Ad Widget

ಸಂಪಾಜೆ ಬರೆ ಕುಸಿತ – ಅಪಾಯದಲ್ಲಿ ಮನೆ

ಸಂಪಾಜೆ ಗ್ರಾಮದ ದರ್ಖಾಸು ಸುಶೀಲ ಎಂಬವರ ಮನೆಯ ಸಮೀಪ ಬರೆ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ. ಸಮೀಪದಲ್ಲಿ ಪಂಚಾಯತ್ ರಸ್ತೆ ಹಾದುಹೋಗುತ್ತಿದ್ದು ರಸ್ತೆ ಬದಿ ಬರೆ ಕುಸಿದಿರುವುದರಿಂದ ಮನೆಯ ಅಡಿಪಾಯದ ವರೆಗೆ ನೆಲ ಬಿರುಕು ಬಿಟ್ಟಿದೆ. ಈ ಬಗ್ಗೆ ಪಂಚಾಯತ್ ಹಾಗೂ ತಾಲೂಕು ಆಡಳಿತ ಆನಾಹುತ ಸಂಭವಿಸುವ ಮೊದಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ.

ಹೆಬ್ಬಾವನ್ನು ನಾಡಿನಿಂದ ಕಾಡಿಗೆ ತಲುಪಿಸಿದ ಸ್ನೇಕ್ ಮಾಸ್ಟರ್ ಶಿವ ಪ್ರಸಾದ್ ತಂಡ

ಜು.9 ರಂದು ರಾತ್ರಿ ಬೆಳ್ಳಾರೆ ಸಮೀಪದ ಕಳಂಜದ ಗ್ರಾಮದ ಪಟ್ಟೆಯ ಮುಹಮ್ಮದ್ ಎನ್ ಅವರ ಮನೆಗೆ ಹೆಬ್ಬಾವು ಬಂದಿದ್ದ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಳಂಜದ ಸ್ನೇಕ್ ಮಾಸ್ಟರ್ ಶಿವ ಪ್ರಸಾದ್ ಮತ್ತು ಆ ತಂಡದ ಸದಸ್ಯರಾದ ಸುಧೀರ್, ನಾಸಿರ್, ವಿಶ್ವ , ಸತೀಶ್ ಆರ್ಟ್ ರೂಟ್ ಸೇರಿ ಹೆಬ್ಬವನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.ನಂತರ ನಝೀರ್ ಗ್ಯಾಲಕ್ಸಿ ,...
Ad Widget

ಕೊಡಗಿನಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ – ಇಂದು 26 ಹೊಸ ಪ್ರಕರಣ ಪತ್ತೆ

ಕೊಡಗಿನಲ್ಲಿ ಒಟ್ಟು ಸೋಂಕಿತರು 122 ಕ್ಕೆ ಏರಿದ್ದು ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಗುಣಮುಖರಾದರು 16 ಹಾಗಿದ್ದರೆ ಸಕ್ರಿಯ ಪ್ರಕರಣ -105 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಕಂಟೈನ್ಮೆಂಟ್ ವಲಯ 58 ಆಗಿದ್ದು ಇದುವರೆಗೆ ಕೋರೋಣ ವೈರಸ್ ನಿಂದ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ.

ಸಂಪಾಜೆ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಗಳಿಗೂ ಕೊರೊನಾ ಪಾಸಿಟಿವ್

ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಗಳಿಗೂ ಕೊರೋನಾ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ. 21 ವರ್ಷದ ಪುರುಷ ಹಾಗೂ 30 ವರ್ಷದ ಮಹಿಳಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನಲೆಯಲ್ಲಿ ಸಂಪಾಜೆ ಆರೋಗ್ಯ ಕೇಂದ್ರದ ಕ್ವಾಟ್ರಸ್ ಹಾಗೂ ಸಂಪಾಜೆಯ ಕುಟ್ಟಾಳು ಸ್ಥಳವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಿ, ಸೀಲ್ ಡೌನ್ ಮಾಡಲಾಗಿದೆ.ಸುಳ್ಯ ಸರ್ಕಾರಿ ಆಸ್ಪತ್ರೆಯ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(09.07.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 330ಹಳೆ ಅಡಿಕೆ 275 - 345ಡಬಲ್ ಚೋಲ್ 285 - 345 ಫಠೋರ 220 - 270ಉಳ್ಳಿಗಡ್ಡೆ 110 - 175ಕರಿಗೋಟು 110 - 165 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಸುಳ್ಯ ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಗಳ ಸಹಿತ 6 ಮಂದಿಗೆ ಕೊರೊನಾ ಪಾಸಿಟಿವ್

ಇಂದು, ನಾಳೆ ಆಸ್ಪತ್ರೆ ಸೀಲ್ ಡೌನ್ ; ಎರಡು ದಿನ ಆಸ್ಪತ್ರೆಗೆ ಬಾರದಿರಲು ವೈದ್ಯರ ಮನವಿ ಸುಳ್ಯ ಸರಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಸೇರಿ ಒಟ್ಟು ಆರು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೆಲ ದಿನಗಳ ಹಿಂದೆ ಆಸ್ಪತ್ರೆಯ ಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೊನಾ ಬಂದಿತ್ತು. ಬಳಿಕ ಅವರು ಮಂಗಳೂರಿಗೆ ಹೋಗಿದ್ದರು. ಆ ವ್ಯಕ್ತಿಗೆ...

ಜುಲೈ 9 ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಎಬಿವಿಪಿ ಆಚರಣೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ ಇದರ ಆಶ್ರಯದಲ್ಲಿ ಜು.9ರಂದು ರಾಷ್ಟೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತಿದೆ. ಜುಲೈ 9ರಂದು ಎಬಿವಿಪಿ ಯ ಸ್ಥಾಪನ ದಿನವಾಗಿದ್ದು ಹಲವಾರು ವರ್ಷಗಳಿಂದ ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಜು.9 ರಂದು ಪೂ.10 ಗಂಟೆಗೆ ವನದುರ್ಗಾ ದೇವಿ ದೇವಸ್ಥಾನದ...

ತೋಟಗಾರಿಕಾ ಸಸ್ಯ ಕ್ಷೇತ್ರದಲ್ಲಿ ಗಿಡಗಳು ಲಭ್ಯ

ಸುಳ್ಯದ ಹಳೆಗೇಟು ಸಮೀಪದ ಹೊಸಗದ್ದೆ ತೋಟಗಾರಿಕಾ ಸಸ್ಯಕ್ಷೇತ್ರದಲ್ಲಿ ಮಾವು ಹಾಗೂ ವಿವಿಧ ತೋಟಗಾರಿಕಾ ಗಿಡಗಳು ಲಭ್ಯವಿದೆ. ಮಲ್ಲಿಕಾ ಮಾವು (ರೂ.32), ಮೋಹಿತ್ ನಗರ ಅಡಿಕೆ ಗಿಡ (ರೂ 20), ಬಾಸ್ಕರ ಮತ್ತು ಉಳ್ಳಾಲ 3 ಗೇರು ಗಿಡ(ರೂ. 25), ತೆಂಗು WCK(ರೂ.60), F1 ಹೈಬ್ರಿಡ್ ಕೊಕ್ಕೋ (ರೂ10),ಕಾಳುಮೆಣಸು ಪಣಿಯೂರ (ರೂ.9) ಲಭ್ಯವಿದೆ ಎಂದು ತೋಟಗಾರಿಕಾ ಇಲಾಖಾ...

ದ ಕ ಇಂದು 183 ಮಂದಿಯಲ್ಲಿ ಸೋಂಕು ಪತ್ತೆ – 54 ಜನರ ಸೋಂಕಿನ ಮೂಲ ನಾಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 183 ಮಂದಿಗೆ ಕೊರೋನಾ ಸೋಂಕು ತಗಲಿದೆ . ಈ ಪೈಕಿ 54 ಮಂದಿಯ ಸೋಂಕಿನ ಮೂಲವನ್ನು ಪತ್ತೆಯಾಗಿಲ್ಲ. ಇದು ಆರೋಗ್ಯ ಇಲಾಖೆಯ ಹಾಗೂ ಜನಸಾಮಾನ್ಯರ ನಿದ್ರೆಗೆಡಿಸಿದೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1542 ಕ್ಕೇರಿದೆ. ಇಂದು 3 ಮಂದಿ ತೀವ್ರ ನಿಗಾ ಘಟಕದಲ್ಲಿದ್ದರೇ, ಪುತ್ತೂರಿನ ಬಾಣಂತಿ ಸಹಿತ ಮೂವರು ಬಲಿಯಾಗಿದ್ದಾರೆ....

ಕೌಡಿಚ್ಚಾರ್ ಸೇತುವೆಯಿಂದ ಕೆಳಗೆ ಬಿದ್ದ ಕಾರು

ಕೌಡಿಚ್ಚಾರ್ ಸೇತುವೆಯಿಂದ ಕಾರೊಂದು ಕೆಳಗೆ ಬಿದ್ದಿರುವ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿ ದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸಿದ್ದಿಕ್ ಪಲ್ಲತ್ತೂರು ಚಲಾಯಿಸುತ್ತಿದ್ದ ಆಲ್ಟೋ ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಚಾಲಕ ಹಾಗೂ ಜತೆಗಿದ್ದ ನಿಸಾರ್ ಬಾರೆಬೆಟ್ಟು ಅಲ್ಪಸ್ವಲ್ಪ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!