ಜುಲೈ 15ರ ರಾತ್ರಿ 8ರಿಂದ – ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ : ಜಿಲ್ಲಾಧಿಕಾರಿ ಆದೇಶ ವೈದ್ಯಕೀಯ ಸೇವೆ ನಿರಂತರ, ದಿನಸಿ,ತರಕಾರಿ ಹಾಲು, ಪೇಪರ್ ಗೆ ಸಮಯ ನಿಗದಿ

ಜುಲೈ 15ರ ರಾತ್ರಿ 8ರಿಂದ ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ ಆದೇಶ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಸೇವೆ ನಿರಂತರ, ಅಗತ್ಯ ವಸ್ತುಗಳಾದ ದಿನಸಿ,ತರಕಾರಿ ಹಾಲು, ಪೇಪರ್ ಪಡೆಯಲು ಬೆಳಿಗ್ಗೆ 8 ರಿಂದ ಪೂ. 11 ಗಂಟೆಯವರೆಗೆ ನಿಗದಿ ಪಡಿಸಲಾಗಿದೆ. ಇನ್ನುಳಿದ ಬೇರೆ ಅಂಗಡಿಗಳು ಬಂದ್ ಆಗಲಿದೆ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(14.07.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 285 - 340(340 JJ ಕ್ವಾಲಿಟಿ ಅಡಿಕೆಗೆ ಮಾತ್ರ) ಹಳೆ ಅಡಿಕೆ 285 - 330 - 348(350 ಕ್ವಾಲಿಟಿ ಅಡಿಕೆಗೆ ಮಾತ್ರ) ಡಬಲ್ ಚೋಲ್ 285 - 348 ಹಳೆ ಫಠೋರ 200 - 275ಹೊಸ ಫಠೋರ 200 - 275...
Ad Widget

ಪಿಯುಸಿ ಫಲಿತಾಂಶ : ದ.ಕ, ಉಡುಪಿ ಸಮಬಲ -ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಶೇ 90.71 ಫಲಿತಾಂಶ ಪಡೆದಿದ್ದು, ಆದ್ದರಿಂದ ಎರಡು ಜಿಲ್ಲೆ ಪ್ರಥಮ ಸ್ಥಾನ ಪಡೆದಂತಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪರೀಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ 👇 http://www.karresults.nic.in/indexPUC_2020.asp

ಮರ್ಕಂಜ ಯುವ ಕಾಂಗ್ರೆಸ್ : ಅಧ್ಯಕ್ಷ ಚರಣ್ ಕಾಯರ- ಕಾರ್ಯದರ್ಶಿ ಆದರ್ಶ ಪಾರೆಪ್ಪಾಡಿ

ಆದರ್ಶ ಪಾರೆಪ್ಪಾಡಿ ಮರ್ಕಂಜ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿ ಯುವ ನ್ಯಾಯವಾದಿ ಚರಣ್ ಕಾಯರ ಹಾಗೂ ಕಾರ್ಯದರ್ಶಿ ಯಾಗಿ ಆದರ್ಶ ಪಾರೆಪ್ಪಾಡಿ ಆಯ್ಕೆಯಾಗಿದ್ದಾರೆ.

ಮರ್ಕಂಜ ಗ್ರಾಮ ಕಾಂಗ್ರೆಸ್ ಸಮಿತಿ ರಚನೆ – ಅಧ್ಯಕ್ಷ ಪುಷ್ಪರಾಜ್ ರೈ , ಕಾರ್ಯದರ್ಶಿ ರಮೇಶ್ ಬೂಡು

ಮರ್ಕಂಜ ಗ್ರಾಮ ಕಾಂಗ್ರೆಸ್ ಸಮಿತಿ ಹಾಗು ಕಾರ್ಯಕರ್ತರ ಸಭೆಯನ್ನು ಮಿಯೊನಿ ಕೊರಗಪ್ಪ ಗೌಡ ರವರ ಮನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಯನ್ ಜಯಪ್ರಕಾಶ್ ರೈ ರವರ ನೇತೃತ್ವದಲ್ಲಿ ನಡೆಯಿತು . ನೂತನ ಗ್ರಾಮ ಕಾಂಗ್ರೆಸ್ ಸಮಿತಿ ಅದ್ಯಕ್ಷರಾಗಿ ಪುಷ್ಪರಾಜ್ ರೈ , ಕಾರ್ಯದರ್ಶಿಯಾಗಿ ರಮೇಶ್ ಬೂಡು , ಗೌರವಾಧ್ಯಕ್ಷರಾಗಿ ನಾಗ್ ಕುಮರ್ ಶೆಟ್ಟಿ ,...

ಸಂವಿಧಾನ ಶಿಲ್ಪಿಗೆ ಅಪಮಾನ – ಸಂಪಾಜೆ ದಲಿತ ಸಂಘರ್ಷ ಸಮಿತಿ ಖಂಡನೆ

ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು, ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಭಾವನೆಗಳನ್ನು ಭಾರತದ ಪ್ರಜೆಗಳಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನವನ್ನು ಅಪಮಾನಿಸುವ ಮನಸ್ಥಿತಿಯವರು ಈ ಕಾಲದಲ್ಲೂ ಇದ್ದಾರೆ ಎಂಬುದು ಅತಂಕಕಾರಿ ವಿಷಯವಾಗಿದೆ.ಶಿಕ್ಷಣ ಸಂಘಟನೆ, ಹೋರಾಟ ಎಂಬ ಮೂರು ಧ್ಯೇಯವನ್ನು...

ಆದರ್ಶ ಗ್ರಾಮದಲ್ಲಿ ಆದರ್ಶ ಮೆರೆದ ಯುವಬ್ರಿಗೇಡ್ – ಅಂಧ ಕೂಲಿ ಕಾರ್ಮಿಕನಿಗೆ ಅರಮನೆ ಹಸ್ತಾಂತರ ಮಾಡಿದ ಚಕ್ರವರ್ತಿ

ಟಾರ್ಪಲ್ ಹಾಸಿದ ಜೋಪಡಿಯಲ್ಲಿ ವಾಸಿಸುತ್ತಿದ್ದ ಅಂಧವ್ಯಕ್ತಿಗೆ ಇಂದು ಅರಮನೆ ಸಿಕ್ಕಂತಹ ಸಂತೋಷ. ಆ ವ್ಯಕ್ತಿಯೇ ಕಡಬ ತಾಲೂಕಿನ  ಕೇನ್ಯ ಗ್ರಾಮದ ಪೆರ್ಲಕಟ್ಟೆ ನಿವಾಸಿ ಲಿಂಗು.  ಇವರ ಸಂತೋಷಕ್ಕೆ ಕಾರಣಕರ್ತರಾಗಿದ್ದು ರಾಷ್ಟೀಯತೆಯನ್ನು ಉಸಿರಾಗಿಸಿಕೊಂಡು ಹೆಮ್ಮರವಾಗಿ ಬೆಳೆದಿರುವ ದೇಶಾಭಿಮಾನಿಗಳ ಯುವ ತಂಡ ಯುವ ಬ್ರೀಗೇಡ್. ಯುವ ಬ್ರೀಗೇಡ್ ತಂಡದೊಂದಿಗೆ ಚಕ್ರವರ್ತಿ ಅಂಧವ್ಯಕ್ತಿಯಾಗಿದ್ದರೂ ಆತನದ್ದು ಸ್ವಾವಲಂಬಿ ಸ್ವಾಭಿಮಾನದ ಬದುಕು. ಜೊತೆಯಲ್ಲಿ...

ಜೆಸಿಬಿ , ಹಿಟಾಚಿ ವಾಹನಗಳಿಗೆ ಮಾಲಕರ ಬಾಡಿಗೆ ಏರಿಕೆ ನಿರ್ಧಾರ, ಜನ ಸಾಮಾನ್ಯರ ಮೇಲೆ ಗಾಯದ ಮೇಲೆ ಬರೆ ಎಳೆದಂತೆ – ಎಂ ವೆಂಕಪ್ಪ ಗೌಡ

ಜೆಸಿಬಿ , ಹಿಟಾಚಿ ವಾಹನಗಳಿಗೆ ಮಾಲಕರ ಬಾಡಿಗೆ ಏರಿಕೆ ನಿರ್ಧಾರ, ಜನ ಸಾಮಾನ್ಯರ ಮೇಲೆ ಗಾಯದ ಮೇಲೆ ಬರೆ ಎಳೆದಂತೆ, ಎಂ ವೆಂಕಪ್ಪ ಗೌಡಜನಸಾಮಾನ್ಯರು ಈಗಾಗಲೇ ಕೊರೋನ ಮಹಾಮಾರಿ ವೈರಸ್ ಗೆ ತತ್ತರಿಸಿಹೋಗಿದ್ದು ಇದೇ ಸಂದರ್ಭದಲ್ಲಿ ಜೆಸಿಬಿ, ಹಿಟಾಚಿ ವಾಹನ ಚಾಲಕ ಮಾಲಕ ಸಂಘದವರು ಸಭೆಯನ್ನು ನಡೆಸಿ ಬಾಡಿಗೆ ಹೆಚ್ಚಿಗೆ ಮಾಡಲು ನಿರ್ಧಾರ ಮಾಡಿರುವಂತದ್ದು ಗಾಯದ...

*ಡಯಾಲಿಸಿಸ್ ಗೆ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಎಸ್.ಎಸ್ ಎಫ್ ಸಲ್ಲಿಸಿದ ಮನವಿಗೆ ತುರ್ತು ಸ್ಪಂದನೆ*

ಕೋವಿಡ್- 19 ಮಹಾವ್ಯಾಧಿಯು ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪಾಸಿಟಿವ್ ವರದಿ ಬಂದು ಆಸ್ಪತ್ರೆಯು ಸೀಲ್ ಡೌನ್ ಆಗಿದ್ದರಿಂದ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದ ಸುಮಾರು 33ರಷ್ಟು ಡಯಾಲಿಸೀಸ್ ರೋಗಿಗಳು ಅತಂತ್ರ ಸ್ಥಿತಿಗೊಳಗಾಗಿದ್ದಾರೆ. ಈ ಬಗ್ಗೆ ತಕ್ಷಣ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯು ಮಾನ್ಯ ತಾಲೂಕು ವೈದ್ಯಾಧಿಕಾರಿಯವರಿಗೆ ತುರ್ತು ಕ್ರಮಕೈಗೊಂಡು ಬದಲಿ ವ್ಯವಸ್ಥೆ ಕಲ್ಪಿಸುವಂತೆ...

ಕಲ್ಲುಗುಂಡಿ ಮಹಿಳೆಗೆ ಚೂರಿ ಇರಿತ

ಕಲ್ಲುಗುಂಡಿಯ ಕಡೆಪಾಲ ಸಮೀಪ ಮಹಿಳೆಗೆ ಯುವಕನೋರ್ವ ಚೂರಿ ಇರಿದ ಘಟನೆ ಇದೀಗ ನಡೆದಿದೆ. ಜಾಗದ ವಿವಾದ ಈ ಘಟನೆ ಕಾರಣವೆನ್ನಲಾಗಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!