All posts loaded
No more posts
