- Thursday
- August 13th, 2026
ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಫೆ.11 ರಂದು ವಾರ್ಷಿಕ ನೇಮೋತ್ಸವ ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಗೆ ಗಣಹೋಮ, ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು, ಬೆಳಿಗ್ಗೆ 9:30 ಕ್ಕೆ ಶಿವಪೂಜೆ, ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶ ಪೂಜೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಈ ಸಮಿತಿಯು ಮುಂದಿನ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ
ಜೇಸಿಐ ಪಂಜ ಪಂಚಶ್ರೀ, ಮೂಡೂರು ಇನ್ಫೋಟೆಕ್ ಪಂಜ ಇವರ ಜಂಟಿ ಆಶ್ರಯದಲ್ಲಿ ಕೊಲ್ಲಮೊಗ್ರದ ಕೆ .ವಿ .ಜಿ. ಅನುದಾನಿತ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಸರಣಿ ತರಬೇತಿ ಕಾರ್ಯಗಾರದ ಅಂಗವಾಗಿ ನಲಿವಿನ ಓದು ಗೆಲುವಿನ ಕಡೆಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರವು ಫೆ.06 ರಂದು ನಡೆಯಿತು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಜೇಸಿಐ ಪಂಜ...
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ವತಿಯಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ ಕಾರ್ಯಕ್ರಮಮನ್ನು ಫೆ. 12 ರಂದು ಬೆಳಿಗ್ಗೆ 11-00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಸುಳ್ಯ ತಾಲೂಕು ಕಛೇರಿಯಲ್ಲಿ ಆಯೋಜಿಸಲಾಗಿರುತ್ತದೆ. ಬಳಿಕ ಅಪರಾಹ್ನ 2.00 ಗಂಟೆಯಿಂದ ಅಪರಾಹ್ನ 3.00 ಗಂಟೆಯವರೆಗೆ ಸಂಪಾಜೆ ಗ್ರಾಮ ಪಂಚಾಯತ್ ಭೇಟಿ ಕಾರ್ಯಕ್ರಮವನ್ನು ನಡೆಯಲಿದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್...
ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ ಹಾಗೂ ಉಪಾಧ್ಯಕ್ಷರಾಗಿ ಪುರುಷೋತ್ತಮ ಕಾಡುಸೊರಂಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾದ ಕೇಶವಮೂರ್ತಿ ಹೆಬ್ಬಾರ್, ಆಶಿಕ್ ದೇವರಗುಂಡ, ಉಮೇಶ್ ಮಂಡೆಕೋಲು, ಲಕ್ಷ್ಮಣ ಉಗ್ರಾಣಿಮನೆ, ರಾಜಣ್ಣ ಪೇರಾಲುಮೂಲೆ, ಲಿಂಗಪ್ಪ ಬದಿಕಾನ,ಕುಸುಮ ದೇವರಗುಂಡ, ಸುಶೀಲ ಚೌಟಾಜೆ, ಶಶಿಧರ ಕಲ್ಲಡ್ಕ, ಸದಾನಂದ ಮಡಿವಾಳಮೂಲೆ ಉಪಸ್ಥಿತರಿದ್ದರು. ಸಹಕಾರ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ...
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು...
ಸುಬ್ರಹ್ಮಣ್ಯ ಫೆ 05 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಅತ್ಯುನ್ನತ ಅಂಕ ಪಡೆದವರಿಗೆ ರೂ.10000 ದತ್ತಿ ನಿಧಿಯನ್ನು ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ದತ್ತಿ ನಿಧಿಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಮೂಕಮಲೆ ಅವರಿಗೆ ಹಸ್ತಾಂತರಿಸಿದರು. ಮುಖ್ಯ...
https://youtu.be/_B5XQShoCu0?si=WU9apUhF8jjAKIr2 ಅಜ್ಜಾವರ ಗ್ರಾಮದ ಪಡ್ಡಂಬೈಲು ನಿವಾಸಿ ಶಂಕರ ಪಾಟಾಳಿಯವರ ಮನೆಯ ಅಂಗಳಕ್ಕೆ ಎರಡು ಬಾರಿ ಬಂದ ಚಿರತೆ ಎರಡು ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಬಿಎಸ್ಎನ್ ಎಲ್ ನಿವೃತ್ತ ಉದ್ಯೋಗಿ ಪಡ್ಡಂಬೈಲು ಶಂಕರ ಪಾಟಾಳಿಯವರ ಅಂಗಳದಲ್ಲಿ ರಾತ್ರಿ ಸುಮಾರು 1.40 ಸುಮಾರಿಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ...
ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ರಿ.ಇದರ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಜಲಾಲಿಯ ರಾತೀಬ್ ಇದರ ವಾರ್ಷಿಕ ದಿಖ್ರ್ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಫೆಬ್ರವರಿ 10 ರಂದು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಮಿಟಿಯ ಮಾಜಿ ಅಧ್ಯಕ್ಷ ಹಾಗೂ ಸಂಘಟಕ ಶರೀಫ್ ಜಟ್ಟಿಪಳ್ಳ ಫೆ.6 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ...
Loading posts...
All posts loaded
No more posts
