Ad Widget

ಸಂಪಾಜೆ ಸೊಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ಕೊಡುಗೆ

ಸoಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘ ನಿ. ಇದರ ವತಿಯಿ೦ದ ಸ೦ಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರಾಗಿ ದುಡಿಯುತ್ತಿರುವ ಐದು ಮ೦ದಿ ಆಶಾ ಕಾರ್ಯಕರ್ತರಿಗೆ ಅವರ ಸೇವೆಯನ್ನು ಗುರುತಿಸಿ 1ಲೀ. ನ ಪ್ಲಾಸ್ಕ್ ಹಾಗೂ ಬ್ಯಾಗ್ ವಿತರಿಸಲಾಯಿತು. ಅಲ್ಲದೇ ಸ೦ಘದ ಅಧ್ಯಕ್ಷರಾದ ಸೋಮಶೇಖರ ಕೊಯಿ೦ಗಾಜೆಯವರು ಸ೦ಘದ ವತಿಯಿ೦ದ ಹಾಟ್ ಕೇಸನ್ನು ನೀಡುವ ಬಗ್ಗೆ ಭರವಸೆ...

ಕ್ಯಾಂಪ್ಕೊ ಇಂದಿನ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(16.06.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 260 - 305ಹಳೆ ಅಡಿಕೆ 265 - 325ಡಬಲ್ ಚೋಲ್ 265 - 325 ಫಠೋರ 200 - 250ಉಳ್ಳಿಗಡ್ಡೆ 110 - 155ಕರಿಗೋಟು 110 - 145 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
Ad Widget

ಯಾರದೋ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ ವ್ಯಾಪಾರಕ್ಕೆ ನಷ್ಟವಾಗುತ್ತಿದೆ- ಕ್ವಾರಂಟೈನ್ ಗೊಳಪಟ್ಟ ತಳೂರು ನಿವಾಸಿಯೊಬ್ಬರ ಅಳಲು

ಅರಂತೋಡಿನಲ್ಲಿ ಇವರು ಹೋಗಿದ್ದ ವಿವಾಹ ಸಮಾರಂಭಕ್ಕೆ ಕೊರೊನ ಪಾಸಿಟಿವ್ ಇದ್ದವರ ಭೇಟಿ ಮಾಡಿದ್ದ ವ್ಯಕ್ತಿಯೊಬ್ಬರು ಬಂದಿದ್ದಾರೆಂದು ಪ್ರಚಾರವಾಗಿತ್ತು. ಇದನ್ನು ಕೇಳಿ ಇವರಿಗೆ ಆಘಾತ ತಂದಿತ್ತು. ಮದುವೆಗೆ ಹೋದವರನ್ನೆಲ್ಲಾ ಕ್ವಾರಂಟೈನ್ ಮಾಡಬೇಕೆಂಬ ಆದೇಶ ಬಂದ ಹಿನ್ನೆಲೆಯಲ್ಲಿ ಸುಮಾರು 50 ಕ್ಕೂ ಮಿಕ್ಕಿ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೇ ಯಾರದೋ ತಪ್ಪಿಗೆ,ಇಲಾಖೆಯ ತಪ್ಪಿಗೋ, ಲ್ಯಾಬ್ ನವರ ತಪ್ಪಿಗೋ...

ಅಕ್ರಮ ದನ ಸಾಗಾಟ ಪಿಕಪ್ ವಾಹನದೊಂದಿಗೆ ಮೂವರು ಪೊಲೀಸರ ವಶಕ್ಕೆ

ಸುಳ್ಯದ ನಾವೂರು ಎಂಬಲ್ಲಿಂದ ಎರಡು ದನ ಹಾಗೂ ಒಂದು ಹೋರಿಯನ್ನು ಪಿಕಪ್ ವಾಹನದಲ್ಲಿ ದುಗಲಡ್ಕ ಮಾರ್ಗವಾಗಿ ಕಡಬಕ್ಕೆ ಜೂನ್ 15ರಂದು ಸಂಜೆ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ವಿಷಯದ ಖಚಿತ ಮಾಹಿತಿ ತಿಳಿದ ದುಗಲಡ್ಕ ಪರಿಸರದ ಯುವಕರು ವಾಹನವನ್ನು ತಡೆದು ಪಿಕಪ್ ನಲ್ಲಿದ್ದ ಮೂವರನ್ನು ವಿಚಾರಿಸಿ ಥಳಿಸಿದರೆನ್ನಲಾಗಿದೆ. ವಿಷಯ ತಿಳಿದು ಸುಳ್ಯ ಪೋಲಿಸರು ಸ್ಥಳಕ್ಕೆ ಧಾವಿಸಿ...

ಕೈ ಸುಡುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ – ಸತತ ಏರಿಕೆಯಿಂದ ಗ್ರಾಹಕ ಕಂಗಾಲು

ಕೊರೊನಾ ಲಾಕ್ ಡೌನ್ ಬಳಿಕ ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ರೇಟ್ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ ಇಂದು 59 ಪೈಸೆ ಹಾಗೂ ಡೀಸೆಲಿಗೆ 58 ಪೈಸೆ ಏರಿದ್ದು ರಾಜಧಾನಿ ದೆಹಲಿಯಲ್ಲಿ ಕ್ರಮವಾಗಿ ಪೆಟ್ರೋಲಿಗೆ 75.16 ರೂಪಾಯಿ ಹಾಗೂ ಡೀಸೆಲಿಗೆ 73.39 ರೂಪಾಯಿ ಆಗಿದೆ.ಹಾಗೆಯೇ ಮುಂಬೈನಲ್ಲಿ ಈ ದರ ಕ್ರಮವಾಗಿ 82.10 ಹಾಗೂ 72.03...

ವಿಜಯ್ ನಿಡಿಂಜಿ- ವೀಣಾ

ಮಡಿಕೇರಿ ತಾ. ಯು.ಚೆಂಬು ಗ್ರಾಮದ ನಿಡಿಂಜಿ ಬಾಲಕೃಷ್ಣ ರವರ ಪುತ್ರ ವಿಜಯ ರವರ ವಿವಾಹವು ಮಡಿಕೇರಿ ತಾ. ಗಾಳಿಬೀಡು ಗ್ರಾಮದ ಪೂವಯ್ಯರವರ ಪುತ್ರಿ ವೀಣಾ ರೊಂದಿಗೆ ಜೂ. 14 ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ದರ್ಖಾಸು ಸೇತುವೆ ಮೆಳೈಸಿದ ರಾಜಕೀಯ : ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಡೆದ ಉದ್ಘಾಟನೆ – ಬಿಜೆಪಿಯಿಂದ ಕೂಡ ಉದ್ಘಾಟನೆ ಇದೆಯೇ ?

ಆಲೆಟ್ಟಿ ಗ್ರಾಮದ ದರ್ಖಾಸು ಸೇತುವೆ ಪ್ರಾರಂಭದಿಂದ ಹಿಡಿದು ಉದ್ಘಾಟನೆ ವೇಳೆವರೆಗೂ ರಾಜಕೀಯ ಮೆಳೈಸಿತು.ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಡೆದ ಉದ್ಘಾಟನೆ ನಡೆದಿದೆ.ಇನ್ನೂ ಬಿಜೆಪಿ ಅಥವಾ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೂಡ ಉದ್ಘಾಟನೆ ಇದೆಯೇ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ತೊಟಕೊಚ್ಚಿ ಪುತ್ಯ ರಸ್ತೆಯ ದರ್ಖಾಸು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ...

ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ ಸುಳ್ಯದ ಮುಖಂಡರ ಜೊತೆ ಚರ್ಚೆ

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಯವರು ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ ಬಳಿಕ ಸುಬ್ರಮಣ್ಯದ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸುಳ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದರು. ಸಾಮಾಜಿಕ ಜಾಲತಾಣ ಹಾಗು ಡಿ ಕೆ ಶಿವಕುಮಾರ್ ರವರ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣದ ತಾಲೂಕಿನಲ್ಲಿ ನಡೆಯುತ್ತಿರುವ ಸಿದ್ಧತೆಗಳ ಕುರಿತು ಚರ್ಚಿಸಿದರು ....

ಅರ್ಗುಡಿ ಸದಾಶಿವ ದೇವಸ್ಥಾನದ ರಸ್ತೆ ಶ್ರಮದಾನ

ಬೇಂಗನಡ್ಕ ಅರ್ಗುಡಿ ಸದಾಶಿವ ದೇವಸ್ಥಾನ ರಸ್ತೆಯನ್ನು ಶ್ರಮದಾನದ ಮೂಲಕ ಗ್ರಾಮಸ್ಥರು ದುರಸ್ತಿಗೊಳಿಸಿದರು.

ಗುರುವಾರದ ವರೆಗೆ ಮುಂಗಾರು ದುರ್ಬಲ

ಗುಜರಾತ್ ಮತ್ತು ಮುಂಬಯಿ ಸಮುದ್ರ ತೀರದ ಬಳಿ ವಾಯುಭಾರ ಕುಸಿತದ ಲಕ್ಷಣಗಳಿವೆ. ಇನ್ನು 2 ದಿನಗಳಲ್ಲಿ ಮುಂಬೈ ಭಾರಿ ಮಳೆಯ ಮುನ್ಸೂಚೆನೆ ಇದೆ. ಕರ್ನಾಟಕ ಹಾಗೂ ಕೇರಳ ಕರಾವಳಿ ಭಾಗಗಳಲ್ಲಿ ಜೂನ್ 18 ರವರೆಗೆ ಮುಂಗಾರು ದುರ್ಬಲ ಇರಬಹುದು ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!