- Thursday
- August 13th, 2026
ಸುಳ್ಯದ ಜ್ಯೋತಿ ವೃತ್ತದ ಬಳಿ ಸವಿತಾ ಜ್ಯುವೆಲ್ಲರಿ ವರ್ಕ್ ಸೆ.1 ರಂದು ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ಬಗೆಯ ಚಿನ್ನ ಬೆಳ್ಳಿಯ ಕೆಲಸಗಳನ್ನು ಮಾಡಿಕೊಡಲಾಗುವುದು. ಹಾಗೂ ಗ್ರಾಹಕರು ತಮಗೆ ಬೇಕಾದಂತೆ ಆಭರಣ, ಮೂರ್ತಿ ಹಾಗೂ ಇತರ ಸಾಮಗ್ರಿಗಳನ್ನು ತಯಾರಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.
ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ.ಸರ್ಕಲ್ ನಲ್ಲಿ ಶ್ರೀ ಮಹಾಲಕ್ಷ್ಮಿ ಜನರಲ್ ಸ್ಟೋರ್ ಶುಭಾರಂಭ ಸೆ.1ರಂದು ಶುಭಾರಂಭಗೊಂಡಿತು. ಎಲ್ಲಾ ಬಗೆಯ ಉತ್ತಮ ಗುಣಮಟ್ಟದ ಜಿನಸು ಸಾಮಾಗ್ರಿಗಳು ದೊರೆಯುತ್ತದೆ. ಸುಳ್ಯ ನಗರ 2 ಕಿ.ಮೀ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ಲಭ್ಯವಿದೆ ಎಂದು ಮಾಲಕರಾದ ಸಂದೀಪ್ ತಿಳಿಸಿದ್ದಾರೆ.
ಮರ್ಕಂಜ ಗ್ರಾಮ ಪಂಚಾಯತ್ ನ ಪ್ತಭಾರ ಪಿಡಿಓ ರವಿಚಂದ್ರ ಎ ಅಧಿಕಾರ ಸ್ವೀಕರಿಸಿದರು. ಪಿಡಿಓ ಧನಪತಿಯವರು ಅಧಿಕಾರ ಹಸ್ತಾಂತರಿಸಿದರು.
ಮರ್ಕಂಜ ಗ್ರಾಮ ಪಂಚಾಯತ್ ನ ಪ್ರಭಾರ ಪಿಡಿಓ ಆಗಿ ರವಿಚಂದ್ರ ಎ ಅಧಿಕಾರ ಸ್ವೀಕರಿಸಿದರು. ಪಿಡಿಓ ಧನಪತಿಯವರು ಅಧಿಕಾರ ಹಸ್ತಾಂತರಿಸಿದರು.ಧನಪತಿಯವರು ಗುತ್ತಿಗಾರು ಗ್ರಾಮ ಪಂಚಾಯತ್ ಗೆ ವರ್ಗಾವಣೆಯಾಗಿದ್ದಾರೆ.
ಜೇಸಿಐ ಬೆಳ್ಳಾರೆ, ಯುವ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ನಡೆಯುತ್ತಿರುವ 'ಕ್ಷಯ ಮುಕ್ತ ಭಾರತ' ಕಿರುಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಸೆ.1ರಂದು ನಡೆಯಿತು. ಕಿರುಚಿತ್ರದ ಮುಹೂರ್ತವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜೇಸಿ ರಾಜೀವಿ.ಆರ್ ರೈ ನೆರವೇರಸಿ ಕಿರುಚಿತ್ರಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ...
ತೊಡಿಕಾನ ಗ್ರಾಮದಲ್ಲಿ ಪರ್ನೋಜಿ ಉಲ್ಲಾಸ್ ನಗರದಲ್ಲಿ ನಿವೃತ್ತ ಸೈನಿಕ ಚಂಗಪ್ಪ ಗೌಡ ಕಲ್ಲಗದ್ದೆ ಮಾಲಕತ್ವದ ಮಾತೃಶ್ರೀ ಜನರಲ್ ಸ್ಟೋರ್ & ಚಿಕನ್ ಸೆಂಟರ್ ಸೆ.1 ರಂದು ಶುಭಾರಂಭಗೊಂಡಿತು.
ಅಫ್ಘಾನಿಸ್ತಾನದ ತಾಲಿಬಾನಿಗಳ ಮಾನಸಿಕತೆಯ ವ್ಯಕ್ತಿಗಳು ಭಾರತದಲ್ಲೂ ಇದ್ದು ಹಿಂದೂ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅದೇ ಮಾನಸಿಕತೆಯ ವ್ಯಕ್ತಿಗಳು ಹಿಂದೂಗಳನ್ನು ಶೋಷಣೆ ಮಾಡುವ ಸನ್ನಿವೇಶಗಳೂ ಎದುರಾಗಬಹುದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ. ತಾಲೂಕಿನ ಮಂಡೆಕೋಲು ಗ್ರಾಮದ ಮೈಲೆಟ್ಟಿಪಾರೆ ಎಂಬಲ್ಲಿ ಗೌರಿ ಎಂಬ ಬಡ ದಲಿತ ಮಹಿಳೆಗೆ ವೇದಿಕೆಯ...
ಮಡಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಚಿಲ್ಪಾರು ಪ್ರಭಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಪ್ರಭಾರ ಪಿ.ಡಿ.ಒ ಆಗಿದ್ದ ರವಿಚಂದ್ರರವರು ಮರ್ಕಂಜ ಗ್ರಾಮ ಪಂಚಾಯಿತಿಗೆ ಪ್ರಭಾರ ಪಿ.ಡಿ.ಒ ಆಗಿ ವರ್ಗಾವಣೆಯಾಗಿರುತ್ತಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಬಳ್ಪ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಬರುವ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ ಧನ್ವಂತರಿ ಸಂಘದ ಸದಸ್ಯರಾದ ಶ್ರೀಮತಿ ವಸಂತಿಯವರಿಗೆ 6920 ಮಂಜೂರಾಗಿರುತ್ತದೆ. ಮಂಜೂರಾದ ಮೊತ್ತವನ್ನು ಒಕ್ಕೂಟದ ಅಧ್ಯಕ್ಷರಾದ ಮೋಹನ್ ಬಿ ಕೆರೆ ರವರು ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ,...
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಬಳ್ಪ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ಬರುವ ಆರೋಗ್ಯ ರಕ್ಷಾ ಸಹಾಯಧನ ಧರ್ಮಶ್ರೀ ಸಂಘದ ಸದಸ್ಯರಾದ ಶ್ರೀಮತಿ ಭವಾನಿರವರಿಗೆ 7200 ಮಂಜೂರಾಗಿರುತ್ತದೆ. ಮಂಜೂರಾದ ಮೊತ್ತವನ್ನು ವಲಯದ ಮೇಲ್ವಿಚಾರಕರಾದ ಮುರಲೀಧರ ರವರು ವಿತರಿಸಿದರು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ಮೋಹನ್ ಬಿ ಕೆರೆ,...
Loading posts...
All posts loaded
No more posts
