- Wednesday
- July 15th, 2026
ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಇದರ ಆಶ್ರಯದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಶಿಬಿರ ಸೆ. 17 ಗುರುವಾರದಂದು ಬೆ.ಗಂಟೆ 8 ರಿಂದ ಸಂಜೆ ಗಂಟೆ 5ರ ತನಕ ಕಂದ್ರಪ್ಪಾಡಿ ಶಾಲಾ ವಠಾರದಲ್ಲಿ ನಡೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಇಚ್ಚಿಸುವವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಯನ್ನು ತರಬೇಕು ಹಾಗೂ...
ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರು ಮಲ್ಲಾಡ್ ಕ್ಯಾಶ್ ಫ್ಯಾಕ್ಟರಿ ಮಾಲಕರು ಹಾಜಿ ಅಬ್ದುಲ್ಲಾ ಎಸ್ . ಸೆ .16 ರಂದು ಅಲ್ಪಕಾಲದ ಅಸೌಖ್ಯದಿಂದ ಗಾಂಧಿನಗರ ಗುರುಂಪು ಮನೆಯಲ್ಲಿ ನಿಧನರಾದರು . ಅಬ್ದುಲ್ಲಾ ರವರು ಹಲವಾರು ವರ್ಷಗಳ ಕಾಲ ಗಾಂಧಿನಗರ ಜುಮಾ ಮಸ್ಜಿದ್ ಇದರ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ಸುಮಾರು 40 ,45 ವರ್ಷಗಳಿಂದ ತಮ್ಮನ್ನು...
ಬೈರ ಯುವ ವೇದಿಕೆ ಇದರ ಆಶ್ರಯದಲ್ಲಿ ಏರ್ಪಡಿಸಿದ, 'ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಅಂಬೇಡ್ಕರ್ ಬಾಲ್ಯಜೀವನ ಹೇಗೆ ಸ್ಪೂರ್ತಿದಾಯಕ?' ಎಂಬ ವಿಷಯದ ಕುರಿತಾದ ಅಂಬೇಡ್ಕರ್ ಜೀವನಾಧಾರಿತ ಪ್ರಬಂಧ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ವಿನುತಾ ಪೈಲೂರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಗಿರಿಜ ಸುಬ್ಬ ಪೈಲೂರುರವರ ಮಗಳು,ಇವರು ಜೂನಿಯರ್ ಕಾಲೇಜು ಸುಳ್ಯದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ...
ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆನ್ ಲೈನ್ ಹಿಂದಿ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಡಾ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥ ಬೀದಿ, ಮಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ವತಿಯಿಂದ 2020 ರ ಹಿಂದಿ ದಿನಾಚರಣೆ ಪ್ರಯುಕ್ತ ಮೊದಲ ಬಾರಿಗೆ ಆನ್ ಲೈನ್ ಹಿಂದಿ ಭಾಷಣ...
ಸುಳ್ಯದ ಗುರು ಪ್ರಕಾಶ್ ಕೇಬಲ್ ನೆಟ್ ವರ್ಕ್ ಮಾಲಕ, ಹಿರಿಯ ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕ ಗುರುದತ್ ನಾಯಕ್ ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು.ಕಿಡ್ನಿ ಸಮಸ್ಯೆಯಿಂದ ಕೆಲ ಸಮಯದಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಆರಂಭಿಸಲಾಗಿತ್ತು. ವಾರದ ಹಿಂದೆ ಅಸೌಖ್ಯ ಉಲ್ಬಣಗೊಂಡಿತ್ತು. ಅವರ ಅಂತ್ಯ ಸಂಸ್ಕಾರ...
ಎಣ್ಮೂರು ಗ್ರಾಮದ ಅಲೆಂಗಾರದ ಯುವಕನೊಬ್ಬ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ .15 ರಂದು ನಡೆದಿದೆ . ಎಣ್ಮೂರು ಗ್ರಾಮದ ಅಲೆಂಗಾರ ಬಾಲಕೃಷ್ಣ ಗೌಡರ ಪುತ್ರ ಕಾರ್ತಿಕ್ ಮೃತಪಟ್ಟ ದುರ್ದೈವಿ . ಅವರಿಗೆ 25 ವರ್ಷ ವಯಸ್ಸಾಗಿತ್ತು . ಅವರು ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ತಿಳಿದುಬಂದಿದೆ....
ಚೆಂಬು ಸರಕಾರಿ ಪ್ರೌಡ ಶಾಲೆಯ ಹಿಂದಿ ಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಪಿ.ಎಸ್. ಅವರಿಗೆ ರಾಷ್ಟ್ರೀಯ ಹಿಂದಿ ದಿವಸ್ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಇವರು ಬೆಂಬು ನಿವಾಸಿ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾಗಿರುವ ಸುಬ್ರಮಣ್ಯ ಉಪಾಧ್ಯಾಯ ರವರ ಪತ್ನಿ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುತ್ಯ, ಮಂಡೆಕೋಲು ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಅಮೃತವಲ್ಲಿಯವರು ಪದೋನ್ನತಿ ಹೊಂದಿದ್ದು, ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿಗೆ ವಿಜ್ಞಾನ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ. ಸುಮಾರು 12 ವರ್ಷಗಳ ಸೇವೆಯ ಬಳಿಕ ಇದೀಗ ಪ್ರೌಢಶಾಲೆಗೆ ಭಡ್ತಿಗೊಂಡಿದ್ದಾರೆ. 11.06.2008 ರಂದು ಸ.ಕಿ.ಪ್ರಾ. ಶಾಲೆ ಪುತ್ಯ ಮಂಡೆಕೋಲು ಇಲ್ಲಿ ಸಹಶಿಕ್ಷಕಿಯಾಗಿ ಸೇವೆ...
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಇಂದಿರಾವತಿ.ಕೆ ಯವರು ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪ್ರೌಢಶಾಲೆ ಸಂಪಾಜೆ ಇಲ್ಲಿಗೆ ಹಿಂದಿ ಭಾಷಾ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ.21.02.2004 ರಲ್ಲಿ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಳ ಇಲ್ಲಿ ಸಹಶಿಕ್ಷಕಿಯಾಗಿ ಸೇವೆಗೆ ನಿಯೋಜನೆಯಾಗಿ 7 ವರ್ಷಗಳ ಸೇವೆಯನ್ನು...
Loading posts...
All posts loaded
No more posts
