ಜಯನಗರ : ಕಾಡಗುಡ್ಡೆಡ್ ಕಲ್ಲ್ ಕೊರಗಜ್ಜನ ಭಕ್ತಿ ಸುಗಿಪು ಬಿಡುಗಡೆ

ಸಂಕೇಶ ಪ್ರೊಡಕ್ಷನ್ ನಿರ್ಮಾಣದ ಕಾಡಗುಡ್ಡೆಡ್ ಕಲ್ಲ್ ಎಂಬ ಕೊರಗಜ್ಜನ ತುಳು ಭಕ್ತಿಗೀತೆಯು ನ.22 ರಂದು ಸುಳ್ಯ ಜಯನಗರದಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವಸ್ಥಾನ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ, ನಂದರಾಜ ಸಂಕೇಶ , ದೈವ ಪಾತ್ರಿ ಉಮೇಶ್ ಕುದ್ಪಾಜೆ ಹಾಗೂ ಊರ...

ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯದ ಶ್ರಾವ್ಯ.ಎಸ್.ವಿ ಪ್ರಥಮ

ಪುತ್ತೂರಿನ ಫಿಲೊಮಿನಾ ಕಾಲೇಜಿನ ಸಿಲ್ವರ್ ಜುಬಿಲಿ ಹಾಲ್ ನಲ್ಲಿ ನಡೆದ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ 14ರ ವಯೋಮಾನದ ಕೆಳಗಿನ ವಿದ್ಯಾರ್ಥಿಗಳ ಗಾಯನ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಭಾಗವಹಿಸಿದ ಶ್ರಾವ್ಯ.ಎಸ್.ವಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಎಚ್ ಎಲ್ ವೆಂಕಟೇಶ್ ಮತ್ತು ಶ್ರೀಮತಿ ಜಾನಕಿ...
Ad Widget

ಹರಿಹರ ಪಲ್ಲತ್ತಡ್ಕ : ಗ್ರಾಮ ಪಂಚಾಯತ್ ನಲ್ಲಿ ಉದ್ಯಾನವನ ನಿರ್ಮಾಣ

ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನಲ್ಲಿ "ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ" ಯೋಜನೆಯ ಅಡಿಯಲ್ಲಿ "ಗ್ರಾಮೀಣ ಉದ್ಯಾನವನ" ಎಂಬ ಪರಿಕಲ್ಪನೆಯಲ್ಲಿ ಗ್ರಾಮಪಂಚಾಯತ್ ವಠಾರದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ.ಇಲ್ಲಿ ಹಚ್ಚ ಹಸಿರಿನ ಹುಲ್ಲು, ವಿವಿಧ ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದ್ದು, ಕೆಲವು ಗಿಡಗಳಿಗೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಉದ್ಯಾನವನಕ್ಕೆ ನೀರು ಹಾಯಿಸಲು ನೀರಿನ ವ್ಯವಸ್ಥೆ ಇದೆ. ನಡೆದಾಡಲು...

ರಂಗಮನೆಯಲ್ಲಿ ಹಿಮ್ಮೇಳ ತರಗತಿ ಆರಂಭ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುವ ಯಕ್ಷಗಾನ ಹಿಮ್ಮೇಳ ತರಗತಿಯನ್ನುಹಿರಿಯ ಕಲಾವಿದರಾದ ಸುಜನಾ ಸುಳ್ಯರವರು ಉದ್ಘಾಟಿಸಿದರು.ಗುರುಗಳಾದ ವಳಕುಂಜ ಸುಬ್ರಹ್ಮಣ್ಯ ಮತ್ತು ಕೇಂದ್ರದ ಸಂಚಾಲಕರಾದ ಡಾ. ಸುಂದರ ಕೇನಾಜೆ ಉಪಸ್ಥಿತರಿದ್ದರು.ತರಗತಿಯು ಪ್ರತಿ ಭಾನುವಾರ ಪೂರ್ವಾಹ್ನ 9.00 ರಿಂದ ಅಪರಾಹ್ನ 1.00 ರ ವರೆಗೆ ನಡೆಯಲಿದ್ದು ಆಸಕ್ತರು ಗುರು...

ತೊಡಿಕಾನ : ಮತ್ಸ್ಯತೀರ್ಥ ನದಿಯ ಸ್ವಚ್ಛತಾ ಕಾರ್ಯ

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನ.22 ರಂದು ವಿಪತ್ತು ನಿರ್ವಹಣಾ ಘಟಕ ಸಂಪಾಜೆ ಹಾಗೂ ಸುಳ್ಯ ಘಟಕ ಮತ್ತು ಯುವ ಬ್ರಿಗೇಡ್ ಸುಳ್ಯ ಇದರ ಸದಸ್ಯರಿಂದ ಮತ್ಸ್ಯತೀರ್ಥ ನದಿಯ ಸ್ವಚ್ಛತಾ ಕಾರ್ಯ ಜರುಗಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾದ ಕಿಶೋರ್ ಕುಮಾರ್ ಉಳುವಾರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾಶಂಕರ್...

ಕಡಬ : ಹಾಡುಹಗಲೇ ಮನೆ ಅಂಗಳಕ್ಕೆ ಬಂದ ಕಾಡಾನೆ

ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಹಾಡುಹಗಲೇ ಕಾಡಾನೆಗಳು ಮನೆ ಅಂಗಳಕ್ಕೆ ಹಾಗೂ ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಭೀತಗೊಳಿಸುತ್ತಿರುವ ಘಟನೆ ನಡೆದಿದ್ದು, ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಕೊಣಾಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಗಲಲ್ಲೂ ತೋಟಗಳಿಗೆ ನುಗ್ಗಿ ಕೃಷಿ ನಾಶಪಡಿಸುತ್ತಿರುವ ದೂರುಗಳು ಕೇಳಿಬಂದಿವೆ.ಮಧುಸೂದನ್ ಭಟ್ ಕಡ್ಯ, ನರಸಿಂಹ...

ಗುತ್ತಿಗಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮದ ಕರಪತ್ರ ಬಿಡುಗಡೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಇದರ ವತಿಯಿಂದ ಸದಸ್ಯರ ಖಾತೆಗೆ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮ ಅನುಷ್ಠಾನ ಮಾಡಲಿದ್ದು ತಾಲೂಕಿನಲ್ಲಿ ಪ್ರಥಮ ಬಾರಿಗೆ ಗುತ್ತಿಗಾರು ವಲಯದಲ್ಲಿ ಗುತ್ತಿಗಾರು ಹಣ ಸಂಗ್ರಹ ಕೇಂದ್ರದಲ್ಲಿ ನಡೆಯಲಿದ್ದು ಇದರ ಅಂಗವಾಗಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಗುತ್ತಿಗಾರು ವಲಯ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು...

ಲತಾಶ್ರೀ ಸುಪ್ರೀತ್ ಗೆ ರಾಷ್ಟ್ರಮಟ್ಟದ ಡಾ.ಅಬ್ದುಲ್ ಕಲಾಂ ಪ್ರಶಸ್ತಿ

ಮಾತೃಭೂಮಿ ಸೇವಾ ಟ್ರಸ್ಟ್(ರಿ.), ತುಮಕೂರು ಇವರು ಕೊಡಮಾಡುವ ರಾಷ್ಟ್ರಮಟ್ಟದ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಗೆ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದು ನ. 21ರಂದು ಮಾತೃಭೂಮಿ ಸೇವಾ ಟ್ರಸ್ಟ್(ರಿ.) ತುಮಕೂರು ಇದರ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಮಾನಿಕೆರೆ ಹತ್ತಿರ, ತುಮಕೂರು ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ...

ಶುಭವಿವಾಹ : ಪೂರ್ಣಿಮಾ ಪುಳಿಮರಡ್ಕ- ಹರೀಶ್ ಬಾಂಜಿಕೋಡಿ

ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಪುಳಿಮರಡ್ಕ ಮೋನಪ್ಪ ಗೌಡರ ಪುತ್ರಿ ಪೂರ್ಣಿಮಾರವರ ವಿವಾಹವು ಐರ್ವನಾಡು ಗ್ರಾಮದ ಬಾಂಜಿಕೋಡಿ ಗಣಪಯ್ಯ ಗೌಡರ ಪುತ್ರ ಹರೀಶ್ ರೊಂದಿಗೆ ನ.12ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಬವನದಲ್ಲಿ ನಡೆಯಿತು.

ಗುತ್ತಿಗಾರು : ನ.22 ರಂದು ಚಿಣ್ಣರ ಮನೆ ಶುಭಾರಂಭ

ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ನ.22 ರಂದು ಚಿಣ್ಣರ ಮನೆ ಶುಭಾರಂಭಗೊಳ್ಳಲಿದೆ. ಇಲ್ಲಿ 2 ವರ್ಷ ಮೇಲ್ಪಟ್ಟ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಸಂಸ್ಕಾರದೊಂದಿಗೆ ಆಟಪಾಟ ಕಲಿಕೆ, ಯೋಗ, ಸಾತ್ವಿಕ ಊಟ ಉಪಹಾರ ನೀಡಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಮಕ್ಕಳನ್ನು ಸೇರ್ಪಡೆಗೊಳಿಸಲಿಚ್ಚಿಸುವವರು ಸಂಪರ್ಕಿಸಬಹುದು ಮೊ :8073117026, 9480189590
Loading posts...

All posts loaded

No more posts

error: Content is protected !!