- Thursday
- July 23rd, 2026
ಗಗನ್ ಸ್ಟುಡಿಯೋ ಸ್ಥಳಾಂತರಗೊಂಡು ಸುಳ್ಯದಲ್ಲಿ ಶುಭಾರಂಭಸುಬ್ರಹ್ಮಣ್ಯ ದಲ್ಲಿ ಕಾರ್ಯಚರಿಸುತ್ತಿದ ಗಗನ್ ಸ್ಟುಡಿಯೋ ಸ್ಥಳಾಂತರಗೊಂಡು ಸುಳ್ಯದ ಅಂಬಟೆಡ್ಕ ದಲ್ಲಿರುವ ಜಾನಕಿ ಕಾಂಪ್ಲೆಕ್ಸ್ ನಲ್ಲಿ ಜು. 2 ರಂದು ಶುಭಾರಂಭಗೊಂಡಿತು. ಮಾಲಕರಾದ ಗಗನ್ ದೀಪ್ ನಡುಮನೆ, ಆಗಮಿಸಿ ಶುಭಹಾರೈಸಿದ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು
ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 25 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ಯಾಹ್ನದ ವೇಳೆಗೆ ಕೆಲಸಕ್ಕೆ ಆಗಮಿಸಿದ್ದ ಈ ಯುವಕ ಶೌಚಾಲಯದ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ -19 ಸಹಾಯವಾಣಿ ತೆರೆಯಲಾಗಿದೆ ಯಾವುದಾದರೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬಹುದಾಗಿದೆ. 948086238399451003319663668458
ಪೈಂಬೆಚ್ಚಾಲು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಕಲಿಯುತ್ತಿರುವ, ಪೈಂಬೆಚ್ಚಾಲಿನ ಅರ್ಹ ಕುಟುಂಬಗಳ ಇಪ್ಪತ್ತೆರಡು ವಿದ್ಯಾರ್ಥಿಗಳಿಗೆ, ಮುಸ್ಹಫ್, ಕಿತಾಬ್, ನೋಟ್ ಬುಕ್ ಗಳನ್ನೊಳಗೊಂಡ ಕಲಿಕೋಪಕರಣಗಳಿಗೆ, ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಹತ್ತು ಸಾವಿರ ರೂಪಾಯಿಗಳ ಸಹಾಯಧನ ವನ್ನು, ಜುಲೈ ೩ ರಂದು, ಬಿಜೆಎಂ ವಠಾರದಲ್ಲಿ ಮದ್ರಸ ಸದರ್ ಉಸ್ತಾದ್ ಅಲ್ ಹಾಜ್ ಬಿ.ಯಂ.ಇಸ್ಮಾಯಿಲ್ ಸಖಾಫಿ ಯವರಿಗೆ ಹಸ್ತಾಂತರಿಸಲಾಯಿತು....
ಬೇಲೂರು ವೀಕ್ಷಕರಾಗಿ ನೇಮಕಗೊಂಡಿದ್ದ ಧನಂಜಯ ಅಡ್ಪಂಗಾಯ ಡಿಕೆಸಿ ಪದಗ್ರಹಣ ಅಂಗವಾಗಿ ನಡೆದ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಬೇಲೂರು ಯುವ ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ, ಪಂಚಾಯತ್ ಸದಸ್ಯ ಕೃಷ್ಣೇಗೌಡ ಹಾಗೂ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ನೆಲ್ಲೂರು ಕೆಮ್ರಾಜೆ ಪಂಚಾಯತ್ ಗೆ ಆಡಳಿತಾಧಿಕಾರಿಯಾಗಿ ರಶ್ಮಿ ಕೆ.ಎಂ. ಅಧಿಕಾರ ಸ್ವೀಕಾರನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಗೆ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿ ರಶ್ಮಿ ಕೆ.ಎಂ. ಅಧಿಕಾರ ಸ್ವೀಕರಿಸಿದರು. ಇವರನ್ನು ಗ್ರಾಮ ಪಂಚಾಯತ್ ಪಿ. ಡಿ. ಓ ,ಅಧ್ಯಕ್ಷರು ಹಾಗೂ ಸಿಬ್ಬಂದಿಗಳು ಸ್ವಾಗತಿಸಿದರು.
ದೇವಚಳ್ಳ ಗ್ರಾಮ ಪಂಚಾಯತ್ ಗೆ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿ ರಶ್ಮಿ ಕೆ.ಎಂ. ಅಧಿಕಾರ ಸ್ವೀಕರಿಸಿದರು. ಇವರನ್ನು ಗ್ರಾಮ ಪಂಚಾಯತ್ ಪಿ. ಡಿ. ಓ ಕಾವ್ಯ ಹಾಗೂ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ ಪುಷ್ಪಗುಚ್ಚ ನೀಡಿ ಸ್ವಾಗತಿಸಿ, ಸಿಬ್ಬಂದಿ ವರ್ಗವನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಗ್ರಾಮ...
ಸಂಪಾಜೆ ಅರಮನೆತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಈ ಹಿಂದೆ ಕೊರೊನಾ 19 ನಿಷೇಧಾಜ್ಞೆಯಿಂದಾಗಿ ಮೇ 10 ಮತ್ತು ಮೇ 11 ರಂದು ವರ್ಷಾಂಪ್ರತಿ ನಡೆಯಬೇಕಾಗಿದ್ದ ಕಾಲಾವಧಿ ಒತ್ತೆಕೋಲ ಉತ್ಸವ ನಡೆಸಲು ಸಾಧ್ಯವಾಗಲಿಲ್ಲದ್ದರಿಂದ ದೈವಜ್ಞರ ಸಲಹೆಯಂತೆ ತಂಬಿಲ ಕಾರ್ಯಕ್ರಮವನ್ನು ಶಾಸ್ತ್ರ ಬದ್ಧವಾಗಿ ಶ್ರೀ ದೇವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶ್ರೀ ಕಳಗಿ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(03.07.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ನವದೆಹಲಿ: ದೇಶದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಕೊರೊನಾ ಸೋಂಕು ತೀವ್ರ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಹಲವು ಔಷಧಗಳು ಕೊರೊನಾ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ ಎನ್ನಲಾಗಿದ್ದು, ಅವುಗಳ ಬಳಕೆಗೆ ಅವಕಾಶ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಆಗಸ್ಟ್ 15 ರಂದು ಭಾರತೀಯ ಕೊರೊನಾ ತಡೆ ಔಷಧಿ ಬಿಡುಗಡೆ ಮಾಡಲಾಗುವುದು ಎಂದು...
Loading posts...
All posts loaded
No more posts
